ಧನ್ಯ-ಸೂರಜ್ ವಾಯ್ಸ್​​ನಲ್ಲಿ ‘ನೀ ಪರಿಚಯ..’ ಕವರ್ ಸಾಂಗ್ -ಆಗಸ್ಟ್ 1ಕ್ಕೆ ನಿನ್ನ ಸನಿಹಕೆ ಟ್ರೈಲರ್

ಧನ್ಯ-ಸೂರಜ್ ವಾಯ್ಸ್​​ನಲ್ಲಿ ‘ನೀ ಪರಿಚಯ..’ ಕವರ್ ಸಾಂಗ್ -ಆಗಸ್ಟ್ 1ಕ್ಕೆ ನಿನ್ನ ಸನಿಹಕೆ ಟ್ರೈಲರ್

ನಿನ್ನ ಸನಿಹಕೆ… ದೊಡ್ಮನೆ ಹುಡುಗಿ ಧನ್ಯಾ ರಾಮ್ ಕುಮಾರ್ ಬೆಳ್ಳಿತೆರೆಗೆ ಎಂಟ್ರಿ ಕೊಡಲು ಸಿದ್ಧವಾಗಿರೋ ಸಿನಿಮಾ. ನಿನ್ನ ಸನಿಹಕೆ ಈಗಾಗಲೇ ಇಂಡಸ್ಟ್ರಿಯಲ್ಲಿ ದೊಡ್ಡ ಸದ್ದು ಗದ್ದಲ ಮಾಡ್ತಿದೆ. ಯುವ ಮನಸ್ಸುಗಳನ್ನು ಬಿಡದಂತೆ ಸೆಳೆದಿದೆ.

blank

ಸಿನಿಮಾದ ಹಾಡುಗಳಂತೂ ಸೂಪರ್ ಡೂಪರ್ ಹಿಟ್ ಆಗಿದೆ. ಅದರಲ್ಲೂ ಮಳೆ ಮಳೆ ಮಳೆಯೇ ಹಾಗೂ ನೀ ಪರಿಚಯ ಹಾಡುಗಳು ಮಿಲಿಯನ್ ಗಟ್ಟಲೆ ವೀವ್ಸ್ ಪಡೆದು ಮುನ್ನುಗ್ತಿದೆ. ಇದೀಗ ನೀ ಪರಿಚಯ ಹಾಡಿಗೆ ಸಿನಿಮಾದ ನಾಯಕ-ನಾಯಕಿ ದನಿಯಾಗಿದ್ದಾರೆ. ಚಿತ್ರತಂಡ ಸೂರಜ್ ಮತ್ತು ಧನ್ಯಾ ಹಾಡಿರೋ ಕವರ್ ಸಾಂಗ್ ರಿಲೀಸ್ ಮಾಡಿದೆ.

blank

ಇಬ್ಬರು ಹಾಡಿರೋ ಹಾಡಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗ್ತಿದೆ. ಇದರ ಅಸಲಿ ಹಾಡನ್ನು ಸಿದ್ಧಾರ್ಥ್ ಬೆಲ್ಮಣ್ಣು, ರಕ್ಷಿತ್ ಸುರೇಶ್ ಹಾಡಿದ್ದಾರೆ. ವಾಸುಕಿ ವೈಭವ್ ಈ ಅದ್ಭುತ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಅಂದ್ಹಾಗೆ ಆಗಸ್ಟ್ 1 ರಂದು ಸಿನಿಮಾದ ಟ್ರೈಲರ್ ರಿಲೀಸ್ ಆಗ್ತಿದ್ದು, 20 ರಂದು ರಾಜ್ಯಾದ್ಯಂತ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ.

The post ಧನ್ಯ-ಸೂರಜ್ ವಾಯ್ಸ್​​ನಲ್ಲಿ ‘ನೀ ಪರಿಚಯ..’ ಕವರ್ ಸಾಂಗ್ -ಆಗಸ್ಟ್ 1ಕ್ಕೆ ನಿನ್ನ ಸನಿಹಕೆ ಟ್ರೈಲರ್ appeared first on News First Kannada.

Source: newsfirstlive.com

Source link