ಇಂಡೋ-ಇಂಗ್ಲೆಂಡ್​​ ಟೆಸ್ಟ್​ನಲ್ಲಿ ಸ್ಥಾನಕ್ಕಾಗಿ ಕನ್ನಡಿಗರು V/S ಮುಂಬೈಕರ್ಸ್​ ಫೈಟ್​​.!

ಇಂಡೋ-ಇಂಗ್ಲೆಂಡ್​​ ಟೆಸ್ಟ್​ನಲ್ಲಿ ಸ್ಥಾನಕ್ಕಾಗಿ ಕನ್ನಡಿಗರು V/S ಮುಂಬೈಕರ್ಸ್​ ಫೈಟ್​​.!

ಆರಂಭಿಕ ಆಟಗಾರ ಶುಭ್​ಮನ್​ ಗಿಲ್​ ಇಂಜುರಿ, ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್​ಗಳ ವೈಫಲ್ಯ, ಇಂಗ್ಲೆಂಡ್​ ಟೆಸ್ಟ್​ ಸರಣಿಯಲ್ಲಿ ಕನ್ನಡಿಗರ ಪಾಲಿಗೆ ಅವಕಾಶದ ಬಾಗಿಲನ್ನ ತೆರೆಯುತ್ತೇ ಎಂದೇ ಹೇಳಲಾಗ್ತಿತ್ತು. ಆದ್ರೆ ರಾಹುಲ್​, ಮಯಾಂಕ್​ಗೆ ಮತ್ತೆ ಸ್ಥಾನ ಸಿಗೋದು ಅನುಮಾನ ಎಂದೇ ಹೇಳಲಾಗ್ತಿದೆ. ಅದ್ಯಾಕೆ..?

ಟೆಸ್ಟ್​ ಚಾಂಪಿಯನ್​ ಶಿಪ್​ ಫೈನಲ್​ ಬಳಿಕ ಶುಭ್​​ಮನ್ ​ಗಿಲ್​ ಇಂಜುರಿಗೆ ತುತ್ತಾಗಿ ಸರಣಿಯಿಂದ ಹೊರಬಿದ್ದಿದ್ದು, ಅದೇ ಪಂದ್ಯದಲ್ಲಿ ಮಿಡಲ್​ ಆರ್ಡರ್​ ಬ್ಯಾಟರ್ಸ್​​ಗಳು ವೈಫಲ್ಯ ಕಂಡಿದ್ದು ಚರ್ಚೆಗೆ ಕಾರಣವಾಗಿತ್ತು. ಅದರ ಬೆನ್ನಲ್ಲೇ ಈ ಎರಡು ಘಟನೆಗಳು ಕನ್ನಡಿಗರಾದ ಮಯಾಂಕ್​ ಅಗರ್​ವಾಲ್​, ಕೆಎಲ್​ ರಾಹುಲ್​ ಪಾಲಿಗೆ ಅವಕಾಶದ ಬಾಗಿಲು ತೆರೆಯುತ್ತೆ ಎಂದೇ ಹೇಳಲಾಗಿತ್ತು. ಅಭ್ಯಾಸ ಪಂದ್ಯದಲ್ಲಿ ಚಾನ್ಸ್​ ಗಿಟ್ಟಿಸಿಕೊಂಡು ಅಬ್ಬರಿಸಿದ ಮಯಾಂಕ್​, ರಾಹುಲ್​ ಕೂಡ ನಮ್ಮಿಬ್ಬರಿಗೆ ಟಿಕೆಟ್​ ಫಿಕ್ಸ್​ ಎಂಬ ಸಂದೇಶವನ್ನೇ ರವಾನೆ ಮಾಡಿದ್ರು.

