ಪ್ರಭಾಸ್​​ ಬೆನ್ನಲ್ಲೇ ರಜನಿಕಾಂತ್​​​ ಜತೆ ರೊಮ್ಯಾನ್ಸ್​ಗೆ ದೀಪಿಕಾ ರೆಡಿ!

ಪ್ರಭಾಸ್​​ ಬೆನ್ನಲ್ಲೇ ರಜನಿಕಾಂತ್​​​ ಜತೆ ರೊಮ್ಯಾನ್ಸ್​ಗೆ ದೀಪಿಕಾ ರೆಡಿ!

ಅಣ್ಣಾಥೆ ಬೆನ್ನಲ್ಲೇ ನಟ ರಜನಿಕಾಂತ್​ ಮತ್ತೊಂದು ಸಿನಿಮಾಗೆ ಸಹಿ ಹಾಕಿದ್ದಾರೆ ಎನ್ನಲಾಗಿದೆ. ಈಗಾಗಲೇ ರಜನೀಕಾಂತ್​​​ ಕಾಲ್​ಶೀಟ್​​ ಖಾತ್ರಿಯಾಗಿದ್ದು ಹೊಸ ಸಿನಿಮಾಗಾಗಿ ನಟಿ ದೀಪಿಕಾ ಪಡುಕೋಣೆ ಲಾಕ್​​ ಮಾಡಲು ಚಿತ್ರತಂಡ ಮುಂದಾಗಿದೆ. ಹೀಗಾಗಿಯೇ ಚಿತ್ರಕ್ಕೆ ನಾಯಕಿಯಾಗಿ ದೀಪಿಕಾ ಪಡುಕೋಣೆ ಕಾಲ್​ ಶೀಟ್​ ಕೇಳಲಾಗಿದೆ ಎಂಬ ಸುದ್ದಿ ಬಾಲಿವುಡ್​​ನಲ್ಲಿ ಹರಿದಾಡುತ್ತಿದೆ.

blank

ನಿರ್ದೇಶಕ ದೇಸಿಂಗ್​ ಪೆರಿಯಸ್ವಾಮಿ ಜತೆ ರಜನೀಕಾಂತ್​​ ಕೈ ಜೋಡಿಸಿದ್ದಾರಂತೆ. ಸದ್ಯದಲ್ಲೇ ಅಣ್ಣಾಥೆ ಸಿನಿಮಾ ದೀಪಾವಳಿಗೆ ರಿಲೀಸ್​ ಆಗಲಿದೆ. ಇದಾದ ಕೂಡಲೇ ರಜನೀಕಾಂತ್​​ ಹೊಸ ಚಿತ್ರ ಕೈಗೆತ್ತಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

blank

ಇನ್ನು, ದೇಸಿಂಗ್​ ಪೆರಿಯಸ್ವಾಮಿ ಈಗಾಗಲೇ ರಜನಿಗೆ ಸಿನಿಮಾ ಕಥೆ ಹೇಳಿದ್ದಾರೆ. ಸಿನಿಮಾದ ನಾಯಕಿ ಪಾತ್ರಕ್ಕೆ ದೀಪಿಕಾ ಪಡುಕೋಣೆ ಆಯ್ಕೆಯಾಗಿದ್ದಾರೆ. ಚಿತ್ರದ ಇತರ ತಾರಬಳಗದ ಹುಟುಕಾಟದಲ್ಲಿದೆ ಚಿತ್ರತಂಡ.

blank

ಈ ಹಿಂದೆ ರಜನಿ ಜೊತೆ ಕೊಚಡಿಯನ್​ ಸಿನಿಮಾದಲ್ಲಿ ದೀಪಿಕಾ ಕಾಣಿಸಿಕೊಂಡಿದ್ದರು. ಈಗ ಮತ್ತೊಮ್ಮೆ ರಜನಿ ಸಿನಿಮಾದಲ್ಲಿ ದೀಪಿಕಾ ನಟಿಸುತ್ತಿದ್ದು ಸದ್ಯದಲ್ಲೇ ಚಿತ್ರದ ಶೂಟಿಂಗ್​​ ಶುರುವಾಗಲಿದೆಯಂತೆ.

The post ಪ್ರಭಾಸ್​​ ಬೆನ್ನಲ್ಲೇ ರಜನಿಕಾಂತ್​​​ ಜತೆ ರೊಮ್ಯಾನ್ಸ್​ಗೆ ದೀಪಿಕಾ ರೆಡಿ! appeared first on News First Kannada.

Source: newsfirstlive.com

Source link