ಸಚಿವ ಸ್ಥಾನಕ್ಕಾಗಿ ಬಿಎಸ್‍ವೈ ನಿವಾಸದಲ್ಲಿ ಶಾಸಕರ ಲಾಬಿ

ದಾವಣಗೆರೆ: ಹೊಸ ಸಿಎಂ ಆಯ್ಕೆ ಪ್ರಕ್ರಿಯೆ ನಡೆಯುತ್ತಿರುವಾಗಲೇ ಹಲವು ಶಾಸಕರು ಸಚಿವ ಸ್ಥಾನಕ್ಕಾಗಿ ಕಳೆದ ಎರಡು ದಿನಗಳಿಂದ ಸಿಎಂ ಯಡಿಯೂರಪ್ಪನವರ ಮನೆಯಲ್ಲಿಯೇ ಠಿಕಾಣಿ ಹೂಡಿದ್ದಾರೆ.

ಜಿಲ್ಲೆಯ ಜಗಳೂರು ಶಾಸಕ ಎಸ್.ವಿ.ರಾಮಚಂದ್ರ ನಿನ್ನೆಯಿಂದ ಸಿಎಂ ಮನೆಯಲ್ಲಿ ಇದ್ದು. ತಮಗೂ ಕೂಡ ಸಚಿವ ಸ್ಥಾನ ಕೊಡಿಸಬೇಕೆಂದು ಲಾಬಿ ಮಾಡುತ್ತಿದ್ದಾರೆ. ಈ ಕುರಿತು ಮಾತನಾಡಿದ ಶಾಸಕ ಎಸ್.ವಿ.ರಾಮಚಂದ್ರಪ್ಪ, ನಾನು ಮೂರು ಬಾರಿ ಗೆಲುವು ಸಾಧಿಸಿದ್ದು, ಪಕ್ಷಕ್ಕೆ ನನ್ನದೇಯಾದ ಕೊಡುಗೆ ಇದೆ. ಅಲ್ಲದೆ ಸಿಎಂ ಯಡಿಯೂರಪ್ಪನವರಿಗೆ ನನ್ನ ಬಗ್ಗೆ ಒಲವು ಇದೆ. ಹೀಗಾಗಿ ಈ ಬಾರಿ ಸಚಿವ ಸ್ಥಾನ ಸಿಗುವ ಭರವಸೆ ಇದೆ ಎಂದರು.

ಬರದ ನಾಡಿಗೆ ಸಚಿವ ಸ್ಥಾನ ಸಿಗಲಿದೆ. ಈ ಹಿಂದೆ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದಾಗಲೇ ಸಚಿವ ಸ್ಥಾನ ಸಿಗಬೇಕಿತ್ತು. ಆದರೆ ಕೆಲ ಗೊಂದಲಗಳಿಂದ ಸಿಗಲಿಲ್ಲ. ಈ ಸಲ ಅವಕಾಶ ನೀಡುವ ಬಗ್ಗೆ ಬಿಎಸ್‍ವೈ ಭರವಸೆ ನೀಡಿದ್ದಾರೆ. ಮೂರು ಸಲ ಶಾಸಕ ಹಾಗೂ ವಾಲ್ಮೀಕಿ ಸಮಾಜ ದವನಾದ ಹಿನ್ನೆಲೆ ಸಚಿವ ಸ್ಥಾನ ಸಿಗುವ ಭರವಸೆ ಇದೆ. ಅಲ್ಲದೆ ವಾಲ್ಮೀಕಿ ನಿಗಮದ ಮಾಜಿ ಅಧ್ಯಕ್ಷರಾಗಿ ಯಡಿಯೂರಪ್ಪನವರೇ ಆಯ್ಕೆ ಮಾಡಿದ್ದರು. ಈ ಬಾರಿ ಸಚಿವ ಸ್ಥಾನ ಸಿಗುವ ಎಲ್ಲ ಲಕ್ಷಣಗಳು ಇದೆ. ಸಂಜೆ ಶಾಸಕಾಂಗದ ಸಭೆ ಇದೆ, ಅಲ್ಲಿ ನಿರ್ಧಾರ ವಾಗಲಿದೆ ಎಂದರು.

The post ಸಚಿವ ಸ್ಥಾನಕ್ಕಾಗಿ ಬಿಎಸ್‍ವೈ ನಿವಾಸದಲ್ಲಿ ಶಾಸಕರ ಲಾಬಿ appeared first on Public TV.

Source: publictv.in

Source link