ಕುಖ್ಯಾತ ಮನೆಗಳ್ಳನನ್ನು ಚಾಕುವಿನಿಂದ ಇರಿದು ಬರ್ಬರ ಹತ್ಯೆ

ಕುಖ್ಯಾತ ಮನೆಗಳ್ಳನನ್ನು ಚಾಕುವಿನಿಂದ ಇರಿದು ಬರ್ಬರ ಹತ್ಯೆ

ಕಲಬುರಗಿ: ಕುಖ್ಯಾತ ಮನೆಗಳ್ಳನನ್ನು ಬರ್ಬರ ಹತ್ಯೆ ಮಾಡಿರುವ ಘಟನೆ ಕಲಬುರಗಿ ಹೊರವಲಯದ ಕೆರೆ ಭೋಸಗಾ ಕ್ರಾಸ್ ನಡೆದಿದ್ದು, ಚಾಕುವಿನಿಂದ ಇರಿದು ಆತನ್ನನು ಕೊಲೆ ಮಾಡಲಾಗಿದೆ.

ತಾಜಸುಲ್ತಾನಪುರ ಗ್ರಾಮದ ನಿವಾಸಿ ಮಹೇಶ್ ಚಿಡರಗುಂಪಿ (38) ಕೊಲೆಯಾದ ವ್ಯಕ್ತಿಯಾಗಿದ್ದು, ನಿನ್ನೆ ಸಹೋದರನ ಮಗಳ ಕಾರ್ಯಕ್ರಮವಿದ್ದ ಸಮಯದಲ್ಲೇ ಭೀಕರವಾಗಿ ಹತ್ಯೆ ಮಾಡಲಾಗಿದೆ.

ಘಟನೆ ಸಂಬಂಧ ಕಲಬುರಗಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಮೃತ ಮಹೇಶ್​ ಹಾಡುಹಗಲೇ ಮನೆಗಳ್ಳತನ ಮಾಡುವುದರಲ್ಲಿ ನಿಸ್ಸೀಮನಾಗಿದ್ದ. ಕಲಬುರಗಿ ನಗರದ ಬಹುತೇಕ ಎಲ್ಲಾ ಠಾಣೆಗಳಲ್ಲೂ ಈತನ ವಿರುದ್ಧ ಕಳ್ಳತನದ ಕೇಸ್ ದಾಖಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ.

The post ಕುಖ್ಯಾತ ಮನೆಗಳ್ಳನನ್ನು ಚಾಕುವಿನಿಂದ ಇರಿದು ಬರ್ಬರ ಹತ್ಯೆ appeared first on News First Kannada.

Source: newsfirstlive.com

Source link