ಮನೆ ಬಿಟ್ಟು ಹೋದ ಪತ್ನಿ- ನೇಣಿಗೆ ಶರಣಾದ ಪತಿ

ಬೆಂಗಳೂರು/ನೆಲಮಂಗಲ: ಕ್ಷುಲಕ ಕಾರಣಕ್ಕೆ ಮನೆ ಬಿಟ್ಟು ಹೋದ ಪತ್ನಿ ವಿಚಾರವಾಗಿ ಮನೊಂದು ಪತಿ ನೇಣಿಗೆ ಶರಣಾಗಿರುವ ಘಟನೆ ನೆಲಮಂಗಲದಲ್ಲಿ ನಡೆದಿದೆ.

ಶಿವರಾಮ್ (42) ನೇಣಿಗೆ ಶರಣಾಗಿದ್ದಾನೆ. ಕೌಟುಂಬಿಕ ಕಲಹ ಹಿನ್ನೆಲೆ ಹೆಂಡತಿ ಮನೆ ಬಿಟ್ಟು ಹೋಗಿದ್ದಾಳೆ. ಈ ಕುರಿತಾಗಿ ಮನನೊಂದ ಗಂಡ ತಾನು ವಾಸವಾಗಿದ್ದ ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ. ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಡಾಬಸ್‍ಪೇಟೆಯ ಶಿವಗಂಗಾ ವೃತ್ತದಲ್ಲಿನ ಮನೆಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: 3 ಬಾರಿ ಶಾಸಕನಾಗಿದ್ದೇನೆ, ದಲಿತನೂ ಆಗಿದ್ದೇನೆ ಸಚಿವ ಸ್ಥಾನ ನೀಡಿ: ದುರ್ಯೋಧನ ಐಹೊಳೆ

ಕೆಲ ದಿನಗಳ ಹಿಂದೆ ಪತ್ನಿ ಮನೆ ಬಿಟ್ಟು ಹೋಗಿದ್ದಳು. ಪತ್ನಿ ಇಲ್ಲದೆ ಮನನೊಂದ ಪತಿ ಯಾರು ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾನೆ. ಕಳೆದ ಮೂರು ದಿನಗಳಿಂದ ಮನೆಯ ಬಾಗಿಲು ತೆರೆಯದ ಹಿನ್ನೆಲೆ ಸ್ಥಳೀಯ ನೋಡಿದ್ದಾರೆ. ಎರಡು ದಿನಗಳ ಹಿಂದೆ ನೇಣಿಗೆ ಶರಣಾಗಿದ್ದು, ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತಿದ್ದಾರೆ.

The post ಮನೆ ಬಿಟ್ಟು ಹೋದ ಪತ್ನಿ- ನೇಣಿಗೆ ಶರಣಾದ ಪತಿ appeared first on Public TV.

Source: publictv.in

Source link