ಲಂಕಾ ಸರಣಿಯಲ್ಲಿನ ಕಳಪೆ ಪ್ರದರ್ಶನ ಹಾರ್ದಿಕ್​ಗೆ ಕುತ್ತು ತಂದಿದ್ಯಾ?

ಲಂಕಾ ಸರಣಿಯಲ್ಲಿನ ಕಳಪೆ ಪ್ರದರ್ಶನ ಹಾರ್ದಿಕ್​ಗೆ ಕುತ್ತು ತಂದಿದ್ಯಾ?

ಸರಣಿ ಸರಣಿಗೂ ಟೀಮ್​ ಇಂಡಿಯಾ ಬೆಂಚ್​ ಸ್ಟ್ರೆಂಥ್​ ಹೆಚ್ಚಾಗ್ತಿದೆ. ಹೀಗಾಗಿ ಕಾಂಪಿಟೇಷನ್​ ಕೂಡ ಜಾಸ್ತಿಯಾಗಿದೆ. ಆದ್ರೆ ಇದು ಲಂಕಾ ಸರಣಿಯಲ್ಲಿ ಕಳಪೆ ಫಾರ್ಮ್​​ನಲ್ಲಿರುವ ಹಾರ್ದಿಕ್ ಪಾಂಡ್ಯಗೆ ತಲೆನೋವು ಹೆಚ್ಚಿಸಿದೆ.

ಹಾರ್ದಿಕ್​ ಪಾಂಡ್ಯ, ಟೀಮ್​ ಇಂಡಿಯಾದ ಗೇಮ್​ ಚೇಂಜರ್​, ಫಿನಿಷರ್. ಸಂಕಷ್ಟದಲ್ಲಿದ್ದ ತಂಡಕ್ಕೆ ನೆರವಾಗ್ತಿದ್ದ ಪಾಂಡ್ಯ, ಡೆತ್​ ಓವರ್​ಗಳಲ್ಲಿ ರನ್​ ಹೊಳೆಯೇ ಹರಿಸುತ್ತಿದ್ದರು. ಹಾರ್ದಿಕ್​ರ ಈ ಅದ್ಭುತ ಪವರ್​​ ಹಿಟ್ಟಿಂಗ್​​ ಬ್ಯಾಟಿಂಗೇ​,​ ತಂಡಕ್ಕೆ ಆನೆ ಬಲ. ಆದರೆ ಅದ್ಯಾಕೋ ಶ್ರೀಲಂಕಾ ಪ್ರವಾಸದಲ್ಲಿ ಹಾರ್ದಿಕ್ ಫುಲ್​ ಡಲ್​ ಆಗಿದ್ದಾರೆ. ರನ್​​​ಗಳಿಸಲು ತುಂಬಾ ಪರದಾಡ್ತಿದ್ದಾರೆ. ಇದು ಪಾಂಡ್ಯ ಬ್ಯಾಟಿಂಗೇನಾ ಅನ್ನುವಂಥ ಪ್ರಶ್ನೆ ಹುಟ್ಟುಹಾಕಿದೆ.

blank

ಹೆಚ್ಚಾಗ್ತಿದೆ ಕಾಂಪಿಟೇಶನ್​ – ಹಾರ್ದಿಕ್​ಗೆ ಟೆನ್ಶನ್​
ಶ್ರೀಲಂಕಾ ಸರಣಿಯಲ್ಲಿ ಹಾರ್ದಿಕ್​ ಪಾಂಡ್ಯ​ ಅನುಭವಿ ಆಟಗಾರ. ಆದರೆ ತೋರಿದ್ದು, ಅನನುಭವಿ ಆಟಗಾರರಿಗಿಂತಲೂ ಕಳಪೆ ಪ್ರದರ್ಶನ. ಕೇವಲ ಬ್ಯಾಟಿಂಗ್​ ಮಾತ್ರವಲ್ಲ, ಬೌಲಿಂಗ್​​ನಲ್ಲೂ ಕೂಡ ವಿಕೆಟ್​ಗಾಗಿ ಪರದಾಡ್ತಿದ್ದಾರೆ. ಇದು ಮ್ಯಾನೇಜ್​ಮೆಂಟ್​ ಚಿಂತೆಗೆ ಕಾರಣವಾಗಿದ್ದಲ್ಲದೆ, ಈ ಪ್ರದರ್ಶನವನ್ನ ಪರಿಗಣಿಸಿ ಟಿ20 ವಿಶ್ವಕಪ್​​ಗೆ ಆಯ್ಕೆ ಮಾಡೋದು ಹೇಗೆ ಎಂಬ ಗೊಂದಲ ಕೂಡ ಉಂಟಾಗಿದೆ.

