ಬ್ಯಾಡ್ಮಿಂಟನ್ ಡಬಲ್ಸ್​- ಗೆದ್ದರೂ ಒಲಿಂಪಿಕ್ಸ್​ನಿಂದ ನಿರ್ಗಮಿಸಿದ ರಾಂಕಿ ರೆಡ್ಡಿ, ಚಿರಾಗ್ ಶೆಟ್ಟಿ

ಬ್ಯಾಡ್ಮಿಂಟನ್ ಡಬಲ್ಸ್​- ಗೆದ್ದರೂ ಒಲಿಂಪಿಕ್ಸ್​ನಿಂದ ನಿರ್ಗಮಿಸಿದ ರಾಂಕಿ ರೆಡ್ಡಿ, ಚಿರಾಗ್ ಶೆಟ್ಟಿ

ಟೋಕಿಯೋ ಒಲಿಂಪಿಕ್ಸ್​ ಬ್ಯಾಡ್ಮಿಂಟನ್ ಡಬಲ್ಸ್​ ಗ್ರೂಪ್​ ‘ಎ’ ಕೊನೆಯ ಪಂದ್ಯದಲ್ಲಿ ಭಾರತದ ರಾಂಕಿ ರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಗೆಲುವು ಸಾಧಿಸಿದರೂ, ಒಲಿಂಪಿಕ್ಸ್​ನಿಂದ ನಿರ್ಗಮಿಸಿದ್ದಾರೆ. ಗ್ರೂಪ್ ಎ ಕೊನೆಯ ಪಂದ್ಯದಲ್ಲಿ ಇಂಗ್ಲೆಂಡ್​ನ ಬೆನ್ ಲೇನ್- ಸೀನ್ ವೆಂಡಿ ವಿರುದ್ಧ 21-17, 21-19 ನೇರ ಸೆಟ್​ಗಳಿಂದ ಯುವ ಜೋಡಿ ಗೆಲುವು ಸಾಧಿಸಿದರು. ಆದ್ರೆ ಕ್ವಾರ್ಟರ್​ ಫೈನಲ್​​​ ಹಂತಕ್ಕೆ ತಲುಪುವಲ್ಲಿ ವಿಫಲರಾಗಿದ್ದಾರೆ. ಗ್ರೂಪ್​​ ಎ ನಲ್ಲಿ ಉತ್ತಮ ಸರಾಸರಿ ಹೊಂದದ ಕಾರಣ ಈ ಜೋಡಿ, ಗ್ರೂಪ್​​ ಸ್ಟೇಜ್​​ನಿಂದಲೇ ನಿರ್ಗಮಿಸಬೇಕಾಯ್ತು. ಈ ಗುಂಪಿನಲ್ಲಿ ಭಾರತ, ಇಂಡೋನೇಷಿಯಾ, ಚೈನೀಸ್ ತೈಪೆ ಕ್ರಮವಾಗಿ ಮೂರು ಪಂದ್ಯಗಳನ್ನ ಗೆದ್ದು , 2 ಪಂದ್ಯಗಳಲ್ಲಿ ಮುಖಭಂಗ ಅನುಭವಿಸಿವೆ. ಆದ್ರೆ ಸರಾಸರಿ ಆಧಾರದಲ್ಲಿ ಮೊದಲೆರೆಡು ಸ್ಥಾನ ಕಾಯ್ದುಕೊಂಡಿದ್ದ ಇಂಡೋನೇಷಿಯಾ ಮತ್ತು ಚೈನೀಸ್ ತೈಪೆ ಕ್ವಾರ್ಟರ್​​ ಫೈನಲ್​ಗೆ ಲಗ್ಗೆಯಿಟ್ಟಿತು.

 

The post ಬ್ಯಾಡ್ಮಿಂಟನ್ ಡಬಲ್ಸ್​- ಗೆದ್ದರೂ ಒಲಿಂಪಿಕ್ಸ್​ನಿಂದ ನಿರ್ಗಮಿಸಿದ ರಾಂಕಿ ರೆಡ್ಡಿ, ಚಿರಾಗ್ ಶೆಟ್ಟಿ appeared first on News First Kannada.

Source: newsfirstlive.com

Source link