ಕಾಲೇಜುಗಳು ಆರಂಭವಾದರೂ ತರಗತಿ ಕೊಠಡಿಗಳು ಖಾಲಿ: ಪರೀಕ್ಷೆಗೆ ವಿದ್ಯಾರ್ಥಿಗಳು ತಯಾರಿ

ರಾಯಚೂರು: ಕೊರೊನಾ ಪ್ರಕರಣ ಕಡಿಮೆಯಾಗುತ್ತಿರುವ ಹಿನ್ನೆಲೆ ನಿನ್ನೆಯಿಂದ ಪದವಿ, ಡಿಪ್ಲೊಮಾ, ಬಿಇ ಕಾಲೇಜುಗಳು ಆರಂಭವಾಗಿವೆ. ಆದರೆ ಜಿಲ್ಲೆಯಲ್ಲಿ ಕಾಲೇಜು ಆರಂಭಗೊಂಡರು ಪದವಿ ತರಗತಿಗೆ ವಿದ್ಯಾರ್ಥಿಗಳು ಬರುತ್ತಿಲ್ಲ. ತರಗತಿ ಆರಂಭಿಸುವಂತೆ ಸರ್ಕಾರ ಆದೇಶ ಮಾಡಿದೆ. ಇದೇ ವೇಳೆ ಗುಲಬರ್ಗಾ ವಿಶ್ವವಿದ್ಯಾಲಯ ಪರೀಕ್ಷಾ ದಿನಾಂಕ ಪ್ರಕಟಿಸಿದೆ. ಪದವಿ ಪರೀಕ್ಷೆಗಳು ಇರುವುದರಿಂದ ತರಗತಿಗೆ ವಿದ್ಯಾರ್ಥಿಗಳು ಬರುತ್ತಿಲ್ಲ.

ಇನ್ನೂ ಇಂಜಿನೀಯರಿಂಗ್ ವಿದ್ಯಾರ್ಥಿಗಳಿಗೆ ಪರೀಕ್ಷೆ ಆರಂಭವಾಗಿದೆ. ಹೀಗಾಗಿ ಸರ್ಕಾರದ ಆದೇಶದಂತೆ ಎಲ್ಲಾ ಕ್ಲಾಸ್ ರೂಂನಲ್ಲಿ ಸ್ಯಾನಿಟೈಜನರ್ ವ್ಯವಸ್ಥೆ ಸೇರಿ ಕೋವಿಡ್ ನಿಯಮ ಪಾಲನೆ ಮಾಡುವ ಮೂಲಕ ಪರೀಕ್ಷೆ ನಡೆಸಲಾಗುತ್ತಿದೆ. ಪರೀಕ್ಷೆಗೆ ಬರುವ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಹಾಗೂ ಕೋವಿಡ್ ನಿಯಮ ಪಾಲನೆ ಮಾಡಲು ಸೂಚನೆ ನೀಡಲಾಗಿದೆ.

ಕಾಲೇಜಿನಲ್ಲಿಯೂ ಸಹ ಸಾಮಾಜಿಕ ಅಂತರ ಕಾಪಾಡಲು ಮಾರ್ಕ್ ಮತ್ತು ಆರೋಗ್ಯ ತಪಾಸಣೆ ಕಡ್ಡಾಯ ಮಾಡಲಾಗಿದೆ. ಪರೀಕ್ಷೆ ಕೇಂದ್ರದಲ್ಲಿಯೂ ಅಂತರ ಕಾಯ್ದುಕೊಂಡು ಪರೀಕ್ಷೆ ಬರೆಯಲು ವ್ಯವಸ್ಥೆ ಕಲ್ಪಿಸಲಾಗಿದೆ. ಇನ್ನೂ ಪದವಿ ಪರೀಕ್ಷೆಗಳು ಆಗಸ್ಟ್ 5 ರಿಂದ ಆರಂಭವಾಗಲಿವೆ.

The post ಕಾಲೇಜುಗಳು ಆರಂಭವಾದರೂ ತರಗತಿ ಕೊಠಡಿಗಳು ಖಾಲಿ: ಪರೀಕ್ಷೆಗೆ ವಿದ್ಯಾರ್ಥಿಗಳು ತಯಾರಿ appeared first on Public TV.

Source: publictv.in

Source link