ರಾಜ್​ಕುಂದ್ರಾ ಕೇಸ್​​ನಲ್ಲಿ ಹೊಸ ಹೆಸರು.. ಬಾಲಿವುಡ್​ನ ಹಾಟ್ ಬೆಡಗಿ ಫ್ಲೋರಾಗೂ ಬಂದಿತ್ತಂತೆ ಆಫರ್

ರಾಜ್​ಕುಂದ್ರಾ ಕೇಸ್​​ನಲ್ಲಿ ಹೊಸ ಹೆಸರು.. ಬಾಲಿವುಡ್​ನ ಹಾಟ್ ಬೆಡಗಿ ಫ್ಲೋರಾಗೂ ಬಂದಿತ್ತಂತೆ ಆಫರ್

ಮುಂಬೈ: ರಾಜ್​ ಕುಂದ್ರಾ ವಿರುದ್ಧ ಅಶ್ಲೀಲ ಸಿನಿಮಾಗಳ ನಿರ್ಮಾಣ ಹಾಗೂ ಪ್ರಸಾರ ಆರೋಪ ಕೇಳಿಬಂದಾಗಿಂದ ಒಂದಿಲ್ಲೊಂದು ನಟಿ, ಮಾಡೆಲ್​ಗಳ ಹೆಸರು ಕೇಳಿಬರುತ್ತಲೇ ಇವೆ. ಮೊದಲಿಗೆ ಪೂನಮ್ ಪಾಂಡೆ, ಗೆಹನಾ ವಶಿಷ್ಟ್, ಶೆರ್ಲಿನಾ ಚೋಪ್ರಾ ಹೆಸರುಗಳು ಕೇಳಿಬಂದವು. ಇದೀಗ ಬಾಲಿವುಡ್ ನಟಿ ಫ್ಲೋರಾ ಸೈನಿ ಹೆಸರು ಕೇಳಿಬಂದಿದೆ.

ಇದನ್ನೂ ಓದಿ: ಅಶ್ಲೀಲ ಚಿತ್ರ ನಿರ್ಮಾಣ ಕೇಸ್; ನಟಿ ಶಿಲ್ಪಾ ಶೆಟ್ಟಿ ಪತಿಗೆ 14 ದಿನಗಳ ನ್ಯಾಯಾಂಗ ಬಂಧನ

ರಾಜ್​ಕುಂದ್ರಾ ಮರಾಠಿ ನಟ ಉಮೇಶ್ ಕಾಮತ್ ನಡುವಿನ ವಾಟ್ಸ್​ಆ್ಯಪ್ ಸಂಭಾಷಣೆಯಲ್ಲಿ ಫ್ಲೋರಾ ಸೈನಿ ಹೆಸರು ಕೇಳಿಬಂದಿತ್ತು. ಇದು ಮಾಧ್ಯಮಗಳಲ್ಲಿ ಪ್ರಸಾರವಾಗ್ತಿದ್ದಂತೆಯೇ ಫ್ಲೋರಾ ಸೈನಿ ಇನ್​ಸ್ಟಾಗ್ರಾಂ ವಿಡಿಯೋ ಮೂಲಕ ಸ್ಪಷ್ಟನೆಯೊಂದನ್ನ ನೀಡಿದ್ದರು. ಆ ವಿಡಿಯೋದಲ್ಲಿ ನಾನು ಯಾವುದೇ ರೀತಿಯಲ್ಲಿ ರಾಜ್ ಕುಂದ್ರಾ ಅವರನ್ನ ಸಂಪರ್ಕಿಸಿರಲಿಲ್ಲ ಎಂದಿದ್ದರು. ಇದೀಗ ಇಂಟರ್​ವ್ಯೂ ಒಂದರಲ್ಲಿ ಹಾಟ್​ಶಾಟ್ಸ್ ಆ್ಯಪ್​ಗಾಗಿ ವೆಬ್​ಸಿರೀಸ್​ ಒಂದರಲ್ಲಿ ನಟಿಸಲು ನನ್ನನ್ನು ಸಂಪರ್ಕಿಸಲಾಗಿತ್ತು ಎಂದಿದ್ದರು.

