ಈಗ ಮದುವೆ ಮಾಡಿದ್ರೂ 4 ಮಕ್ಕಳು ಮಾಡುವಷ್ಟು ತಾಕತ್ ಇದೆ- ಸಿಎಂ ಇಬ್ರಾಹಿಂ

ಈಗ ಮದುವೆ ಮಾಡಿದ್ರೂ 4 ಮಕ್ಕಳು ಮಾಡುವಷ್ಟು ತಾಕತ್ ಇದೆ- ಸಿಎಂ ಇಬ್ರಾಹಿಂ

ಬೆಂಗಳೂರು: ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಮುಖಂಡ ಸಿ.ಎಂ. ಇಬ್ರಾಹಿಂ.. ಯಡಿಯೂರಪ್ಪಗೆ ಈಗ ಮದುವೆ ಮಾಡಿದರೂ ನಾಲ್ಕು ಮಕ್ಕಳು ಮಾಡುವಷ್ಟು ತಾಕತ್ ಇದೆ ಎಂದಿದ್ದಾರೆ.

ಅಮಿತ್ ಶಾ ಹಾಗೂ ಯಡಿಯೂರಪ್ಪಗೆ ರನ್ನಿಂಗ್ ರೇಸ್ ನಡೆಯಲಿ ಗೊತ್ತಾಗುತ್ತೆ.

ಇದನ್ನೂ ಓದಿ: ‘ರಾಜ್ಯ ಬಿಟ್ಟು ಹೋಗಲ್ಲ..ರಾಜ್ಯಪಾಲ ಆಗಲ್ಲ; ಮತ್ತೆ ಬಿಜೆಪಿ ಬಲ ಪಡಿಸುತ್ತೇನೆ’ ಬಿಎಸ್​ವೈ ಶಪಥ

ಯಡಿಯೂರಪ್ಪನವರನ್ನು ಅವಮಾನಿಸಿ ಸಿಎಂ ಹುದ್ದೆಯಿಂದ ಕೆಳಗಿಳಿಸಲಾಗಿದೆ, ಓರ್ವ ಕನ್ನಡಿಗನಿಗಾದ ಅವಮಾನದ ವಿರುದ್ಧ ಸಮಾವೇಶ ನಡೆಸುತ್ತೇನೆ.. 1972 ರಿಂದ ನಾನು ಹೇಳಿದ್ದೆಲ್ಲ ನಡೆದಿದೆ, ಸೂಫಿ ಶರಣರ ಸಂಗದಲ್ಲಿ ಇರುವವರಿಗೆ ಆರನೇ ಇಂದ್ರಿಯ ಚೆನ್ನಾಗಿ ಕೆಲಸ ಮಾಡುತ್ತೆ, ಹಾಗೇ ಕೆಲಸ ಮಾಡಿದೆ. ಯಡಿಯೂರಪ್ಪನವರಿಗೇ ಹೇಳಿದ್ದೆ.. ನಿಮ್ಮನ್ನು ಏಣಿಯಾಗಿ ಉಪಯೋಗಿಸಿಕೊಳ್ತಾರೆ ಅಂದಿದ್ದೆ ಯಡಿಯೂರಪ್ಪಗೆ ಈಗ ಮದುವೆ ಮಾಡಿದರೂ ನಾಲ್ಕು ಮಕ್ಕಳು ಮಾಡುವಷ್ಟು ತಾಕತ್ ಇದೆ. ಬಿಎಸ್​ವೈಗೆ ಆದ ಅವಮಾನ, ಕರ್ನಾಟಕಕ್ಕೆ, ಕನ್ನಡಿಗರಿಗೆ ಆದ ಅವಮಾನ.. ಅಮಿತ್ ಷಾ ಹಾಗೂ ಯಡಿಯೂರಪ್ಪಗೆ ರನ್ನಿಂಗ್ ರೇಸ್ ನಡೆಯಲಿ ಗೊತ್ತಾಗುತ್ತೆ ಎಂದಿದ್ದಾರೆ.

