ಮುಂದಿನ ಸಿಎಂ ಯಾರು..? ದಿಢೀರ್ ದೆಹಲಿಗೆ ತೆರಳುವ ಮುನ್ನ ರಾಘವೇಂದ್ರ ಹೇಳಿದ್ದೇನು..?

ಮುಂದಿನ ಸಿಎಂ ಯಾರು..? ದಿಢೀರ್ ದೆಹಲಿಗೆ ತೆರಳುವ ಮುನ್ನ ರಾಘವೇಂದ್ರ ಹೇಳಿದ್ದೇನು..?

ಬೆಂಗಳೂರು: ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ಬೆನ್ನಲ್ಲೇ ಇದೀಗ ರಾಜ್ಯದ ಸಿಎಂ ಯಾರಾಗಲಿದ್ದಾರೆ ಎಂಬ ಕುತೂಹಲ ಹೆಚ್ಚಾಗಿದೆ. ಈ ಬೆನ್ನಲ್ಲೇ ಬಿಎಸ್​ವೈ ಪುತ್ರ ಬಿ.ವೈ. ರಾಘವೇಂದ್ರ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಬಿ. ವೈ. ರಾಘವೇಂದ್ರ.. ಕುಟುಂಬ ಅನ್ನೋದಕ್ಕಿಂತ ಸಂಘಟನೆಯಿಂದ‌ ನಾನು ಇಂದು‌ ಸಂಸದ‌ನಾಗಿದ್ದೇನೆ. ವಿಜಯೇಂದ್ರ ಸಂಘಟನೆ ಮತ್ತು ಪಕ್ಷದ ಸೇತುವೆಯಾಗಿ ಅವರ ಕರ್ತವ್ಯ ನಿರ್ವಹಿಸಿದ್ದಾರೆ. ಸಾವಿರಾರು ಕಾರ್ಯಕರ್ತರನ್ನು ಸಿಎಂ ಅವರು ಬೆಳೆಸಿದ್ದಾರೆ ಎಂದು ಹೇಳಿದ್ದಾರೆ.

ಮುಂದುವರೆದು.. ನಗರಕ್ಕೆ ಸೀಮಿತವಾದ ಪಕ್ಷ ಎಂಬ ಕಪ್ಪು ಚುಕ್ಕೆ ಮೊದಲು ನಮ್ಮ ಮೇಲೆ ಇತ್ತು. ಗ್ರಾಮಾಂತರ ಭಾಗದಲ್ಲಿಯೂ ಪಕ್ಷ ಬಲವರ್ಧನೆ ಮಾಡುವಲ್ಲಿ ಸಿಎಂ ಕೆಲಸ ಮಾಡಿದ್ದಾರೆ. ಕುಟುಂಬ ಮತ್ತು ಮಕ್ಕಳಿಗಾಗಿ ಯಡಿಯೂರಪ್ಪ ಕಂಡೀಷನ್ ಹಾಕುತ್ತಿರುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.

The post ಮುಂದಿನ ಸಿಎಂ ಯಾರು..? ದಿಢೀರ್ ದೆಹಲಿಗೆ ತೆರಳುವ ಮುನ್ನ ರಾಘವೇಂದ್ರ ಹೇಳಿದ್ದೇನು..? appeared first on News First Kannada.

Source: newsfirstlive.com

Source link