ಇದನ್ನೂ ಓದಿ: ಪಾರ್ನ್ ಸಿನಿಮಾ ನಿರ್ಮಾಣ; ವಿಚಾರಣೆಗೆ ಕರೆದ ಬೆನ್ನಲ್ಲೇ ಮಧ್ಯಂತರ ಜಾಮೀನಿನ ಮೊರೆ ಹೋದ ಶೆರ್ಲಿನ್

ಹೀಗೆ ವೆಬ್​ಸಿರೀಸ್​ಗಾಗಿ ನಟಿಸಲು ನನಗೆ ಸಂಪರ್ಕಿಸಿದ್ದರು.. ಆದರೆ ನಾನು ಅದನ್ನು ನಿರಾಕರಿಸಿದೆ.. ಈ ಕೇಸ್​ನಲ್ಲಿ ನನ್ನ ಹೆಸರು ಕೇಳಿಬರುತ್ತಿರುವುದು ಅನಿರೀಕ್ಷಿತ ಎಂದಿದ್ದಾರೆ.

blank

ಕ್ಯಾಸ್ಟಿಂಗ್​ನವರು ನಿಮಗೆ ಆಗಾಗ್ಗೆ ಫೋನ್ ಮಾಡ್ತಾರೆ.. ಇಂಥದ್ದೊಂದು ವೆಬ್​ಸಿರೀಸ್​ ಮಾಡ್ತಿದ್ದೀವಿ.. ನೀವು ಇದರಲ್ಲಿ ನಟಿಸ್ತೀರಾ ಎಂದು ಕೇಳ್ತಾರೆ.. ಇದಕ್ಕೆ ನಾನು ನೋ ಎಂದು ಹೇಳಿದೆ. ಅವರ ಮಾಡುವ ಕಂಟೆಂಟ್​ಗಳು ನನಗೆ ಇಷ್ಟವಿಲ್ಲ ಹಾಗಾಗಿ ನಾನು ಅದರಲ್ಲಿ ನಟಿಸಲು ಇಷ್ಟಪಡಲಿಲ್ಲ.. ಅಲ್ಲದೇ ಅದ ಬಜೆಟ್ ಕೂಡ ಕಡಿಮೆ ಇರುತ್ತದೆ. ನಾನೇನು ಸಿಕ್ಕ ಸಿಕ್ಕ ಕೆಲಸವನ್ನು ಮಾಡುವಷ್ಟು ಖಾಲಿಯಿಲ್ಲ ಎಂದು ಇಂಟರ್​ವ್ಯೂ ಒಂದರಲ್ಲಿ ಫ್ಲೋರಾ ಸೈನಿ ಹೇಳಿಕೆ ನೀಡಿದ್ದಾರೆ.

ಇವಾಗಿನ ಕೇಸ್ ಪೋರ್ನ್​ಗೆ ಸಂಬಂಧಿಸಿದ್ದು.. ನನ್ನ ಹೆಸರನ್ನ ಇದರಲ್ಲಿ ಎಳೆದುತರೋ ಮೂಲಕ ನನ್ನನ್ನು ಇದರಲ್ಲಿ ಭಾಗವಹಿಸುವಂತೆ ಮಾಡ್ತಿದ್ದಾರೆ. ಇದು ನನ್ನ ಹಕ್ಕಿನ ಉಲ್ಲಂಘನೆ ಯಾಕಂದ್ರೆ ನಾನು ಫಿಲಂ ಫ್ಯಾಮಿಲಿಯಿಂದ ಬಂದವಳಲ್ಲ.. ಇಂಥ ಪಬ್ಲಿಸಿಟಿ ನನಗೆ ಬೇಕಿಲ್ಲ ಎಂದು ಫ್ಲೋರಾ ಸೈನಿ ಹೇಳಿದ್ದಾರೆ.

 

 

View this post on Instagram

 

A post shared by Flora Saini (@florasaini)

The post ರಾಜ್​ಕುಂದ್ರಾ ಕೇಸ್​​ನಲ್ಲಿ ಹೊಸ ಹೆಸರು.. ಬಾಲಿವುಡ್​ನ ಹಾಟ್ ಬೆಡಗಿ ಫ್ಲೋರಾಗೂ ಬಂದಿತ್ತಂತೆ ಆಫರ್ appeared first on News First Kannada.

Source: newsfirstlive.com

Source link