ಐದಕ್ಕಿಂತ ಹೆಚ್ಚು ಮಕ್ಕಳನ್ನ ಹೆತ್ತರೆ ವಿಶೇಷ ಸೌಲಭ್ಯ ಕೊಡ್ತೀವಿ -ಕೇರಳ ಕ್ಯಾಥೋಲಿಕ್ ಚರ್ಚ್ ಘೋಷಣೆ

ಐದಕ್ಕಿಂತ ಹೆಚ್ಚು ಮಕ್ಕಳನ್ನ ಹೆತ್ತರೆ ವಿಶೇಷ ಸೌಲಭ್ಯ ಕೊಡ್ತೀವಿ -ಕೇರಳ ಕ್ಯಾಥೋಲಿಕ್ ಚರ್ಚ್ ಘೋಷಣೆ

ತಿರುವನಂತಪುರಂ: ಇತ್ತೀಚಿನ ದಿನಗಳಲ್ಲಿ ಕ್ರಿಶ್ಚಿಯನ್​ ಸಮುದಾಯದ ಸಂಖ್ಯೆ ಕಡಿಮೆಯಾಗುತ್ತಿದ್ದು, ಸಮುದಾಯದಲ್ಲಿ ಜನನ ಪ್ರಮಾಣ ಶೇ.14ಕ್ಕಿಂತ ಕಡಿಮೆಯಾಗಿದೆ. ಆದ್ದರಿಂದ ಐದು ಅಥವಾ ಐದಕ್ಕಿಂತ ಹೆಚ್ಚು ಮಕ್ಕಳನ್ನು ಪಡೆದ ಕುಟುಂಬಕ್ಕೆ ಅಗತ್ಯವಿರುವ ವಿಶೇಷ ಸೌಲಭ್ಯಗಳನ್ನು ಏರ್ಪಡಿಸುವುದಾಗಿ ಕೇರಳದ ಕ್ಯಾಥೋಲಿಕ್ ಚರ್ಚ್ ಹೇಳಿಕೆ ನೀಡಿದೆ.

ಉತ್ತರ ಪ್ರದೇಶ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಜನಸಂಖ್ಯೆ ನಿಯಂತ್ರಣದ ಬಗ್ಗೆ ಚರ್ಚೆ ನಡೆಯುತ್ತಿರದ್ದರೇ ಸೆಂಟ್ರಲ್​ ಕೇರಳದ ಕ್ಯಾಥೋಲಿಕ್ ಚರ್ಚ್ ಮಾತ್ರ ಹೆಚ್ಚು ಮಕ್ಕಳನ್ನು ಪಡೆದ ಸಮುದಾಯದ ಕುಟುಂಬಗಳಿಗೆ ಕಲ್ಯಾಣ ಯೋಜನೆಯ ಅನ್ವಯ ಸೌಲಭ್ಯಗಳನ್ನು ನೀಡುವುದಾಗಿ ಹೇಳಿದೆ.

ಸಿರೋ-ಮಲಬಾರ್ ಚರ್ಚ್ ಅಡಿಯಲ್ಲಿ ಬರುವ ಪಾಲಾ ಡಯಾಸಿಸ್ನ ಕುಟುಂಬಗಳಿಗೆ ವಿಶೇಷ ಯೋಜನೆ ಸೌಲಭ್ಯಗಳನ್ನು ನೀಡುವುದಾಗಿ ಚರ್ಚ್​​ ಹೇಳಿದೆ. 2000 ಇಸವಿಯ ಬಳಿಕ ಮದುವೆಯಾಗಿ ಐದು.. ಅದಕ್ಕಿಂತ ಹೆಚ್ಚು ಮಕ್ಕಳನ್ನು ಪಡೆದ ಪೋಷಕರಿಗೆ ಪ್ರತಿ ತಿಂಗಳು 1,500 ರೂಪಾಯಿ ನಗದು. ಮಹಿಳೆಯರ 4ನೇ ಹೆರಿಗೆ ಬಳಿಕ ಚರ್ಚ್​​ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ.. ಚರ್ಚ್​​ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸ್ಕಾಲರ್​ಶಿಪ್ ನೀಡೋದಾಗಿ ಚರ್ಚ್​​ ಪ್ರಚಾರ ಮಾಡುತ್ತಿದೆ.

blank

ಮೊದಲು ಚರ್ಚ್​​ನಲ್ಲಿ ಮಾತ್ರ ಈ ಬಗ್ಗೆ ಪ್ರಚಾರ ಮಾಡುತ್ತಿದ್ದ ಚರ್ಚ್​​​.. ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದ್ದು, ಚರ್ಚ್​​ ನಡೆಯ ಬಗ್ಗೆ ಮಿಶ್ರ ಪ್ರತಿಕ್ರಿಯೆ ಬರುತ್ತಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಫ್ರಾ. ಫ್ಯಾಮಿಲಿ ಅಪೋಸ್ಟೊಲೇಟ್ ನಿರ್ದೇಶಕ ಜೋಸೆಫ್ ಕುಟ್ಟಿಯಾಂಕಲ್, ವಿಶೇಷವಾಗಿ ಕೋವಿಡ್​​​-19ರ ನಂತರದ ಸನ್ನಿವೇಶದಲ್ಲಿ ಈ ಬಗ್ಗೆ ಚಿಂತನೆ ನಡೆಸಲಾಗಿತ್ತು. ಅದು ದೊಡ್ಡ ಕುಟುಂಬಗಳಿಗೆ ಸಹಾಯವಾಗಲು ಯೋಜನೆ ಜಾರಿ ಮಾಡಲಾಗುತ್ತಿದೆ. ಎಷ್ಟು ಕುಟುಂಬಗಳಿಗೆ ಸೌಲಭ್ಯಗಳನ್ನು ನೀಡಲಾಗುತ್ತದೆ ಎಂಬ ಬಗ್ಗೆ ಇನ್ನಷ್ಟೇ ಫೈನಲ್​ ಮಾಡಬೇಕಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಕೇರಳ ಸರ್ಕಾರ 20211ರಲ್ಲಿ ಎರಡಕ್ಕಿಂತ ಹೆಚ್ಚು ಮಕ್ಕಳನ್ನ ಪಡೆದರೇ ದಂಡವನ್ನು ವಿಧಿಸಲು ಮುಂದಾಗಿತ್ತು. ಆದರೆ ಈ ವೇಳೆ ವಿವಿಧ ಕ್ಯಾಥೋಲಿಕ್​ ಚರ್ಚ್​ ಸೇರಿದಂತೆ ವಿವಿಧ ಸಂಘಟನೆಗಳು ಇದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದವು. ಕೇರಳ ರಾಜ್ಯ ರಚನೆಯಾದ ಸಂದರ್ಭದಲ್ಲಿ ರಾಜ್ಯದಲ್ಲಿ ಕ್ರಿಶ್ಚಿಯನ್​ ಸಮುದಾಯ ಶೇ.18.38 ರಷ್ಟೊಂದಿಗೆ ಎರಡನೇ ಅತಿ ದೊಡ್ಡ ಸಮುದಾಯವಾಗಿತ್ತು.

The post ಐದಕ್ಕಿಂತ ಹೆಚ್ಚು ಮಕ್ಕಳನ್ನ ಹೆತ್ತರೆ ವಿಶೇಷ ಸೌಲಭ್ಯ ಕೊಡ್ತೀವಿ -ಕೇರಳ ಕ್ಯಾಥೋಲಿಕ್ ಚರ್ಚ್ ಘೋಷಣೆ appeared first on News First Kannada.

Source: newsfirstlive.com

Source link