ಅಮಿತ್ ಶಾ ಹಾಗೂ ಯಡಿಯೂರಪ್ಪಗೆ ರನ್ನಿಂಗ್ ರೇಸ್ ನಡೆಯಲಿ ಗೊತ್ತಾಗುತ್ತೆ- ಸಿಎಂ ಇಬ್ರಾಹಿಂ

ಅಮಿತ್ ಶಾ ಹಾಗೂ ಯಡಿಯೂರಪ್ಪಗೆ ರನ್ನಿಂಗ್ ರೇಸ್ ನಡೆಯಲಿ ಗೊತ್ತಾಗುತ್ತೆ- ಸಿಎಂ ಇಬ್ರಾಹಿಂ

ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ನೀಡಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ಮುಖಂಡ ಸಿಎಂ ಇಬ್ರಾಹಿಂ ಅಮಿತ್ ಶಾ ಮೋದಿ ವಿರುದ್ಧ ಕಿಡಿಕಾರಿದ್ದಾರೆ.

ಯಡಿಯೂರಪ್ಪನವರನ್ನು ಅವಮಾನಿಸಿ ಸಿಎಂ ಹುದ್ದೆಯಿಂದ ಕೆಳಗಿಳಿಸಲಾಗಿದೆ, ಓರ್ವ ಕನ್ನಡಿಗನಿಗಾದ ಅವಮಾನದ ವಿರುದ್ಧ ಸಮಾವೇಶ ನಡೆಸುತ್ತೇನೆ.. 1972 ರಿಂದ ನಾನು ಹೇಳಿದ್ದೆಲ್ಲ ನಡೆದಿದೆ, ಸೂಫಿ ಶರಣರ ಸಂಗದಲ್ಲಿ ಇರುವವರಿಗೆ ಆರನೇ ಇಂದ್ರಿಯ ಚೆನ್ನಾಗಿ ಕೆಲಸ ಮಾಡುತ್ತೆ, ಹಾಗೇ ಕೆಲಸ ಮಾಡಿದೆ. ಯಡಿಯೂರಪ್ಪನವರಿಗೇ ಹೇಳಿದ್ದೆ.. ನಿಮ್ಮನ್ನು ಏಣಿಯಾಗಿ ಉಪಯೋಗಿಸಿಕೊಳ್ತಾರೆ ಅಂದಿದ್ದೆ.. ಯಡಿಯೂರಪ್ಪಗೆ ಈಗ ಮದುವೆ ಮಾಡಿದರೂ ನಾಲ್ಕು ಮಕ್ಕಳು ಮಾಡುವಷ್ಟು ತಾಕತ್ ಇದೆ. ಬಿಎಸ್​ವೈಗೆ ಆದ ಅವಮಾನ, ಕರ್ನಾಟಕಕ್ಕೆ, ಕನ್ನಡಿಗರಿಗೆ ಆದ ಅವಮಾನ.. ಅಮಿತ್ ಶಾ ಹಾಗೂ ಯಡಿಯೂರಪ್ಪಗೆ ರನ್ನಿಂಗ್ ರೇಸ್ ನಡೆಯಲಿ ಗೊತ್ತಾಗುತ್ತೆ ಎಂದು ಹೇಳಿದ್ದಾರೆ.

ಮುಂದುವರೆದು.. ಕನ್ನಡಿಗರು ಯಾರೂ ಗುಜರಾತ್ ಗೆ ವಲಸೆ ಹೋಗಿಲ್ಲ. ಯಡಿಯೂರಪ್ಪ ಯಾವ ಪಕ್ಷ ಅನ್ನೋದು ನಮಗೆ ಮುಖ್ಯ ಅಲ್ಲ, ಅವರೊಬ್ಬ ಮುತ್ಸದ್ದಿ ರಾಜಕಾರಣಿ, ಯಡಿಯೂರಪ್ಪಗೆ ಆದ ಅವಮಾನ ಕನ್ನಡಿಗರಿಗೆ ಆದ ಅವಮಾನ ಎಂದು ಇಬ್ರಾಹಿಂ ಕಿಡಿಕಾರಿದ್ದಾರೆ.

The post ಅಮಿತ್ ಶಾ ಹಾಗೂ ಯಡಿಯೂರಪ್ಪಗೆ ರನ್ನಿಂಗ್ ರೇಸ್ ನಡೆಯಲಿ ಗೊತ್ತಾಗುತ್ತೆ- ಸಿಎಂ ಇಬ್ರಾಹಿಂ appeared first on News First Kannada.

Source: newsfirstlive.com

Source link