‘ರಾಜಕಾರಣದಲ್ಲಿ ಏರಿಳಿತಗಳು ಸಹಜ, ಪ್ರಾಣಾರ್ಪಣೆ ಒಪ್ಪಲಾಗದು..’ ಅಭಿಮಾನಿ ಆತ್ಮಹತ್ಯೆಗೆ ಬಿಎಸ್​ವೈ ಬೇಸರ

‘ರಾಜಕಾರಣದಲ್ಲಿ ಏರಿಳಿತಗಳು ಸಹಜ, ಪ್ರಾಣಾರ್ಪಣೆ ಒಪ್ಪಲಾಗದು..’ ಅಭಿಮಾನಿ ಆತ್ಮಹತ್ಯೆಗೆ ಬಿಎಸ್​ವೈ ಬೇಸರ

ಬೆಂಗಳೂರು: ಚಾಮರಾಜನಗರದಲ್ಲಿ ಬಿ.ಎಸ್.​ ಯಡಿಯೂರಪ್ಪ ಅವರ ಅಭಿಮಾನಿಯೊಬ್ಬ ಬಿಎಸ್​ವೈ ರಾಜೀನಾಮೆ ಹಿನ್ನೆಲೆ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಹಿನ್ನೆಲೆ ಟ್ವೀಟ್ ಮಾಡಿರುವ ಬಿ.ಎಸ್. ಯಡಿಯೂರಪ್ಪ.. ಅಭಿಮಾನ ಅತಿರೇಕಕ್ಕೆ ಹೋಗಬಾರದೆಂದು ಕೈಮುಗಿದು ವಿನಂತಿಸುವೆ ಎಂದಿದ್ದಾರೆ.

ಇದನ್ನೂ ಓದಿ: ಬಿಎಸ್​ವೈ ರಾಜೀನಾಮೆ.. ಮನನೊಂದು ನೇಣಿಗೆ ಶರಣಾದ ಅಪ್ಪಟ ಅಭಿಮಾನಿ

ನನ್ನ ರಾಜೀನಾಮೆಯಿಂದ ಮನನೊಂದ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರದ ರಾಜಪ್ಪ (ರವಿ) ಆತ್ಮಹತ್ಯೆಗೆ ಶರಣಾದ ಸುದ್ದಿ ಅತೀವ ನೋವು ಹಾಗೂ ಬೇಸರ ತರಿಸಿದೆ. ರಾಜಕಾರಣದಲ್ಲಿ ಏರಿಳಿತಗಳು ಸಹಜ, ಇದಕ್ಕಾಗಿ ಪ್ರಾಣಾರ್ಪಣೆ ಮಾಡಿಕೊಳ್ಳಲು ಮುಂದಾಗುವುದು ಸರ್ವಥಾ ಒಪ್ಪಲಾಗದು, ಇದರಿಂದ ಕುಟುಂಬಕ್ಕಾಗುವ ನಷ್ಟ ಯಾರಿಂದಲೂ ಭರಿಸಲಾಗದು. ಅಭಿಮಾನ ಅತಿರೇಕಕ್ಕೆ ಹೋಗಬಾರದೆಂದು ಕೈಮುಗಿದು ವಿನಂತಿಸುವೆ. ರವಿ ಕುಟುಂಬದ ನೋವಿನೊಂದಿಗೆ ನಾನಿರುವೆ ಎಂದು ಬಿಎಸ್​ವೈ ಟ್ವೀಟ್ ಮಾಡಿದ್ದಾರೆ.

The post ‘ರಾಜಕಾರಣದಲ್ಲಿ ಏರಿಳಿತಗಳು ಸಹಜ, ಪ್ರಾಣಾರ್ಪಣೆ ಒಪ್ಪಲಾಗದು..’ ಅಭಿಮಾನಿ ಆತ್ಮಹತ್ಯೆಗೆ ಬಿಎಸ್​ವೈ ಬೇಸರ appeared first on News First Kannada.

Source: newsfirstlive.com

Source link