ತೆಲುಗಿನ ‘ಕಾವ್ಯಾಂಜಲಿ’ ಟೀಮ್​ಗೆ ಎಂಟ್ರಿ ಕೊಟ್ಟ ರಶ್ಮಿ ಪ್ರಭಾಕರ್

ತೆಲುಗಿನ ‘ಕಾವ್ಯಾಂಜಲಿ’ ಟೀಮ್​ಗೆ ಎಂಟ್ರಿ ಕೊಟ್ಟ ರಶ್ಮಿ ಪ್ರಭಾಕರ್

ಕನ್ನಡದ ​ ಟಾಪ್​ ಲಿಸ್ಟ್​ನಲ್ಲಿ ಒಂದಿಷ್ಟು ಧಾರವಾಹಿಗಳು ಇವೆ. ಆ ಸಾಲಿನಲ್ಲಿ ಉದಯ ಟೀವಿಯಲ್ಲಿ ಪ್ರಸಾರವಾಗುವ ಕಾವ್ಯಾಂಜಲಿ ಕೂಡ ಒಂದು. ಇತ್ತಿಚೀನ ದಿನಗಳಲ್ಲಿ ಕಾವ್ಯಾಂಜಲಿ ಧಾರವಾಹಿಗೆ ಫ್ಯಾನ್ಸ್​ ಬಹಳನೇ ಇದ್ದಾರೆ.

ಮೊನ್ನೆ ಮೊನ್ನೆಯಷ್ಟೆ ಶುಶಾಂತ್​ ಹಾಗೂ ಅಂಜಲಿ ಮಡಿಕೇರಿಯಲ್ಲಿ ಎಷ್ಟು ಫನ್​ ಮಾಡ್ತಾಯಿದ್ದಾರೆ ಅನ್ನೊದರ ಬಗ್ಗೆ ನಾವು ನಿಮಗೆ ತಿಳಿಸಿದ್ವಿ.. ಇನ್ನೂ ಕವ್ಯಾಂಜಲಿ 300 ಎಪಿಸೋಡ್​ಗಳನ್ನ ಕಂಪ್ಲೀಟ್​ ಮಾಡಿ ಭರ್ಜರಿಯಾಗಿ ಸಾಗ್ತಾಯಿದೆ.

blank

ಕನ್ನಡಿಗರು ಇಷ್ಟಪಟ್ಟಿರೋ ಈ ಕಥೆ, ಈಗಾಗ್ಲೇ ಬಾಂಗ್ಲಾದಲ್ಲಿ ಟೆಲಿಕಾಸ್ಟ್ ಕೂಡ ಆಗ್ತಿದೆ. ಇನ್ನೂ ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲೂ ಕಾವ್ಯಾಂಜಲಿ ಧಾರವಾಹಿ ರಿಮೇಕ್​ ಆಗ್ತಿದೆ ಎಂಬ ವಿಷಯವನ್ನು ನಾವು ನಿಮಗೆ ಹೇಳಿದ್ವಿ..

ಇದೀಗ ಹೊಸ ವಿಚಾರ ಏನಪ್ಪಾ ಅಂದ್ರೆ ತೆಲುಗಿಗೆ ರಿಮೇಕ್​ ಆಗ್ತಾಯಿರುವ ಕಾವ್ಯಾಂಜಿಲಿ ಧಾರವಾಹಿಯಲ್ಲಿ ಕನ್ನಡದ ನಟಿಯೊಬ್ಬರು ಅಭಿನಯಿಸ್ತಾಯಿದ್ದಾರೆ. ಯೆಸ್ ಅವರು ಮತ್ತ್ಯಾರೂ ಅಲ್ಲಾ ರಶ್ಮಿ ಪ್ರಭಾಕರ್​.
ಹೌದು.. ಲಕ್ಷ್ಮಿ ಬಾರಮ್ಮ ಧಾರವಾಹಿಯ ಮೂಲಕ ಇಂಡಸ್ಟ್ರಿಗೆ ಕಾಲಿಟ್ಟು.. ಆ ಧಾರಾವಾಹಿಯ ಮೂಲಕ ಸಖತ್​ ಹೆಸರು ಮಾಡಿದ್ರು.. ಚಿನ್ನು ಅಂದ ತಕ್ಷಣ ನಮಗೆ ಮೊದಲು ನೆನಪಾಗೋದು ರಶ್ಮಿ. ಬಳಿಕ ಸುವರ್ಣ ವಾಹಿನಿಯಲ್ಲಿ ಪ್ರಾಸಾರವಾಗ್ತಾಯಿದ್ದ ಮನಸೆಲ್ಲಾ ನೀನೇ ಧಾರವಾಹಿಯಲ್ಲಿ ಲೀಡ್​ರೋಲ್​ನಲ್ಲಿ ಮಿಂಚಿದ ರಶ್ಮಿ ಕಾರಣಾಂತರಗಳಿಂದ ಸೀರಿಯಲ್​ನಿಂದ ಹೊರನೆಡೆದ್ರು.

blank

ಇದೀಗಾ ನಮ್ಮ ಕನ್ನಡ ಧಾರವಾಹಿ ತೆಲುಗಿಗೆ ರಿಮೇಕ್​ ಆಗ್ತಾಯಿದ್ದು. ಆ ಧಾರವಾಹಿಯಲ್ಲಿ ರಶ್ಮಿ ಲೀಡ್​ ರೋಲ್​ನಲ್ಲಿ ಕಾಣಿಸಿಕೊಳ್ತಾಯಿರೊದು ಸಂತಸದ ವಿಚಾರ. ಸದ್ಯ ತೆಲುಗಿನಲ್ಲಿ ರಿಮೇಕ್​ ಕೆಲಸಗಳು ನಡಿತಾಯಿದ್ದು. ಇನ್ನೇನು ಕೆಲವೆ ದಿನಗಳಲ್ಲಿ ನಿಮ್ಮನ್ನು ರಂಜಿಸಲಿದೆ. ಒಟ್ಟಿನಲ್ಲಿ ಒಂದೊಳ್ಳೆ ಪಾತ್ರದ ಮೂಲಕ ನಿಮ್ಮ ಮುಂದೆ ಬರಲು ತಯಾರಿ ನೆಡೆಸ್ತಾಯಿರುವ ರಶ್ಮಿ ಪ್ರಭಾಕರ್​ಗೆ ಆಲ್​ ದ ಬೆಸ್ಟ್​

The post ತೆಲುಗಿನ ‘ಕಾವ್ಯಾಂಜಲಿ’ ಟೀಮ್​ಗೆ ಎಂಟ್ರಿ ಕೊಟ್ಟ ರಶ್ಮಿ ಪ್ರಭಾಕರ್ appeared first on News First Kannada.

Source: newsfirstlive.com

Source link