ಅಭಿಮಾನಿಗಳ ವೇದನೆಯ ಆಳ ಅರ್ಥವಾಗುತ್ತದೆ- ಬಿಎಸ್​ವೈ ಅಭಿಮಾನಿ ಸಾವಿಗೆ ವಿಜಯೇಂದ್ರ ಬೇಸರ

ಅಭಿಮಾನಿಗಳ ವೇದನೆಯ ಆಳ ಅರ್ಥವಾಗುತ್ತದೆ- ಬಿಎಸ್​ವೈ ಅಭಿಮಾನಿ ಸಾವಿಗೆ ವಿಜಯೇಂದ್ರ ಬೇಸರ

ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ನೀಡಿದ್ದರಿಂದ ಬಿಎಸ್​ವೈ ಅಪ್ಪಟ ಅಭಿಮಾನಿ ಚಾಮರಾಜನಗರದ ರವಿ ಎಂಬಾತ ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆ ಬಿಎಸ್​ವೈ ಪುತ್ರ ಬಿ. ವೈ. ವಿಜಯೇಂದ್ರ ಅತೀವ ಬೇಸರ ವ್ಯಕ್ತಪಡಿಸಿದ್ದಾರೆ.

ಟ್ವೀಟ್ ಮೂಲಕ ಬೇಸರ ವ್ಯಕ್ತಪಡಿಸಿರುವ ವಿಜಯೇಂದ್ರ.. ಜನನಾಯಕ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ರಾಜೀನಾಮೆಯಿಂದ ಮನನೊಂದು ಗುಂಡ್ಲುಪೇಟೆಯ ಬೊಮ್ಮಲಾಪುರದ ರವಿ ಆತ್ಮಹತ್ಯೆಗೆ ಶರಣಾದ ಸುದ್ದಿ ದಿಗ್ಬ್ರಮೆ ತರಿಸಿದೆ. ಪೂಜ್ಯ ತಂದೆ ಯಡಿಯೂರಪ್ಪನವರ ಬಗ್ಗೆ ಇಡೀ ರಾಜ್ಯದ ಜನತೆ ಇಟ್ಟಿರುವ ಪ್ರೀತ್ಯಾದಾರಗಳನ್ನು ನಮ್ಮ ಕುಟುಂಬ ಋಣಿಯಾಗಿ ಸ್ಮರಿಸುತ್ತದೆ.

ಇದನ್ನೂ ಓದಿ: ಬಿಎಸ್​ವೈ ರಾಜೀನಾಮೆ.. ಮನನೊಂದು ನೇಣಿಗೆ ಶರಣಾದ ಅಪ್ಪಟ ಅಭಿಮಾನಿ

ಆದರೆ ಅಭಿಮಾನದ ಹೆಸರಲ್ಲಿ ಜೀವ ಕಳೆದುಕೊಂಡಿದ್ದು ಅತೀವ ಯಾತನೆಯನ್ನುಂಟು ಮಾಡಿದೆ. ರವಿ ಕುಟುಂಬದ ನೋವು, ನಷ್ಟವನ್ನು ನಮ್ಮದೇ ಕುಟುಂಬದ್ದೆಂದು ಭಾವಿಸಿದ್ದೇವೆ. ರವಿ ಆತ್ಮಕ್ಕೆ ಸದ್ಗತಿ ದೊರಕಲೆಂದು ಭಗವಂತನಲ್ಲಿ ಪ್ರಾರ್ಥಿಸುವೆ.

ಅಭಿಮಾನಿಗಳ ಹೃದಯದ ವೇದನೆಯ ಆಳ ನಮಗೆ ಅರ್ಥವಾಗುತ್ತದೆ. ಆದರೆ ದುಡುಕಿನ ನಿರ್ಧಾರಗಳು, ವರ್ತನೆಗಳು ಮಾನ್ಯ ಯಡಿಯೂರಪ್ಪನವರ ವ್ಯಕ್ತಿತ್ವ ಹಾಗೂ ಮನಸ್ಸಿಗೆ ಘಾಸಿಯುಂಟುಮಾಡದಂತಿರಲಿ ಎಂದು ಕಳಕಳಿಯಿಂದ ವಿನಂತಿಸುವೆ.

The post ಅಭಿಮಾನಿಗಳ ವೇದನೆಯ ಆಳ ಅರ್ಥವಾಗುತ್ತದೆ- ಬಿಎಸ್​ವೈ ಅಭಿಮಾನಿ ಸಾವಿಗೆ ವಿಜಯೇಂದ್ರ ಬೇಸರ appeared first on News First Kannada.

Source: newsfirstlive.com

Source link