ಬಿಜೆಪಿ ಸೇರುವಂತೆ ಒತ್ತಾಯ ಮಾಡ್ತಿದ್ದಾರೆ.. ಯೋಚನೆ ಮಾಡ್ತೀದ್ದೇನೆ -ಎನ್​​.ಮಹೇಶ್​

ಬಿಜೆಪಿ ಸೇರುವಂತೆ ಒತ್ತಾಯ ಮಾಡ್ತಿದ್ದಾರೆ.. ಯೋಚನೆ ಮಾಡ್ತೀದ್ದೇನೆ -ಎನ್​​.ಮಹೇಶ್​

ಬೆಂಗಳೂರು: ಕೊಳ್ಳೆಗಾಲ ಕ್ಷೇತ್ರದ ಜನರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುವಂತೆ ಒತ್ತಾಯ ಮಾಡುತ್ತಿದ್ದಾರೆ. ಆದರೆ ಈ ಬಗ್ಗೆ ನಾನು ಇನ್ನೂ ಯೋಚನೆ ಮಾಡಿಲ್ಲ. ಮುಂದಿನ ದಿನಗಳಲ್ಲಿ ತೀರ್ಮಾನ ಮಾಡುತ್ತೇನೆ ಎಂದು ಶಾಸಕ ಎನ್.ಮಹೇಶ್ ಹೇಳಿದ್ದಾರೆ.

ರಾಜೀನಾಮೆ ನೀಡಿದ ಬಳಿಕ ಮೊದಲ ಬಾರಿಗೆ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಎನ್​​.ಮಹೇಶ್​ ಅವರು, ಕಳೆದ ಎರಡು ವರ್ಷಗಳಿಂದ ಕ್ಷೇತ್ರಕ್ಕೆ ಬೇಕಾದ ಸಾಕಷ್ಟು ಅನುದಾನವನ್ನು ಬಿಡುಗಡೆ ಮಾಡಿದ್ದರು. ರಾಜ್ಯದ ಬಗ್ಗೆ ಬಿಎಸ್​​ವೈ ಅವರಿಗೆ ಇರುವಷ್ಟು ಅರಿವು ಬೇರೆ ಯಾರಿಗೂ ಇಲ್ಲ. ಆದರೆ ಈಗ ಬಿಜೆಪಿ ಹೈಕಮಾಂಡ್​ ಈ ರೀತಿ ತೀರ್ಮಾನ ಮಾಡಿದೆ ನೋಡೋಣ ಮುಂದೇ ಏನಾಗುತ್ತದೆ ಎಂದು ತಿಳಿಸಿದರು.

The post ಬಿಜೆಪಿ ಸೇರುವಂತೆ ಒತ್ತಾಯ ಮಾಡ್ತಿದ್ದಾರೆ.. ಯೋಚನೆ ಮಾಡ್ತೀದ್ದೇನೆ -ಎನ್​​.ಮಹೇಶ್​ appeared first on News First Kannada.

Source: newsfirstlive.com

Source link