ಜೊಲ್ಲೆ ಮೊಟ್ಟೆ ಡೀಲ್​​; ನವದೆಹಲಿಯಲ್ಲಿ ಪ್ರತಿಭಟನೆಗಳಿದಿದ್ದ ಕೈ ಕಾರ್ಯಕರ್ತರು ಪೊಲೀಸ್ ವಶಕ್ಕೆ

ಜೊಲ್ಲೆ ಮೊಟ್ಟೆ ಡೀಲ್​​; ನವದೆಹಲಿಯಲ್ಲಿ ಪ್ರತಿಭಟನೆಗಳಿದಿದ್ದ ಕೈ ಕಾರ್ಯಕರ್ತರು ಪೊಲೀಸ್ ವಶಕ್ಕೆ

ನವದೆಹಲಿ: ಬಡವರ ಹೊಟ್ಟೆ ಮೇಲೆ ಹೊಡೆದು ಮಕ್ಕಳು ಹಾಗೂ ಗರ್ಭಿಣಿ ಮಹಿಳೆಯರಿಗೆ ನೀಡುತ್ತಿದ್ದ ‘ಮಾತೃಪೂರ್ಣ’ ಯೋಜನೆಯಲ್ಲಿ ಹಣ ಮಾಡಲು ಮುಂದಾಗಿದ್ದ ಶಶಿಕಲಾ ಜೊಲ್ಲೆ ವಿರುದ್ಧ ನವದೆಹಲಿಯಲ್ಲಿ ಯುವ ಕಾಂಗ್ರೆಸ್​ ಕಾರ್ಯರ್ತರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಕೇಂದ್ರ ಮಹಿಳಾ ಮತ್ತು ಮಕ್ಕಳ ಖಾತೆ ಸಚಿವೆ ಸ್ಮೃತಿ ಇರಾನಿ ಅವರ ನಿವಾಸದ ಎದುರು ಕಾಂಗ್ರೆಸ್ ಪ್ರತಿಭಟನೆ ನಡೆಸಿ ಜೊಲ್ಲೆ ಬಂಧನಕ್ಕೆ ಆಗ್ರಹಿಸಿದರು.

blank

ಕಾಂಗ್ರೆಸ್​ ಕಾರ್ಯಕರ್ತರ ಪ್ರತಿಭಟನೆ ಜೋರಾಗುತ್ತಿದಂತೆ ಮಧ್ಯ ಪ್ರವೇಶ ಮಾಡಿದ್ದ ಪೊಲೀಸರು ಬಲವಂತವಾಗಿ ಕಾಂಗ್ರೆಸ್​ ಕಾರ್ಯಕರ್ತರನ್ನು ಸ್ಥಳದಿಂದ ಕರೆದುಕೊಂಡು ಹೋದರು. ಪ್ರತಿಭಟನೆ ಸಂದರ್ಭದಲ್ಲಿ ಮೊಟ್ಟೆ ಹಿಡಿದು ಘೋಷಣೆ ಕೂಗಿದ ಪ್ರತಿಭಟನಾಕಾರರು ಕೂಡಲೇ ಜಿಲ್ಲೆ ವಿರುದ್ಧ ತನಿಖೆ ಮಾಡಬೇಕು, ಅವರನ್ನು ಬಂಧಿಸಿ ಕ್ರಮಕೈಗೊಳ್ಳ ಬೇಕು ಆಗ್ರಹಿಸಿದರು.

blank

ಕಾಂಗ್ರೆಸ್​ ಕಾರ್ಯಕರ್ತರ ಪ್ರತಿಭಟನೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಭದ್ರತೆ ಕೈಗೊಂಡಿದ್ದ ಪೊಲೀಸರು ಕೇಂದ್ರ ಸಚಿವರ ನಿವಾಸ ಇರುವ ತುಘಲಕ್​ ರಸ್ತೆಯನ್ನು ಬ್ಯಾರಿಕೇಡ್​ ಅಳವಡಿಸಿ ಬಂದ್ ಮಾಡಿದ್ದರು. ಸಚಿವರ ಕಚೇರಿ ಮುತ್ತಿಗೆ ಹಾಕಲು ಯತ್ನಿಸಿದ ಕಾಂಗ್ರೆಸ್​ ಕಾರ್ಯಕರ್ತರ ಮೇಲೆ ಬಲ ಪ್ರಯೋಗಕ್ಕೆ ಮುಂದಾದ ಪೊಲೀಸರು ಪ್ರತಿಭಟನೆ ಮಾಡುತ್ತಿದ್ದ ಕಾರ್ಯಕರ್ತರನ್ನು ಬಲವಂತವಾಗಿ ಬಸ್ಸಿಗೆ ತುಂಬಿ ಸ್ಥಳದಿಂದ ಕರೆದುಕೊಂಡು ಹೋದರು. ಪ್ರತಿಭಟನೆಯಲ್ಲಿ ಸುಮಾರು 500ಕ್ಕೂ ಹೆಚ್ಚು ಕಾರ್ಯಕರ್ತರು ಭಾಗಿಯಾಗಿದ್ದರು.

 

The post ಜೊಲ್ಲೆ ಮೊಟ್ಟೆ ಡೀಲ್​​; ನವದೆಹಲಿಯಲ್ಲಿ ಪ್ರತಿಭಟನೆಗಳಿದಿದ್ದ ಕೈ ಕಾರ್ಯಕರ್ತರು ಪೊಲೀಸ್ ವಶಕ್ಕೆ appeared first on News First Kannada.

Source: newsfirstlive.com

Source link