ಏರ್​ ರೈಫಲ್- ಭಾರತದ ಸೌರಭ್ ಚೌಧರಿ, ಮನು ಬಾಕರ್​ ಜೋಡಿ ಒಲಿಂಪಿಕ್ಸ್​ನಿಂದ ಔಟ್

ಏರ್​ ರೈಫಲ್- ಭಾರತದ ಸೌರಭ್ ಚೌಧರಿ, ಮನು ಬಾಕರ್​ ಜೋಡಿ ಒಲಿಂಪಿಕ್ಸ್​ನಿಂದ ಔಟ್

ಟೋಕಿಯೋ ಒಲಿಂಪಿಕ್ಸ್​ನ 10 ಮೀಟರ್ ಮಿಶ್ರ ಏರ್‌ ರೈಫಲ್ ವಿಭಾಗದಲ್ಲಿ ಭಾರತದ ಸೌರಭ್ ಚೌಧರಿ ಮತ್ತು ಮನು ಬಾಕರ್ ನಿರಾಸೆ ಮೂಡಿಸಿದ್ದಾರೆ. ಒಲಿಂಪಿಕ್ಸ್​ನಲ್ಲಿ ಪದಕ ಗೆಲ್ಲುವ ನೆಚ್ಚಿನ ಶೂಟರ್‌ಗಳೆನಿಸಿದ್ದ ಈ ಜೋಡಿ​ ಒಲಿಂಪಿಕ್ಸ್​ನಿಂದ​ ಹೊರಬಿದ್ದಿದ್ದಾರೆ. 10 ಮೀ. ಮಿಕ್ಸಡ್​​ ಏರ್‌ ರೈಫಲ್​ನಲ್ಲಿ 2ನೇ ಸುತ್ತಿಗೆ ಲಗ್ಗೆಯಿಟ್ಟಿದ್ದ ಈ ಜೋಡಿ, 2ನೇ ಅರ್ಹತಾ ಸುತ್ತಿನಲ್ಲಿ ಸೌರಭ್ ಚೌಧರಿ ಕ್ರಮವಾಗಿ 98, 100 ಹಾಗೂ 98 ಅಂಕಗಳನ್ನು ಗಳಿಸಿದರೆ, ಮನು ಬಾಕರ್ 97, 94 & 95 ಅಂಕಗಳಿಸಿದರು. ಇದರೊಂದಿಗೆ 2ನೇ ಅರ್ಹತಾ ಸುತ್ತಿನಲ್ಲಿ ಒಟ್ಟು 380 ಅಂಕಗಳಿಸಿದರು. ಆ ಮೂಲಕ ಕ್ವಾಲಿಫೈಯರ್​ ಸೆಕೆಂಡ್ ರೌಂಡ್​ನಲ್ಲಿ 7ನೇ ಸ್ಥಾನ ಪಡೆದು ಕೂಟದಿಂದ ನಿರ್ಗಮಿಸಿದರು.

The post ಏರ್​ ರೈಫಲ್- ಭಾರತದ ಸೌರಭ್ ಚೌಧರಿ, ಮನು ಬಾಕರ್​ ಜೋಡಿ ಒಲಿಂಪಿಕ್ಸ್​ನಿಂದ ಔಟ್ appeared first on News First Kannada.

Source: newsfirstlive.com

Source link