ಬಿಗ್​ಬಾಸ್ ಮನೆಯಲ್ಲಿ ಮಿಡ್​ ನೈಟ್​ ಎಲಿಮಿನೇಷನ್ ಶಾಕ್.. ಮನೆಯಿಂದಾಚೆ ಹೋಗೋದು ಇವರೇನಾ..?

ಬಿಗ್​ಬಾಸ್ ಮನೆಯಲ್ಲಿ ಮಿಡ್​ ನೈಟ್​ ಎಲಿಮಿನೇಷನ್ ಶಾಕ್.. ಮನೆಯಿಂದಾಚೆ ಹೋಗೋದು ಇವರೇನಾ..?

ಕಿಚ್ಚ ಸುದೀಪ್‌ ಎಲಿಮನೇಟ್ ಆದ ಸದಸ್ಯರನ್ನ ಹೆಸರು ತೆಗೆದುಕೊಂಡು ನಂತರ ಅವರ ಜೊತೆ ಮಾತಾಡೋದು ವಾಡಿಕೆ. ಆದ್ರೆ, ಈ ವಾರ ಈ ರೀತಿಯಾಗಿಲ್ಲ. ಯಾಕಂದ್ರೆ, ಬಿಗ್‌ಬಾಸ್ ಮಿಡ್‌ನೈಟ್ ಶಾಕ್ ಕೊಡಲು ನಿರ್ಧರಿಸಿದ್ದರು. ಆ ಶಾಕ್ ಯಾವಾಗ ಅನ್ನೋ ಪ್ರಶ್ನೆ ಇದ್ದೇ ಇತ್ತು. ಕೊನೆಗೂ ಶಾಕ್ ಯಾವಾಗ ಅನ್ನೋದು ಗೊತ್ತಾಗಿಬಿಟ್ಟಿದೆ. ಅದು ಇವತ್ತೇ!!

ಬಿಗ್‌ಬಾಸ್ ಮನೆಯಲ್ಲಿ ಟೆಲಿಫೋನ್ ಬೂತ್ ಇದೆ. ಆ ಫೋನ್‌ನ ಮೂಲಕ ಎಲ್ಲಾ ಸೂಚನೆ ನೀಡಲಾಗ್ತಿದೆ. ಟ್ವಿಸ್ಟ್ ಅಂದ್ರೆ, ಈ ಟೆಲಿಫೋನ್‌ ಗೆಳೆಯನೇ ಮಿಡ್‌ ನೈಟ್ ಶಾಕ್ ಕೊಡೋದು. ಈತನೇ ಓರ್ವ ಸದಸ್ಯನನ್ನ ಮನೆಯಿಂದ ಹೊರಗೆ ಕಳುಹಿಸೋದು. ಇದು ಪಕ್ಕಾ ಆಗಿದೆ. ಜೊತೆಗೆ ಇವತ್ತಿನ ಎಪಿಸೋಡ್‌ನಲ್ಲಿ ಮಿಡ್‌ನೈಟ್‌ ಎಲಿಮನೇಷನ್ ಪ್ರಸಾರವಾಗ್ಲಿದೆ.

blank

ಸದ್ಯ ಪ್ರೊಮೋ ರಿಲೀಸ್​ ಮಾಡಿದ್ದು, ಇದ್ರಲ್ಲಿ ಟೆಲಿಫೋನ್​ ಮೂಲಕಾನೆ ನಾಮಿನೇಟ್​ ಆದವರ ಬಿಗ್​ ಮನೆಯ ಅನುಭವ ಕೇಳಲಾಗಿದೆ. ಸದಸ್ಯರು ಮಾತನಾಡುವಾಗಲೇ ಎರಡು ನಿಮಿಷದಲ್ಲಿ ಮೈನ್​ ಡೋರ್​ ಓಪನ್​ ಆದ್ರೆ ಅವರೇ ಹೊರ ಹೋಗುವುದು ಅಂತಾ ಟೆಲಿಫೋನ್​ನಿಂದ ಸಂದೇಶ ಬರುತ್ತದೆ. ಇವತ್ತಿನ ಎಪಿಸೋಡ್‌ನಲ್ಲಿ ಮಿಡ್‌ನೈಟ್‌ ಎಲಿಮನೇಷನ್‌ ಪ್ರಸಾರವಾಗ್ಲಿದೆ.

ಕಳೆದ ವಾರ ನಾಮಿನೇಟ್ ಆಗಿರೋ ಶುಭಾ, ದಿವ್ಯಾ ಉರುಡುಗ, ಶಮಂತ್​, ಪ್ರಶಾಂತ್​, ಚಕ್ರವರ್ತಿ ಪೈಕಿ ಒಬ್ಬರು ಔಟ್ ಆಗ್ಲಿದ್ದಾರೆ. ಒಂದು ಲೆಕ್ಕಾಚಾರ ಹಾಕೋದಾದ್ರೆ, ದಿವ್ಯಾ ಉರುಡುಗ ಈ ವಾರ ಚೆನ್ನಾಗಿಯೇ ಆಡಿದ್ದಾರೆ. ಇನ್​ಫ್ಯಾಕ್ಟ್​ ಅವರಿಗೆ ಸಾಕಷ್ಟು ಗಾಯಗಳಾಗಿದ್ದವು, ಇದ್ರ ಮಧ್ಯೆ ಕೂಡ ತಮ್ಮ ಬೆಸ್ಟ್​ ಪರ್​ಫಾರ್ಮೆನ್ಸ್​​ ನೀಡಿದ್ದು, ಫಾನ್ಸ್​ ಬೆಸ್​ ಕೂಡ ಚೆನ್ನಾಗಿಯೇ ಇದೆ.

