ನೆಕ್ಸ್ಟ್ ಸಿಎಂ ಆಯ್ಕೆಗೆ ಮುಹೂರ್ತ; ಇಂದು ಸಂಜೆ ದೆಹಲಿಯಿಂದ ಬೆಂಗಳೂರಿಗೆ ವೀಕ್ಷಕರ ತಂಡ

ನೆಕ್ಸ್ಟ್ ಸಿಎಂ ಆಯ್ಕೆಗೆ ಮುಹೂರ್ತ; ಇಂದು ಸಂಜೆ ದೆಹಲಿಯಿಂದ ಬೆಂಗಳೂರಿಗೆ ವೀಕ್ಷಕರ ತಂಡ

ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ನೀಡಿದ ಬೆನ್ನಲ್ಲೇ ಮುಂದಿ ಸಿಎಂ ಯಾರಾಗಲಿದ್ದಾರೆ ಎಂಬ ಚರ್ಚೆ ರಾಜ್ಯ ರಾಜಕಾರಣದಲ್ಲಿ ದೊಡ್ಡ ಮಟ್ಟದ ಸದ್ದು ಮಾಡುತ್ತಿದೆ. ಈ ಬೆನ್ನಲ್ಲೇ ದೆಹಲಿಯಿಂದ ಇಂದು ಸಂಜೆ ವೀಕ್ಷಕರ ತಂಡ ಬಂದಿಳಿಯಲಿದೆ ಎನ್ನಲಾಗಿದೆ.

ಕೇಂದ್ರ ಸಚಿವ ಕಿಶನ್ ರೆಡ್ಡಿ ಹಾಗೂ ಧರ್ಮೇಂದ್ರ ಪ್ರಧಾನ್ ಇಂದು ಸಂಜೆ 5 ಗಂಟೆ ಸುಮಾರಿಗೆ ಬೆಂಗಳೂರಿಗೆ ಬಂದಿಳಿಯಲಿದ್ದಾರೆ ಎಂದು ಹೇಳಲಾಗಿದೆ. ಈ ಮಧ್ಯೆ ಇಂದು ಸಂಜೆಯೇ ಶಾಸಕಾಂಗ ಪಕ್ಷದ ಸಭೆಯನ್ನೂ ಕರೆಯಲಾಗಿದ್ದು ಮುಖ್ಯಮಂತ್ರಿ ಆಯ್ಕೆ ಇಂದು ಬಹುತೇಕ ಖಚಿತ ಎನ್ನಲಾಗಿದೆ.

The post ನೆಕ್ಸ್ಟ್ ಸಿಎಂ ಆಯ್ಕೆಗೆ ಮುಹೂರ್ತ; ಇಂದು ಸಂಜೆ ದೆಹಲಿಯಿಂದ ಬೆಂಗಳೂರಿಗೆ ವೀಕ್ಷಕರ ತಂಡ appeared first on News First Kannada.

Source: newsfirstlive.com

Source link