ರಾಜ್ ಕುಂದ್ರಾ ಅಶ್ಲೀಲ ಸಿನಿಮಾ ದಂಧೆಯಲ್ಲಿ ಕೋದಂಡರಾಮ ಸಿನಿಮಾದ ನಟಿ!

ಮುಂಬೈ: ಉದ್ಯಮಿ ರಾಜ್ ಕುಂದ್ರಾ ಅವರು ಅಶ್ಲೀಲ ಸಿನಿಮಾ ಪ್ರಕರಣದಲ್ಲಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಆದರೆ  ಈ ಪ್ರಕರಣದಲ್ಲಿ ಕನ್ನಡ ಸಿನಿಮಾ ನಟಿಯ ಹೆಸರು ಕೇಳಿ ಬರುತ್ತಿದೆ.

ನಟಿ ಫ್ಲೋರಾ ಸೈನಿ (ಆಶಾ ಸೈನಿ) ಅವರ ಹೆಸರು ಕೇಳಿಬರುತ್ತಿದೆ. ಹಲವು ನಟಿಯರನ್ನು ಮತ್ತು ಮಾಡೆಲ್‍ಗಳನ್ನು ಬಳಸಿಕೊಂಡು ರಾಜ್‍ಕುಂದ್ರಾ ನೀಲಿ ಚಿತ್ರಗಳನ್ನು ನಿರ್ಮಾಣ ಮಾಡುತ್ತಿದ್ದರು ಎನ್ನುವ ಆರೋಪ ಕೇಳಿಬಂದಿತ್ತು. ಆದರೆ ಇದೀಗ  ಕನ್ನಡದ ಕೆಲವು ಚಿತ್ರಗಳಲ್ಲಿ ನಟಿಸಿರುವ ಫ್ಲೋರಾ ಸೈನಿ ಹೆಸರನ್ನು ಕೂಡ ಈಗ ಎಳೆದು ತರಲಾಗಿದೆ.

 

View this post on Instagram

 

A post shared by Flora Saini (@florasaini)

ಸುದೀಪ್ ನಾಯಕತ್ವದ ನಮ್ಮಣ್ಣ, ರವಿಚಂದ್ರನ್ ಹಾಗೂ ಶಿವರಾಜ್‍ಕುಮಾರ್ ನಟನೆಯ ಕೋದಂಡರಾಮ ಮುಂತಾದ ಸಿನಿಮಾಗಳಲ್ಲಿ ಫ್ಲೋರಾ ಸೈನಿ (ಆಶಾ ಸೈನಿ)ನಟಿಸಿದ್ದಾರೆ. ಹಿಂದಿ, ತೆಲುಗು, ತಮಿಳು ಮತ್ತು ಪಂಜಾಬಿ ಸಿನಿಮಾ ಪ್ರೇಕ್ಷಕರಿಗೂ ಅವರು ಪರಿಚಿತರಾಗಿದ್ದಾರೆ. ಆದರೆ ಇವರ ಹೆಸರು ನೀಲಿ ಚಿತ್ರಗಳ ದಂಧೆಯ ವಿಷಯದಲ್ಲಿ ಪ್ರಸ್ತಾಪ ಆಗಲು ಕಾರಣವಾಗಿರುವುದು ರಾಜ್ ಕುಂದ್ರಾ ಮತ್ತು ಉಮೇಶ್ ಕಾಮತ್ ಎಂಬುವವರ ನಡುವೆ ನಡೆದ ವಾಟ್ಸ್ ಆ್ಯಪ್ ಚಾಟ್ ಮಾಡಿದ್ದಾರೆ ಎನ್ನಲಾಗುತ್ತಿದೆ.

 

View this post on Instagram

 

A post shared by Flora Saini (@florasaini)

ನಾನು ಸುಮ್ಮನೆ ಮೌನವಾಗಿದ್ದರೆ, ನಾನು ಏನೋ ಮುಚ್ಚಿಡುತ್ತಿದ್ದೇನೆ ಎಂದು ಜನರು ಊಹಿಸುತ್ತಾರೆ. ಇಬ್ಬರು ವ್ಯಕ್ತಿಗಳು ಅವರ ಚಾಟ್‍ನಲ್ಲಿ ನನ್ನ ಬಗ್ಗೆ ಚರ್ಚೆ ಮಾಡುತ್ತಾರೆ ಎಂದರೆ ಅವರ ಕೃತ್ಯದಲ್ಲಿ ನಾನೂ ಭಾಗಿ ಆಗಿದ್ದೇನೆ ಎಂದರ್ಥವಲ್ಲ ಎಂದು ಫ್ಲೋರಾ ಸೈನಿ ಹೇಳಿದ್ದಾರೆ. ನಾನು ಯಾವುದೇ ಸಿನಿಮಾ ಹಿನ್ನೆಲೆಯ ಕುಟುಂಬದಿಂದ ಬಂದವಳಲ್ಲ. ಹಾಗಾಗಿ ನನ್ನ ಹೆಸರನ್ನು ಇದರಲ್ಲಿ ಎಳೆದು ತರಲಾಗಿದೆ. ಇದರಿಂದ ನನ್ನ ಹೆಸರು ಕೆಡಿಸಲು ಸಾಧ್ಯವಿಲ್ಲ. ರಾಜ್‍ಕುಂದ್ರಾ ಅಥವಾ ಅವರ ಕಡೆಯವರು ನನ್ನನ್ನು ಯಾವತ್ತೂ ಭೇಟಿ ಆಗಿಲ್ಲ. ಒಂದು ವೇಳೆ ಅವರು ನನಗೆ ಆಫರ್ ನೀಡಿದ್ದರೂ ಕೂಡ ನಾನು ಒಪ್ಪಿಕೊಳ್ಳುತ್ತಿರಲಿಲ್ಲ. ಯಾಕೆಂದರೆ ಈ ರೀತಿಯ ಹೊಸ ಪ್ಲಾಟ್‍ಫಾರ್ಮ್‍ಗಳಲ್ಲಿ ನಾನು ನಟಿಸುತ್ತಿಲ್ಲ ಎಂದು ಫ್ಲೋರಾ ಸೈನಿ ಹೇಳಿ ಇನ್‍ಸ್ಟಾಗ್ರಾಮ್‍ನಲ್ಲಿ ವೀಡಿಯೋ ಶೇರ್ ಮಾಡಿದ್ದಾರೆ.

The post ರಾಜ್ ಕುಂದ್ರಾ ಅಶ್ಲೀಲ ಸಿನಿಮಾ ದಂಧೆಯಲ್ಲಿ ಕೋದಂಡರಾಮ ಸಿನಿಮಾದ ನಟಿ! appeared first on Public TV.

Source: publictv.in

Source link