ಸೋ ಕ್ಯೂಟ್; ಮೀರಾಬಾಯಿ ಚಾನುರಂತೆಯೇ ವೇಯ್ಟ್ ಲಿಫ್ಟಿಂಗ್ ಮಾಡಿದ ಪುಟ್ಟಪೋರಿ..

ಸೋ ಕ್ಯೂಟ್; ಮೀರಾಬಾಯಿ ಚಾನುರಂತೆಯೇ ವೇಯ್ಟ್ ಲಿಫ್ಟಿಂಗ್ ಮಾಡಿದ ಪುಟ್ಟಪೋರಿ..

ಟೋಕಿಯೋ ಒಲಿಂಪಿಕ್ಸ್​ನ ಮೊದಲ ದಿನವೇ ಭಾರತದ ಕ್ರೀಡಾಪಟು ವೇಯ್ಟ್ ಲಿಫ್ಟರ್ ಮೀರಾಬಾಯಿ ಚಾನು ಭಾರತಕ್ಕೆ ಬೆಳ್ಳಿಪದಕ ತಂದುಕೊಡುವ ಮೂಲಕ ದೇಶದ ಗೌರವ ಹೆಚ್ಚಿಸಿದ್ದಾರೆ. ಅಲ್ಲದೇ ಅವರಿಗೆ ಚಿನ್ನದ ಪದಕವೂ ಒಲಿದು ಬರುವ ಸಾಧ್ಯತೆ ಇದೆ ಎನ್ನಲಾಗಿದೆ. ಮೀರಾಬಾಯಿ ಚಾನು ಬೆಳ್ಳಿಪದಕ ಗೆಲ್ಲುವ ಮೂಲಕ ಹಲವರಿಗೆ ಸ್ಫೂರ್ತಿಯೂ ಆಗಿದ್ದಾರೆ.

ಮೀರಾಬಾಯಿ ಚಾನುರಂತೆಯೇ ವೇಯ್ಟ್ ಲಿಫ್ಟರ್ ಆಗಿರುವ ಸತೀಶ್ ಶಿವಲಿಂಗಮ್ ಎನ್ನುವವರು ವಿಡಿಯೋವೊಂದನ್ನ ತಮ್ಮ ಟ್ವೀಟ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಪುಟ್ಟ ಮಗುವೊಂದು ಮೀರಾಬಾಯಿ ಚಾನು ಅವರನ್ನೇ ಅನುಕರಿಸಿದೆ.

ತನ್ನ ಹಿಂದೆ ಟಿವಿಯಲ್ಲಿ ಮೀರಾಬಾಯಿ ಚಾನು ವೇಯ್ಟ್ ಲಿಫ್ಟಿಂಗ್ ಮಾಡ್ತಿದ್ರೆ ಇತ್ತ ಪುಟ್ಟ ಬಾಲೆಯೂ ಸಹ ಮೀರಾಬಾಯಿ ಅವರಂತೆಯೇ ವೇಯ್ಟ್ ಲಿಫ್ಟಿಂಗ್ ಮಾಡಿದ್ದಾಳೆ. ಈ ವಿಡಿಯೋ ಹಂಚಿಕೊಂಡಿರುವ ಸತೀಶ್ ಶಿವಲಿಂಗಮ್ ಮೀರಾಬಾಯಿ ಅವರಿಗೆ ಟ್ಯಾಗ್ ಮಾಡಿ.. ಇದಲ್ಲವೇ ಸ್ಫೂರ್ತಿ ಎಂದು ಬರೆದುಕೊಂಡಿದ್ದಾರೆ. ಈ ಟ್ವೀಟ್​ನ್ನು ಮೀರಾಬಾಯಿ ಚಾನು ಸಹ ರೀಟ್ವೀಟ್ ಮಾಡಿ ಸೋ ಕ್ಯೂಟ್ ಎಂದು ಬರೆದುಕೊಂಡಿದ್ದಾರೆ.

The post ಸೋ ಕ್ಯೂಟ್; ಮೀರಾಬಾಯಿ ಚಾನುರಂತೆಯೇ ವೇಯ್ಟ್ ಲಿಫ್ಟಿಂಗ್ ಮಾಡಿದ ಪುಟ್ಟಪೋರಿ.. appeared first on News First Kannada.

Source: newsfirstlive.com

Source link