‘ರಾಣ’ ಶೂಟಿಂಗ್ ವೇಳೆ ಅವಘಡ; ಫೋಟೋಗ್ರಾಫರ್ ತಲೆಗೆ ಬಲವಾದ ಪೆಟ್ಟು

‘ರಾಣ’ ಶೂಟಿಂಗ್ ವೇಳೆ ಅವಘಡ; ಫೋಟೋಗ್ರಾಫರ್ ತಲೆಗೆ ಬಲವಾದ ಪೆಟ್ಟು

ಬೆಂಗಳೂರು: ರಾಣ ಚಿತ್ರದ ಶೂಟಿಂಗ್ ಸೆಟ್​ನಲ್ಲಿ ಅವಘಡ ಸಂಭವಿಸಿದ್ದು, ಸ್ಟಿಲ್ ಫೋಟೋಗ್ರಾಫರ್ ಪಳನಿ ತಲೆಗೆ ಬಲವಾದ ಪೆಟ್ಟು ಬಿದ್ದಿದೆ.

ಶ್ರೇಯಸ್ ಮಂಜು ಅಭಿನಯದ ನಂದ ಕಿಶೋರ್ ನಿರ್ದೇಶನದ ‘ರಾಣ’ ಚಿತ್ರದ ಚಿತ್ರೀಕರಣವು ಮಿನರ್ವ ಮಿಲ್​​ನಲ್ಲಿ ನಡೆಯುತ್ತಿತ್ತು. ಈ ವೇಳೆ ಅಚನಾಕ್ ಆಗಿ ಕಬ್ಬಿಣದ ಕಂಬ ತಲೆ ಮೇಲೆ ಬಿದ್ದಿದೆ. ಪಳನಿ ತಲೆಗೆ ಗಂಭೀರ ಗಾಯವಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯ ಫೋಟೋಗ್ರಫರ್ ಪಳನಿ ಅವರನ್ನ ಸುಗುಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

The post ‘ರಾಣ’ ಶೂಟಿಂಗ್ ವೇಳೆ ಅವಘಡ; ಫೋಟೋಗ್ರಾಫರ್ ತಲೆಗೆ ಬಲವಾದ ಪೆಟ್ಟು appeared first on News First Kannada.

Source: newsfirstlive.com

Source link