ಅಧಿಕಾರಕ್ಕಾಗಿ ಹಿಂದೆಯೂ ಲಾಬಿ ಮಾಡಿಲ್ಲ,‌ ಮುಂದೆಯೂ ‌ಮಾಡಲ್ಲ- ಮುರುಗೇಶ್ ನಿರಾಣಿ

ಅಧಿಕಾರಕ್ಕಾಗಿ ಹಿಂದೆಯೂ ಲಾಬಿ ಮಾಡಿಲ್ಲ,‌ ಮುಂದೆಯೂ ‌ಮಾಡಲ್ಲ- ಮುರುಗೇಶ್ ನಿರಾಣಿ

ಬೆಂಗಳೂರು: ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ನಂತರ ಇದೀಗ ಮುಂದಿನ ಸಿಎಂ ಆಯ್ಕೆ ಕಸರತ್ತು ನಡೆಯುತ್ತಿದೆ. ಈ ಮಧ್ಯೆ ಸುದ್ದಿಗೋಷ್ಠಿ ಕರೆದು ಮಾತನಾಡಿದ ಮಾಜಿ ಸಚಿವ ಮುರುಗೇಶ್ ನಿರಾಣಿ 120 ಶಾಸಕರೂ ಸಿಎಂ ಆಗೋಕೆ ಅರ್ಹರು ಎಂದಿದ್ದಾರೆ.

ಉಮೇಶ್ ಕತ್ತಿ ಅವರು ಉತ್ತರ ಕರ್ನಾಟಕದವರೇ ಸಿಎಂ ಆಗಬೇಕು ಎಂದು ಹೇಳಿದ್ದಾರೆ..

ಯಡಿಯೂರಪ್ಪ ಮಾರ್ಗದರ್ಶನ.. ಸಂಘ ಪರಿಹಾರದ ಮಾರ್ಗದರ್ಶನದಲ್ಲಿ ಸಿಎಂ ಆಯ್ಕೆ ಆಗುತ್ತದೆ. ಹೈಕಮಾಂಡ್ ನಿಂದಲೂ ಇಂದು ರಾಜ್ಯಕ್ಕೆ ಬರುತ್ತಿದ್ದಾರೆ. ನಾನು ಸಿಎಂ ಸ್ಥಾನಕ್ಕೆ ಲಾಬಿ‌ ಮಾಡಿಲ್ಲ. ಅಧಿಕಾರಕ್ಕಾಗಿ ಹಿಂದೆಯೂ ಲಾಬಿ ಮಾಡಿಲ್ಲ,‌ ಮುಂದೆಯೂ ‌ಮಾಡಲ್ಲ. ಸಂಘ ಪರಿವಾರದವರ, ಪಕ್ಷದವರ ಸಂಘಟನೆ ಅವರಿಂದ ಮಾಹಿತಿಯನ್ನ ಹೈಕಮಾಂಡ್ ಪಡೆಯುತ್ತಿದೆ‌. ಯಾರಿಗೆ ಅವಕಾಶ ಕೊಟ್ಟರೂ ಸಂತೋಷದಿಂದ ಸ್ವೀಕಾರ ‌ಮಾಡ್ತೇವೆ.. ಉಮೇಶ್ ಕತ್ತಿ ಅವರು ಉತ್ತರ ಕರ್ನಾಟಕದವರೇ ಸಿಎಂ ಆಗಬೇಕು ಎಂದು ಹೇಳಿದ್ದಾರೆ.. ಕತ್ತಿ ಅವರ ಮಾತಿನಲ್ಲಿ ಯಾವುದೇ ರೀತಿಯ ತಪ್ಪಿಲ್ಲ.. ಯಾರಿಗೆ ಅವಕಾಶ ‌ಕೊಟ್ಟರೂ ಸಂತೋಷದಿಂದ ಸ್ವೀಕಾರ ಮಾಡುತ್ತೇವೆ ಎಂದು ಹೇಳಿದ್ದಾರೆ.