blank

ಆದ್ರೆ, ಈಗ ಕನ್ನಡಿಗರಿಗೆ ಮತ್ತೆ ಪ್ಲೇಯಿಂಗ್​ ಇಲೆವೆನ್​ ಟಿಕೆಟ್​ ಕೈ ತಪ್ಪೋ ಸಾಧ್ಯತೆ ದಟ್ಟವಾಗಿದೆ. ಅದಕ್ಕೆ ಕಾರಣವಾಗಿರೋದು ಇಬ್ಬರು ಮುಂಬೈಕರ್​ಗಳ ಆಗಮನ. ಇಂಜುರಿ ರಿಪ್ಲೇಸ್​​ಮೆಂಟ್​​ನಡಿಯಲ್ಲಿ ಪೃಥ್ವಿ ಶಾ, ಸೂರ್ಯಕುಮಾರ್​ ಯಾದವ್​ಗೆ ಮಣೆ ಹಾಕಿರುವ ಸೆಲೆಕ್ಷನ್​ ಕಮಿಟಿ, ಇಂಗ್ಲೆಂಡ್​​ ಟಿಕೆಟ್​ ನೀಡಿದೆ. ಶ್ರೀಲಂಕಾದಿಂದ ನೇರವಾಗಿ ಆಂಗ್ಲರ ನಾಡಿಗೆ ಹಾರಲಿರೋ ಈ ಮುಂಬೈಕರ್​ಗಳೇ ಕನ್ನಡಿಗರ ಸ್ಥಾನಕ್ಕೆ ಕುತ್ತು ತಂದಿದ್ದಾರೆ.

ಈಗಾಗಲೇ ಶ್ರೀಲಂಕಾ ಪ್ರವಾಸದಲ್ಲಿ ನೀಡಿದ ಪ್ರದರ್ಶನದ ಆಧಾರದಲ್ಲಿ ಪೃಥ್ವಿ, ಸೂರ್ಯ ಇಂಗ್ಲೆಂಡ್​ ಸರಣಿಗೆ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ.. ಇದೇ ರೆಡ್​ ಹಾಟ್​​ ಫಾರ್ಮ್ ಪ್ಲೇಯಿಂಗ್​ ಇಲೆವೆನ್​​​ಗೆ​ ಟಿಕೆಟ್​ ನೀಡಿದ್ರೂ ಅಚ್ಚರಿಯಿಲ್ಲ ಅನ್ನೋ ಮಾತುಗಳು ಕೇಳಿ ಬರ್ತಿವೆ. ಇದೇ ಈಗ ರಾಹುಲ್​, ಮಯಾಂಕ್​ಗೆ ಸ್ಥಾನ ಸಿಗುತ್ತಾ ಅನ್ನೋ ಅನುಮಾನ ಮೂಡಿಸಿದೆ.

ಒಟ್ಟಿನಲ್ಲಿ, ಇಷ್ಟು ದಿನ ಇಂಜುರಿ ರಿಪ್ಲೆಸ್​ಮೆಂಟ್​ ಬಗೆಗಿದ್ದ ಚರ್ಚೆ ಇದೀಗ ಪ್ಲೇಯಿಂಗ್​ ಇಲೆವೆನ್​ನ ಸ್ಥಾನಕ್ಕೆ ತಿರುಗಿದೆ. ಪೃಥ್ವಿ, ಸೂರ್ಯನ ಆಗಮನದಿಂದ ಟೀಮ್​ ಮ್ಯಾನೇಜ್​ಮೆಂಟ್​ ಮಾಡಿಕೊಂಡಿರೋ ಪ್ಲಾನ್​ನಲ್ಲಿ ಬದಲಾವಣೆ ಮಾಡುತ್ತಾ..? ಕಾದು ನೋಡಬೇಕಿದೆ.

The post ಇಂಡೋ-ಇಂಗ್ಲೆಂಡ್​​ ಟೆಸ್ಟ್​ನಲ್ಲಿ ಸ್ಥಾನಕ್ಕಾಗಿ ಕನ್ನಡಿಗರು V/S ಮುಂಬೈಕರ್ಸ್​ ಫೈಟ್​​.! appeared first on News First Kannada.

Source: newsfirstlive.com

Source link