3 ಬಾರಿ ಶಾಸಕನಾಗಿದ್ದೇನೆ, ದಲಿತನೂ ಆಗಿದ್ದೇನೆ ಸಚಿವ ಸ್ಥಾನ ನೀಡಿ: ದುರ್ಯೋಧನ ಐಹೊಳೆ

ಚಿಕ್ಕೋಡಿ: ನಾನು 3 ಬಾರಿ ಶಾಸಕನಾಗಿದ್ದೇನೆ, ದಲಿತನೂ ಆಗಿದ್ದೇನೆ. ಈ ಬಾರಿ ನನಗೂ ಸಚಿವ ಸ್ಥಾನವನ್ನು ನೀಡಬೇಕು ಅಂತ ರಾಯಬಾಗ ಕ್ಷೇತ್ರದ ಬಿಜೆಪಿ ಶಾಸಕ ದುರ್ಯೋಧನ ಐಹೊಳೆ ಹೇಳಿದ್ದಾರೆ.

ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಕಳೆದ 25 ವರ್ಷಗಳಿಂದ ರಾಯಬಾಗ ಮತಕ್ಷೇತ್ರಕ್ಕೆ ಸಚಿವ ಸ್ಥಾನ ಸಿಕ್ಕಿಲ್ಲ. ಕಳೆದ ಬಾರಿಯೂ ನನ್ನನ್ನ ಕಡೆಗಣನೆ ಮಾಡಲಾಗಿದೆ. ಈ ಬಾರಿ ನನಗೆ ಸಚಿವ ಸ್ಥಾನ ನೀಡಬೇಕು. ಮೂರು ಬಾರಿ ಶಾಸಕನಾಗಿ ಆಯ್ಕೆ ಆಗಿದ್ದೇನೆ, ದಲಿತನೂ ಇದ್ದೇನೆ ನನಗೂ ಸಚಿವ ಸ್ಥಾನ ನೀಡಿ ಎಂದು ಒತ್ತಾಯಿಸಿದರು. ಇದನ್ನೂ ಓದಿ:  ಮೂರ್ನಾಲ್ಕು ದಿನದಲ್ಲಿ ಮುಖ್ಯಮಂತ್ರಿ ಆಯ್ಕೆ ಆಗಲಿದೆ: ಬೊಮ್ಮಾಯಿ

ಬೆಳ್ಳಂಬೆಳಗ್ಗೆ ಶಾಸಕ ದುರ್ಯೋಧನ ಐಹೊಳೆ ಮನೆಗೆ ಜಮಾಯಿಸಿದ್ದ ಬೆಂಬಲಿಗರು ದುರ್ಯೋಧನ ಐಹೊಳೆಗೆ ಸಚಿವ ಸ್ಥಾನ ನೀಡಲೇಬೇಕು ಎಂದು ಹೇಳಿದ್ದಾರೆ. ಸಚಿವ ಸ್ಥಾನದ ಆಕಾಂಕ್ಷೆ ಹೊತ್ತು ಬೆಂಗಳೂರಿನತ್ತ ಪ್ರಯಾಣ ಬೆಳಿಸಿರುವ ದುರ್ಯೋಧನ ಅವರು ಇಂದು ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಗೊವೀಂದ ಕಾರಜೋಳ ಹಾಗೂ ಯಡಿಯೂರಪ್ಪ ಅವರನ್ನು ಭೇಟಿ ಮಾಡಲಿದ್ದಾರೆ.

The post 3 ಬಾರಿ ಶಾಸಕನಾಗಿದ್ದೇನೆ, ದಲಿತನೂ ಆಗಿದ್ದೇನೆ ಸಚಿವ ಸ್ಥಾನ ನೀಡಿ: ದುರ್ಯೋಧನ ಐಹೊಳೆ appeared first on Public TV.

Source: publictv.in

Source link