ಉಮೇಶ್ ಕತ್ತಿ ಉತ್ತರ ಕರ್ನಾಟಕ ಸಿಎಂ ಆಗಬೇಕು ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ.. ಅದು ಅವರ ಅಭಿಪ್ರಾಯ.. ಅವರ ಅಭಿಪ್ರಾಯ ಹೇಳಿದ್ದಾರೆ.. ಏನೇ ಹೇಳಿದ್ರು ಹೈಕಮಾಂಡ್ ನಿರ್ಧಾರ ಮಾಡುತ್ತೆ. ಹೈಕಮಾಂಡ್ ತೀರ್ಮಾನಕ್ಕೆ ನಾವು ಬದ್ಧರಾಗಿರುತ್ತೇವೆ. ನಮ್ಮ ಪಕ್ಷ ನಮಗೆ ಏನು ಜವಾಬ್ದಾರಿ ಕೊಡುತ್ತೋ ಅದನ್ನ ಮಾಡೋಕೆ‌ ನಾನು ರೆಡಿ ಇದೀನಿ ಎಂದಿದ್ದಾರೆ.

ತಂದೆ ಸ್ಥಾನದಲ್ಲಿ ನಿಂತು ನಮ್ಮನ್ನು ಯಡಿಯೂರಪ್ಪ ಬೆಳೆಸಿದ್ರು..

ಬಿಜೆಪಿ ದಕ್ಷಿಣ ಮಟ್ಟದಲ್ಲಿ ಕಟ್ಟಿದ್ದು ಬಿಎಸ್ ವೈ.. ಕರ್ನಾಟಕದಲ್ಲಿ ಬಿಜೆಪಿ ಅತಿ ಹೆಚ್ಚು ಸಂಖ್ಯೆಯಲ್ಲಿ ಶಾಸಕರನ್ನು ಗೆಲ್ಲಿಸಿದ್ದಾರೆ. ಯಡಿಯೂರಪ್ಪ ಗುಡುಗಿದರ ವಿಧಾನಸೌಧದ ‌ನಡುಗುವುದು ಎಂಬ ಸ್ಲೋಗನ್ ಹೇಳ್ತಿದ್ದೇವೆ. ತಂದೆ ಸ್ಥಾನದಲ್ಲಿ ನಿಂತು ನಮ್ಮನ್ನು ಯಡಿಯೂರಪ್ಪ ಬೆಳೆಸಿದ್ರು. ನಿನ್ನೆ ರಾಜೀನಾಮೆ ‌ಕೊಟ್ಟಿದ್ದು ಬಹಳ ನೋವಾಗಿದೆ.. ಇದು ಬಿಜೆಪಿಯಲ್ಲಿ ಅನಿವಾರ್ಯ. 75ವರ್ಷದ ಬಳಿಕ ಯುವಕರಿಗೆ ಬಿಟ್ಟು ಕೊಡಬೇಕು. ಇದು ಬಿಜೆಪಿ ಸಿದ್ಧಾಂತ.. ಈಗ ಹೊಸ ನಾಯಕರ ಆರಿಸುವ ಸಂದರ್ಭ.. ಹೈಕಮಾಂಡ್ ಹೊಸ ನಾಯಕರ ಆಯ್ಕೆ ಮಾಡ್ತಾರೆ. ಬಿಜೆಪಿಯ ಒಟ್ಟು ಶಾಸಕರು ಸಿಎಂ ಸ್ಥಾನಕ್ಕೆ ಯೋಗ್ಯರಿದ್ದಾರೆ. ಯಾರೇ ಸಿಎಂ ಆದ್ರೂ ಅದಕ್ಕೆ ಸಂಘಪರಿವಾರ ಹಾಗೂ ಯಡಿಯೂರಪ್ಪ ಮಾರ್ಗದರ್ಶನ ಇರುತ್ತೆ ಎಂದು ಹೇಳಿದ್ದಾರೆ.

The post ಅಧಿಕಾರಕ್ಕಾಗಿ ಹಿಂದೆಯೂ ಲಾಬಿ ಮಾಡಿಲ್ಲ,‌ ಮುಂದೆಯೂ ‌ಮಾಡಲ್ಲ- ಮುರುಗೇಶ್ ನಿರಾಣಿ appeared first on News First Kannada.

Source: newsfirstlive.com

Source link