ಪುರುಷರ ಹಾಕಿ- ಸ್ಪೇನ್​​​ ವಿರುದ್ಧ ಭಾರತಕ್ಕೆ 3-0 ಗೋಲುಗಳ ಭರ್ಜರಿ ಗೆಲುವು

ಪುರುಷರ ಹಾಕಿ- ಸ್ಪೇನ್​​​ ವಿರುದ್ಧ ಭಾರತಕ್ಕೆ 3-0 ಗೋಲುಗಳ ಭರ್ಜರಿ ಗೆಲುವು

ಟೋಕಿಯೋ ಒಲಿಂಪಿಕ್ಸ್​ನ 2ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಹೀನಾಯ ಸೋಲು ಕಂಡಿದ್ದ ಭಾರತ ಪುರುಷರ ಹಾಕಿ ತಂಡ, ಇಂದು ಬಲಿಷ್ಠ ಸ್ಪೇನ್ ವಿರುದ್ಧ ನಡೆದ ಮೂರನೇ ಪಂದ್ಯದಲ್ಲಿ ಭರ್ಜರಿ ಕಮ್​ಬ್ಯಾಕ್ ಮಾಡಿದೆ. ಇಂದು ನಡೆದ ಪಂದ್ಯದ 8ನೇ ನಿಮಿಷದಲ್ಲಿ ಸಿಮ್ರನ್​​​​​​​​​​​​ಜೀತ್​ ಸಿಂಗ್, ಗೋಲು ಗಳಿಸುವ ಅವಕಾಶ ಕೈಚೆಲ್ಲಿದರು. ಆದ್ರೆ14ನೇ ನಿಮಿಷದಲ್ಲಿ ಸಿಮ್ರನ್‌ಜಿತ್ ಸಿಂಗ್ ಗೋಲಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾದರು.

ಇದರೊಂದಿಗೆ ಮೊದಲ ಮುನ್ನಡೆ ಪಡೆದ ಭಾರತ, ನಂತರ ರೂಪಿಂದರ್​ ಸಿಂಗ್ ಗೋಲು ಹೊಡೆಯುವುದರೊಂದಿಗೆ 2-0 ಮುನ್ನಡೆ ಸಾಧಿಸಿತು. ಇದಾದ ಬೆನ್ನಲ್ಲೇ ಪೆನಾಲ್ಟಿ ಕಾರ್ನರ್​ ಅನ್ನ ಗೋಲಾಗಿ ಪರಿವರ್ತಿಸಿದ ರೂಪಿಂದರ್, ಭಾರತಕ್ಕೆ 3-0 ಮುನ್ನಡೆ ಒದಗಿಸಿಕೊಟ್ಟರು. ಇದರೊಂದಿಗೆ ಬಲಿಷ್ಠ ಸ್ಪೆನ್​ ವಿರುದ್ಧ 3-0 ಅಂತರದಿಂದ ಗೆದ್ದ ಭಾರತ, ಗ್ರೂಪ್​ ‘ಎ’ ನಲ್ಲಿ 2ನೇ ಸ್ಥಾನ ಕಾಯ್ದುಕೊಂಡು ಕ್ವಾರ್ಟರ್ ಫೈನಲ್‌ ಪ್ರವೇಶದ ಹಾದಿಯನ್ನ ಸುಗಮವಾಗಿಸಿಕೊಂಡಿದೆ.

 

The post ಪುರುಷರ ಹಾಕಿ- ಸ್ಪೇನ್​​​ ವಿರುದ್ಧ ಭಾರತಕ್ಕೆ 3-0 ಗೋಲುಗಳ ಭರ್ಜರಿ ಗೆಲುವು appeared first on News First Kannada.

Source: newsfirstlive.com

Source link