ಬೆಂಗಳೂರಿಗೆ ಬಂದಿಳಿದ ವೀಕ್ಷಕರ ಟೀಂ; ಇಂದೇ ಮುಂದಿನ ಸಿಎಂ ಆಯ್ಕೆ ಸಾಧ್ಯತೆ

ಬೆಂಗಳೂರಿಗೆ ಬಂದಿಳಿದ ವೀಕ್ಷಕರ ಟೀಂ; ಇಂದೇ ಮುಂದಿನ ಸಿಎಂ ಆಯ್ಕೆ ಸಾಧ್ಯತೆ

ಬೆಂಗಳೂರು: ಬಿ.ಎಸ್. ಯಡಿಯೂರಪ್ಪ ನಂತರದ ಮುಂದಿನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಚರ್ಚೆ ತಾರಕಕ್ಕೇರಿರುವ ಬೆನ್ನಲ್ಲೇ ಬೆಂಗಳೂರಿಗೆ ದೆಹಲಿಯಿಂದ ಬಿಜೆಪಿ ವೀಕ್ಷಕರ ತಂಡ ಆಗಮಿಸಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಸೇರಿದಂತೆ ಹಲವರನ್ನು ಒಳಗೊಂಡ ತಂಡ ಆಗಮಿಸಿದೆ. ಈ ತಂಡ ಸಿಎಂ ಆಯ್ಕೆ ಕಸರತ್ತು ನಡೆಸಲಿದೆ. ಇಂದು ರಾಜ್ಯ ರಾಜಕಾರಣದಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿದ್ದು ಇಂದೇ ಮುಖ್ಯಮಂತ್ರಿ ಆಯ್ಕೆ ನಡೆಯುವ ಸಾಧ್ಯತೆ ಇದೆ.

The post ಬೆಂಗಳೂರಿಗೆ ಬಂದಿಳಿದ ವೀಕ್ಷಕರ ಟೀಂ; ಇಂದೇ ಮುಂದಿನ ಸಿಎಂ ಆಯ್ಕೆ ಸಾಧ್ಯತೆ appeared first on News First Kannada.

Source: newsfirstlive.com

Source link