ಸಿಎಂ ಸ್ಥಾನಕ್ಕಿಲ್ಲ ‘ಸಂತೋಷ’.. ಬದಲಾದ ರಾಜಕೀಯ ಲೆಕ್ಕಾಚಾರ

ಸಿಎಂ ಸ್ಥಾನಕ್ಕಿಲ್ಲ ‘ಸಂತೋಷ’.. ಬದಲಾದ ರಾಜಕೀಯ ಲೆಕ್ಕಾಚಾರ

ಬೆಂಗಳೂರು: ಸಿಎಂ ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ಬೆನ್ನಲ್ಲೇ ರಾಜ್ಯದ ಮುಖ್ಯಮಂತ್ರಿ ಯಾರಾಗ್ತಾರೆ ಅನ್ನೋ ಸಸ್ಪೆನ್ಸ್​ ಇನ್ನೂ ನಿಗೂಢವಾಗಿಯೇ ಉಳಿದಿದೆ. ಇದರ ಮಧ್ಯೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹೆಸರು ಪ್ರಬಲವಾಗಿ ಕೇಳಿಬಂದಿತ್ತು. ಇದೀಗ ಸಿಕ್ಕ ಮಾಹಿತಿ ಪ್ರಕಾರ, ಬಿ.ಎಲ್.​ ಸಂತೋಷ್ ಸಿಎಂ ರೇಸ್​ನಿಂದ ಬಹುತೇಕ ದೂರ ಇದ್ದಾರೆ ಎನ್ನಲಾಗಿದೆ.

ಸದ್ಯ ಬಿ.ಎಲ್. ಸಂತೋಷ್​ ಅವರು ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಅವರನ್ನ ಕೈಬಿಡಲು ಜೋಡೆತ್ತುಗಳಾದ ಕೇಂದ್ರ ಗೃಹಸಚಿವ ಅಮಿತ್ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿಗೆ ಮನಸಿಲ್ಲ ಎಂದು ಹೇಳಲಾಗಿದೆ.

ಸಿಎಂ ರೇಸ್​ನಿಂದ ಬಿ.ಎಲ್. ಸಂತೋಷ್ ದೂರವೇ ಉಳಿಯಲು ಪ್ರಮುಖವಾದ ಕಾರವೂ ಇದೆ. 2022 ರಲ್ಲಿ ಉತ್ತರ ಪ್ರದೇಶ ವಿಧಾನ ಸಭೆಗೆ ಚುನಾವಣೆ ನಡೆಯಲಿದೆ. ಈಗಾಗಲೇ ಉತ್ತರ ಪ್ರದೇಶದಲ್ಲಿ ಆಡಳಿತ ಚುಕ್ಕಾಣಿ ಹಿಡಿದಿರುವ ಬಿಜೆಪಿಗೆ, ಆ ವಿಧಾನಸಭೆಯ ಚುನಾವಣೆ ಬಹಳ ಮಹತ್ವದ್ದಾಗಿದೆ. ಅಲ್ಲದೇ ಉತ್ತರ ಪ್ರದೇಶ ಚುನಾವಣೆಯ ಉಸ್ತುವಾರಿಯನ್ನ ಬಿ.ಎಲ್​.ಸಂತೋಷ್ ಅವರೇ ವಹಿಸಿಕೊಂಡಿದ್ದಾರೆ.

ಇನ್ನು ನರೇಂದ್ರ ಮೋದಿ, ಅಮಿತ್ ಶಾ ಮಾತ್ರವಲ್ಲ, ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್​ ಭಾಗವತ್ ಕೂಡ ಸಂತೋಷ್ ಸಿಎಂ ಆಗಲು ಸಮ್ಮತಿ ಸೂಚಿಸಿಲ್ಲ ಎನ್ನಲಾಗಿದೆ. ಪಕ್ಷ ಸಂಘಟನೆಗೆ ಬಿ.ಎಲ್​.ಸಂತೋಷ್​ ಅವರ ಅವಶ್ಯಕತೆ ಇದೆ. ಹಾಗಾಗಿ ಸಂತೋಷ್​ ಅವರನ್ನು ಅದೇ ಕಾರ್ಯಕ್ಕೆ ಬಳಸಿಕೊಳ್ಳಲು ಚಿಂತನೆ ನಡೆಸಲಾಗಿದೆ ಅಂತಾ ಹೇಳಲಾಗಿದೆ.

The post ಸಿಎಂ ಸ್ಥಾನಕ್ಕಿಲ್ಲ ‘ಸಂತೋಷ’.. ಬದಲಾದ ರಾಜಕೀಯ ಲೆಕ್ಕಾಚಾರ appeared first on News First Kannada.

Source: newsfirstlive.com

Source link