blank

ಇನ್ನೂ ಶಮಂತ್​ ಮತ್ತು ಪ್ರಶಾಂತ್​.. ಶಮಂತ್​ ತಮ್ಮ ಹಾಡುಗಳ ಮೂಲಕ ಜನರ ಮನಸ್ಸನ್ನು ಗೆಲ್ಲುವ ಪ್ರಯತ್ನ ಮಾಡುತ್ತಲೇ ಇದ್ದಾರೆ. ಒಂದು ಹಂತಕ್ಕೆ ನೋಡೋದಾದ್ರೆ ಸೋಶಿಯಲ್​ ಮಿಡಿಯಾದಲ್ಲಿ ಅವರ ಪರ ಕೂಗು ಜೋರಾಗಿಯೇ ಇದೆ. ಇನ್ನೂ ಪ್ರಶಾಂತ್​ಗೆ ಮನೆಯವರೆಲ್ಲ ಕಳಪೆ ನೀಡಿದ್ರು ಆದ್ರೆ ಇದಕ್ಕೆ ಜನ ಪ್ರಶಾಂತ್​ ಪರ ಬ್ಯಾಟಿಂಗ್​ ಮಾಡಿದ್ರು. ಅಷ್ಟೇ ಅಲ್ಲದೇ ಕಿಚ್ಚನ ಚಪ್ಪಾಳೆ ಕೂಡ ಸಿಕ್ಕಿದೆ. ಇವರು ಎಲಿಮಿನೇಟ್​ ಆಗುವ ಚಾನ್ಸ್​ ಕೊಂಚ ಕಡಿಮೆನೇ ಬಿಡಿ.

blank

ಇನ್ನು ಉಳಿದವರೇ ಶುಭಾ ಪೂಂಜಾ, ಚಕ್ರವರ್ತಿ ಚಂದ್ರಚೂಡ್​. ಇವರಿಬ್ಬರ ಮೇಲೆ ಹೆಚ್ಚು ಎಲಿಮಿನೇಶನ್​ ಕತ್ತಿ ವಾಲುತ್ತಿದೆ. ಇದ್ರಲ್ಲಿ ಶುಭಾ ಎಂಟರ್​ಟೈನ್ಮೆಂಟ್​ನಲ್ಲಿ ಎತ್ತಿದ ಕೈ. ಆದ್ರೆ ಟಾಸ್ಕ್​ ವಿಚಾರ ಬಂದಾಗ ಎಡವಟ್ಟು ಮಾಡ್ಕೋತಾರೆ. ಇತ್ತ ಚಕ್ರವರ್ತಿ ಬಗ್ಗೆ ಹೇಳೋದಾದ್ರೆ ಅವರ ಮಾತೇ ಅವರಿಗೆ ಮುಳ್ಳಾಗುವ ಚಾನ್ಸ್​ ಇದೆ. ಕೆಲವೊಂದು ಸಾರಿ ಚಕ್ರವರ್ತಿ ತಮ್ಮ ವರ್ತನೆಗಳಿಂದಾ ಜನರ ಕೆಂಗಣ್ಣಿಗೂ ಗುರಿಯಾಗಿದ್ದಾರೆ. ಹಾಗಂತ ಅಲ್ಲಗಳೆಯುವಂತಿಲ್ಲ. ಯಾಕಂದ್ರೆ ಅವರು ಬಿಗ್​ ಮನೆಯಲ್ಲಿ ಈಗಾಗಲೇ 80 ಕ್ಕೂ ಹೆಚ್ಚು ದಿನಗಳನ್ನ ಪೂರೈಸಿದ್ದಾರೆ.

ಒಟ್ನಲ್ಲಿ ಮಿಡ್​ನೈಟ್​ ಎಲಿಮಿನೇಟ್​ ಆಗೋದು ಪಕ್ಕಾ. ಆದ್ರೆ ಯಾರ್​ ಆಗ್ತಾರೆ ಅನ್ನೋದೇ ಸಸ್ಪೆನ್ಸ್​. ಯಾರ್​ ಆಗ್ಬಹುದು ಅನ್ನೋ ಅಂದಾಜು ನಿಮಗೇನಾದ್ರೂ ಇದ್ರೆ ಕಮೆಂಟ್​ ಮಾಡಿ.

The post ಬಿಗ್​ಬಾಸ್ ಮನೆಯಲ್ಲಿ ಮಿಡ್​ ನೈಟ್​ ಎಲಿಮಿನೇಷನ್ ಶಾಕ್.. ಮನೆಯಿಂದಾಚೆ ಹೋಗೋದು ಇವರೇನಾ..? appeared first on News First Kannada.

Source: newsfirstlive.com

Source link