ಇಷ್ಟು ದಿನ ಹಾರ್ದಿಕ್​​ ವಿಶ್ವಕಪ್​​ಗೆ ಪ್ರಮುಖ ಅಸ್ತ್ರ ಎನ್ನಲಾಗ್ತಿತ್ತು. ಆದರೆ ಈ ಕಳಪೆ ಪ್ರದರ್ಶನ, ಮುಂದಿನ ನಡೆ ಏನೆಂಬ ಅನುಮಾನ ಮೂಡಿಸಿದೆ. ಬೆನ್ನು ಶಸ್ತ್ರಚಿಕಿತ್ಸೆಯ ನಂತರ ಬ್ಯಾಟಿಂಗ್​​​ ಮೇಲಷ್ಟೆ ಫೋಕಸ್ ಮಾಡಿರುವ ಹಾರ್ದಿಕ್​, ಬೌಲಿಂಗ್​ ಕಡೆ ಅಷ್ಟೇನು ಗಮನ ನೀಡ್ತಿಲ್ಲ. ಇದಕ್ಕೆ ಕಾರಣ ಕಳೆದ ಮೂರು ಸೀಮಿತ ಓವರ್​ಗಳ ಸರಣಿಗಳು. ಟಿ20 ವಿಶ್ವಕಪ್​ ದೃಷ್ಟಿಯಿಂದ ಆಗಾಗ ಬೌಲಿಂಗ್​ ಮಾಡಿದ್ದು ಬಿಟ್ಟರೆ, ಪರಿಪೂರ್ಣ ಬೌಲಿಂಗ್ ಕಡೆ ಒಲವು ತೋರಿಲ್ಲ. ಇದು ಕೂಡ ಜೂನಿಯರ್ ಪಾಂಡ್ಯ ಹಿನ್ನಡೆಗೆ ಕಾರಣವಾಗಿದೆ.

blank

IPL​ನಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಚಾನ್ಸ್​?
ಹಾರ್ದಿಕ್​ರ ಇದೇ ವೈಫಲ್ಯ ಮುಂದುವರೆದರೆ, ಟಿ-ಟ್ವೆಂಟಿ ವಿಶ್ವಕಪ್​​ಗೆ ಆಯ್ಕೆಯಾಗೋದು ಕೂಡ ಅನುಮಾನ. ಒಂದೆಡೆ ತಂಡದಲ್ಲಿ ಹೆಚ್ಚಾಗ್ತಿರೋ ಪೈಪೋಟಿ, ಮತ್ತೊಂದು ಆತನ ಮೇಲಿರುವ ಒತ್ತಡ. ಇದೆಲ್ಲದರ ನಡುವೆ ವಿಶ್ವಕಪ್​​ ತಂಡಕ್ಕೆ ಆಯ್ಕೆಗೆ ಹಾರ್ದಿಕ್​ ಮುಂದಿರುವ ದಾರಿ ಐಪಿಎಲ್​. ಹಾಗೇ ಲಂಕಾ ವಿರುದ್ಧ ಉಳಿದಿರುವ 2 ಟಿ-20 ಪಂದ್ಯಗಳು. ಇಲ್ಲಿ ಬೆಸ್ಟ್​​ ಪರ್ಫಾಮೆನ್ಸ್​ ನೀಡಿದ್ರೆ, ತಂಡದಲ್ಲಿ ಹಾರ್ದಿಕ್​​ ಸ್ಥಾನ ಪಡೆಯೋದು ಪಕ್ಕಾ. ಇಲ್ದಿದ್ರೆ ತಂಡದಿಂದ ಗೇಟ್​ಪಾಸ್ ಗ್ಯಾರೆಂಟಿ.

The post ಲಂಕಾ ಸರಣಿಯಲ್ಲಿನ ಕಳಪೆ ಪ್ರದರ್ಶನ ಹಾರ್ದಿಕ್​ಗೆ ಕುತ್ತು ತಂದಿದ್ಯಾ? appeared first on News First Kannada.

Source: newsfirstlive.com

Source link