Bigg Boss ಮನೆಗೆ ಬಂದ ಹೊಸ ಅತಿಥಿ.. ರಾತ್ರಿಯೆಲ್ಲಾ ಆಟಗಾರರ ಜಾಗರಣೆ!

Bigg Boss ಮನೆಗೆ ಬಂದ ಹೊಸ ಅತಿಥಿ.. ರಾತ್ರಿಯೆಲ್ಲಾ ಆಟಗಾರರ ಜಾಗರಣೆ!

ಬಿಗ್​ ಮನೆಗೆ ಟೆಲಿಫೋನ್​ ಗೆಳೆಯ ಬಂದಿದ್ದಾನೆ. ಈ ವಾರ ಫಾರ್ಮೇಟ್​ ಪ್ರಕಾರ ಎಲಿಮಿನೇಶನ್ ಆಗ್ಲಿಲ್ಲ, ಇದು ಮನೆಯವರಿಗೆ ಸಕ್ಕತ್ ಟೆನ್ಶನ್​ ನೀಡ್ತಿದೆ. ರಾತ್ರಿ ಎಲ್ಲಾ ಜಾಗರಣೆ ಮಾಡುವ ಪರಿಸ್ಥಿತಿ ಬಂದಿದೆ.

ಈ ನಡುವೆ ಮನೆಯವರಿಗೆ ಏನೇ ಇನ್​ಸ್ಟ್ರಕ್ಷನ್​ ಬಂದರೂ ಅದು ಫೋನ್​ನಿಂದಲೇ ಅನ್ನೋದು ವಿಶೇಷ. ಟೆಲಿಫೋನ್​ ರಿಂಗ್​ ಕೇಳಿಸುತ್ತಿದ್ದಂತೆಯೇ ಮನೆಯವರು ಒಂದು ಕ್ಷಣ ಗಾಬರಿಯಾದ್ರು. ಒಬೊಬ್ಬರೇ ಓಡಾಡಕ್ಕೂ ಭಯ ಪಡ್ತಿದ್ದಾರೆ. ನಂತ್ರ ಟೆಲಿಫೋನ್​ ಗೆಳಯನ ಜೊತೆ ಎಲ್ಲರದ್ದೂ ಒಂದ್​ ರೌಂಡ್​ ಮಾತುಕತೆ ಆದ್ಮೇಲೆ ಕೊಂಚ ರಿಲ್ಯಾಕ್ಷ್​ ಆದ್ರು.

blank

ವೈಷ್ಣವಿಗೆ ಟೆಲಿಫೋನ್​ ಗೆಳೆಯ ಒಂದು ಟಾಸ್ಕ್​ ನೀಡಿದ್ರು. ಅದೇನಂದ್ರೆ, ಅವರಿಗೆ ಸೇರಿದ್ದ ಒಂದು ವಸ್ತುವನ್ನು ಹುಡುಕಲು ಸಂದೇಶ ನೀಡಿದ್ದರು. ಆದರೆ ವೈಷ್ಣವಿ ಎಷ್ಟೇ ಪ್ರಯತ್ನಪಟ್ಟರೂ ಆ ವಸ್ತು ಸಿಗಲೇ ಇಲ್ಲ. ಮನೆಯವರ ಸಹಾಯ ಪಡೆಯಬಹುದಾಗಿದ್ದ ಈ ಟಾಸ್ಕ್​ನ್ನು ಶುಭಾಗೆ ನೀಡಿದ್ರು.

ಇನ್ನೂ ಶುಭಾ ಕೇಳಬೇಕಾ? ಅವರು ಟಾಸ್ಕ್​ ಆಡುವ ಗ್ಯಾಪ್​ನಲ್ಲಿ ಬಚ್ಚಿಟ್ಟುಕೊಂಡರು. ಕಾರಣ ಮನೆಯಿಂದ ನಾಮಿನೇಟ್​ ಆದವರು ಯಾವಾಗಬೇಕಾದ್ರು, ಯಾರ್​ ಬೇಕಾದ್ರು ಮನೆಯಿಂದ ಹೊರ ನಡೆಯಬಹುದು ಹೇಳುವುದಕ್ಕೆ ಆಗಲ್ಲ ಅಂತಾ ಸುದೀಪ್​ ಹೇಳಿದ್ರು. ಇದನ್ನೆ ಅಡ್ವಾಂಟೆಸ್​ ಆಗಿ ತೆಗೆದುಕೊಂಡ ಶುಭಾ, ಎಲ್ಲರನ್ನೂ ಕನ್ಫೂಸ್​ ಮಾಡೋಣ ಅಂತಾ ಅನ್ಕೊಂಡ್ರು. ಆದರೆ ಅವರ ಆಟ ತುಂಬಾ ಹೊತ್ತು ನಡೆಯಲಿಲ್ಲ.

blank

ನಾಮಿನೇಟ್​ ಆದ ಕಂಟೆಸ್ಟಂಟ್​ಗಳಿಗೆ ಸಖತ್ ಕ್ವಾಟ್ಲೆ ಕೊಡುತ್ತಿರುವ ಟೆಲಿಫೋನ್​ ಗೆಳೆಯ, ಅವರ ಟೆನ್ಷನ್​ ಕಡಿಮೆ ಮಾಡಲು ಟಾಸ್ಕ್​ ಕೂಡ ನೀಡಿದ್ರು. ಈ ಟಾಸ್ಕ್​ ಏನಂದ್ರೇ ವಸ್ತುಗಳನ್ನು ನೋಡಿ, ಅವು ತೆಲುತ್ತವೆಯಾ ಇಲ್ಲ ಮುಳುಗುತ್ತವೆಯಾ ಎಂದು ಕಣ್ಣಂಚಲ್ಲಿ ಅಂದಾಜಿಸಿ ಹೇಳಬೇಕಿತ್ತು. ಈ ಟಾಸ್ಕ್​ನಲ್ಲಿ ದಿವ್ಯಾ ಉರುಡುಗ ವಿನ್​ ಆದ್ರು.

ಸುರೇಶ್​ಗೆ ಬ್ಲೂ ಡ್ರೇಸ್​ ಹಾಕೊಂಡು ರೆಡಿಯಾಗಲು ಹೇಳಿದ್ರು. ಅವರು ಕೂಡ ಡ್ರೇಸ್​ ಹಾಕಿ ಮಿಂಚಿದ್ರು. ಒಟ್ಟಿನಲ್ಲಿ ಅನಾಮಿಕ ವೈಸ್​ನಿಂದ ಒಂದ್​ ಕಡೆ ಗಾಬ್ರಿಯಾದ್ರೆ ಮತ್ತೊಂದು ಕಡೆ ಹೊಸ ಅನುಭವ ಪಡಿತ್ತಿದ್ದಾರೆ ಬಿಗ್​ ಮನೆಯವರು. ಇನ್ನೂ ಈ ವಾರ ಮಿಡ್​ ನೈಟ್​ ಎಲಿಮಿನೇಶನ್​ ಇದ್ದು ಯಾರು ಎಲಿಮಿನೇಟ್​ ಆಗ್ಬಹುದು ಎನ್ನುವ ಕೂತುಹಲ ವೀಕ್ಷಕರನ್ನು ಕಾಡ್ತಿದೆ.

blank

The post Bigg Boss ಮನೆಗೆ ಬಂದ ಹೊಸ ಅತಿಥಿ.. ರಾತ್ರಿಯೆಲ್ಲಾ ಆಟಗಾರರ ಜಾಗರಣೆ! appeared first on News First Kannada.

Source: newsfirstlive.com

Source link