ಇದನ್ನೂ ಓದಿ: ಅಭಿವೃದ್ಧಿ ಪರ ಆಡಳಿತ ನೀಡಲು ಶಕ್ತಿಮೀರಿ ಪ್ರಯತ್ನಿಸಿದ ತೃಪ್ತಿಯಿದೆ -ಬಿಎಸ್​​ವೈ

ಮಧ್ಯಂತರ ಚುನಾವಣೆ ಬರಲ್ಲ.. ಆದರೆ ಸೆಪ್ಟೆಂಬರ್ ನಲ್ಲಿ ಏನಾಗುತ್ತೆ ಕಾದು ನೋಡಿ

ಸೆಪ್ಟೆಂಬರ್-ಅಕ್ಟೋಬರ್ ನಲ್ಲಿ ಇದರ ರೂಪು ರೇಷೆ ಗೊತ್ತಾಗುತ್ತೆ.. ರಾಷ್ಟ್ರೀಯ ಭಾವೈಕ್ಯ ಸಮ್ಮೇಳನ ಎಂಬ ಹೆಸರಲ್ಲಿ ಸೂಫಿ ಸಂತರ ಸಮಾವೇಶ ಮಾಡ್ತೇವೆ. ಕೂಗಿಲ್ಲದವರ ಕೂಗು ನಮ್ಮ ಸಮ್ಮೇಳನ, ಬೆಂಗಳೂರಿನಲ್ಲೇ ಮೊದಲ ಹಂತದ ಸಮಾವೇಶ. ಮೊದಲ ಭಾಗವಾಗಿ ಮುಸ್ಲಿಮರ ಸಮಾವೇಶ ನವೆಂಬರ್ ತಿಂಗಳಲ್ಲಿ ಮಾಡ್ತೀವಿ. ನಮ್ಮ ನಾಯಕನ್ನ ನಾವು ಆರಿಸುತ್ತೇವೆ, ನಮ್ಮ ನಾಡು, ನಮ್ಮ ಊರು ನಮ್ಮ ನಾಯಕನ ಆರಿಸುವ ಶಕ್ತಿ ನಮಗಿದೆ. ಈ ಊರಲ್ಲಿ ಪಾನಿಪುರಿ ಮಾಡಲು ಬಂದಿರೋ ಬಿಕ್ನಾಸಿಗಳು ಗುಜರಾತಿಗಳು, ಕನ್ನಡಿಗರು ಯಾರೂ ಗುಜರಾತ್ ಗೆ ವಲಸೆ ಹೋಗಿಲ್ಲ. ಯಡಿಯೂರಪ್ಪ ಯಾವ ಪಕ್ಷ ಅನ್ನೋದು ನಮಗೆ ಮುಖ್ಯ ಅಲ್ಲ, ಅವರೊಬ್ಬ ಮುತ್ಸದ್ದಿ ರಾಜಕಾರಣಿ, ಯಡಿಯೂರಪ್ಪಗೆ ಆದ ಅವಮಾನ ಕನ್ನಡಿಗರಿಗೆ ಆದ ಅವಮಾನ. ಕೇಶವ ಕೃಪಾ ಯಾವುದು..? ಅನ್ನ ದಾಸೋಹ ನೀಡುವ ಶರಣ ಬೇಕು, ಅನ್ನಕ್ಕಾಗಿ ಮನೆಯ ಮುಂದೆ ಕೈಕಟ್ಟಿ ನಿಲ್ಲುವ ಶರಣ ಬೇಕು.. ಯಾವುದೇ ಕಾರಣಕ್ಕೂ ಮಧ್ಯಂತರ ಚುನಾವಣೆ ಬರಲ್ಲ.. ಆದರೆ ಸೆಪ್ಟೆಂಬರ್ ನಲ್ಲಿ ಏನಾಗುತ್ತೆ ಕಾದು ನೋಡಿ ಎಂದಿದ್ದಾರೆ.

The post ಈಗ ಮದುವೆ ಮಾಡಿದ್ರೂ 4 ಮಕ್ಕಳು ಮಾಡುವಷ್ಟು ತಾಕತ್ ಇದೆ- ಸಿಎಂ ಇಬ್ರಾಹಿಂ appeared first on News First Kannada.

Source: newsfirstlive.com

Source link