ಬರೋದು ಫ್ಲೈಟ್​​ನಲ್ಲಿ, ಹೋಗೋದು ಟ್ರೈನ್​​ನಲ್ಲಿ.. ಕೊನೆಗೂ ಸಿಕ್ಕಿಬಿತ್ತು ಬ್ಲಾಕ್ ಪಲ್ಸರ್ ಗ್ಯಾಂಗ್

ಬರೋದು ಫ್ಲೈಟ್​​ನಲ್ಲಿ, ಹೋಗೋದು ಟ್ರೈನ್​​ನಲ್ಲಿ.. ಕೊನೆಗೂ ಸಿಕ್ಕಿಬಿತ್ತು ಬ್ಲಾಕ್ ಪಲ್ಸರ್ ಗ್ಯಾಂಗ್

ಬೆಂಗಳೂರು ಗ್ರಾಮಾಂತರ ಪೊಲೀಸರ ನಿದ್ದೆಗೆಡಿಸಿದ್ದ ಐನಾತಿ ಕಳ್ಳರು ಕೊನೆಗೂ ಬಲೆಗೆ ಬಿದ್ದಿದ್ದಾರೆ. ಈ ಕಳ್ಳರ ಗ್ಯಾಂಗ್ ಸ್ವಲ್ಪ ಡಿಫ್ರೆಂಟ್ ಆಗಿದ್ದು, ಸದ್ಯ ಬಂಧಿತ ಆರೋಪಿಗಳನ್ನ ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಅರ್ಜುನ್ ಕುಮಾರ್, ರಾಥೋಡ್ ಬಂಧಿತ ಆರೋಪಿಗಳು.

3 ವರ್ಷಕ್ಕೊಮ್ಮೆ ಒಂದೊಂದು ರಾಜಧಾನಿಗೆ ಎಂಟ್ರಿ
ಬೆಂಗಳೂರಿಗರಿಗೆ ಇರಾನಿ ಗ್ಯಾಂಗ್, ಬವೇರಿಯಾ ಗ್ಯಾಂಗ್ ಗೊತ್ತು. ಆದರೆ ಇಂದು ಸಿಕ್ಕಿ ಬಿದ್ದಿರುವ ಆರೋಪಿಗಳು ಅದ್ಯಾವುದೇ ಗ್ಯಾಂಗ್​ಗೆ ಸೇರಿದವರಲ್ಲ. ಬದಲಾಗಿ ಇದು ಉತ್ತರ ಪ್ರದೇಶದ ಶಾಮ್ಲಿ ಗ್ಯಾಂಗ್. ಮೂರು ವರ್ಷಕ್ಕೊಮ್ಮೆ ಒಂದೊಂದು ರಾಜಧಾನಿಗೆ ಎಂಟ್ರಿ ಕೊಡುವ ಈ ಗ್ಯಾಂಗ್​ ಶೈಲಿಯೇ ಬೇರೆ.

blank

ಬರೋದು ಪ್ಲೈಟ್​​ನಲ್ಲಿ..
ಅದೇನಂದರೆ ಬರೋದು ಪ್ಲೈಟ್​ನಲ್ಲಿ, ಹೋಗೋದು ರೈಲಿನಲ್ಲಿ. ಐಷಾರಾಮಿ ಲೈಫ್​ಗೆ ಎಂಟ್ರಿ ಕೊಡುವ ಈ ಖತರ್ನಾಕ್ ಗ್ಯಾಂಗ್ ವಿರುದ್ಧ ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ಒಂದೇ ದಿನ ಬರೋಬ್ಬರಿ 19 ಕಡೆ ಸರಗಳ್ಳನ ಮಾಡಿರುವ ಆರೋಪ ಇದೆ.

ಊರಿಗೆ ಊರೇ ಕಳ್ಳತನದ ಕಸುಬು
ಆಘಾತಕಾರಿ ವಿಚಾರ ಏನಂದ್ರೆ ಉತ್ತರ ಪ್ರದೇಶ, ಪಂಜಾಬ್​ನಲ್ಲಿ ಈ ಶಾಮ್ಲಿ ಗ್ಯಾಂಗ್​ನದ್ದೇ ಹವಾ. ಇಡೀ ಊರಿಗೆ ಊರೇ ಕಳ್ಳತನದ ಕಸಬುನ್ನ ನೆಚ್ಚಿಕೊಂಡಿದೆ. ಪೊಲೀಸರ ಚಲನವಲನಗಳ ಮೇಲೆ ನಿಗಾ ಇಟ್ಟು ಸರಗಳ್ಳತನ ಮಾಡುವಲ್ಲಿ ಪಂಟರ್​ ಆಗಿದೆ.

blank

ಬ್ಲಾಕ್ ಪಲ್ಸರ್ ಬರ್ತಿದ್ದ ಕಿಲಾಡಿಗಳು
ಜೂನ್ 30 ರಂದು ಸಿಎಂ ಕಾರ್ಯಕ್ರಮದ ಬಂದೋಬಸ್ತ್​​ನಲ್ಲಿ ಪೊಲೀಸರು ಬ್ಯುಸಿ ಆಗಿದ್ದರು. ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡಿದ್ದ ಈ ಶಾಮ್ಲಿ ಗ್ಯಾಂಗ್, ನಗರದ ಹೊರಹೊಲಯದಲ್ಲಿ ಒಂದೇ ದಿನ 19 ಕಡೆ ಸರಗಳ್ಳತನ ಮಾಡಿತ್ತು. ಬ್ಲಾಕ್ ಫಲ್ಸರ್​​ಗಳಲ್ಲಿ ಬಂದಿದ್ದ ಖದೀಮರು ಕೃತ್ಯ ನಡೆಸಿ ಎಸ್ಕೇಪ್ ಆಗಿತ್ತು. ಇದರ ಜಾಡು ಹಿಡಿದು ಹೊರಟಿದ್ದ ಪೊಲೀಸರು ಉತ್ತರ ಪ್ರದೇಶದಲ್ಲಿ ಆರೋಪಿಗಳನ್ನ ಬಂಧಿಸಿದ್ದಾರೆ.

The post ಬರೋದು ಫ್ಲೈಟ್​​ನಲ್ಲಿ, ಹೋಗೋದು ಟ್ರೈನ್​​ನಲ್ಲಿ.. ಕೊನೆಗೂ ಸಿಕ್ಕಿಬಿತ್ತು ಬ್ಲಾಕ್ ಪಲ್ಸರ್ ಗ್ಯಾಂಗ್ appeared first on News First Kannada.

Source: newsfirstlive.com

Source link