ಟೋಕಿಯೋ ಒಲಂಪಿಕ್ಸ್; ಬಾಕ್ಸಿಂಗ್ ವೇಳೆ ಸಿಟ್ಟಿಗೆದ್ದು ಎದುರಾಳಿಯ ಕಿವಿ ಕಚ್ಚಿದ ಬಾಕ್ಸರ್

ಟೋಕಿಯೋ ಒಲಂಪಿಕ್ಸ್; ಬಾಕ್ಸಿಂಗ್ ವೇಳೆ ಸಿಟ್ಟಿಗೆದ್ದು ಎದುರಾಳಿಯ ಕಿವಿ ಕಚ್ಚಿದ ಬಾಕ್ಸರ್

ಟೋಕಿಯೋ ಒಲಿಂಪಿಕ್ಸ್​​ನಲ್ಲಿ ಇಂದು ನ್ಯೂಜಿಲೆಂಡ್ ಮತ್ತು ಮೊರ್ಯಾಕೊ ಕ್ರೀಡಾಪಟುಗಳ ನಡುವೆ ಬಾಕ್ಸಿಂಗ್ ನಡೆಯುತ್ತಿತ್ತು. ಈ ಪಂದ್ಯದಲ್ಲಿ ನ್ಯೂಜಿಲೆಂಡ್​​ನ ಡೇವಿಡ್ ನೈಕ ಮತ್ತು ಮೊರ್ಯಾಕೊದ ಯೂನೆಸ್ಸ್ ಬಾಲ್ಲ ಎದುರಾಳಿಗಳಾಗಿದ್ದರು. ಪಂದ್ಯದಲ್ಲಿ 5-0 ಅಂತರದಲ್ಲಿ ನ್ಯೂಜಿಲೆಂಡ್ ಬಾಕ್ಸರ್ ಡೇವಿಡ್ ನೈಕ್ ಗೆಲುವು ಸಾಧಿಸಿದ್ರು.

ಆದ್ರೆ ಈ ಮ್ಯಾಚ್​ನಲ್ಲಿ ಅಪರೂಪದ ಘಟನೆಯೊಂದು ನಡೆಯಿತು.. ಪ್ರತೀ ಸುತ್ತಿನಲ್ಲೂ ಸೋಲು ಕಾಣುತ್ತಿದ್ದ ಮೊರ್ಯಾಕೊದ ಬಾಕ್ಸರ್ ಯೂನೆಸ್ಸ್ ಬಾಲ್ಲ ಕೋಪದಲ್ಲಿ ಡೇವಿಡ್ ನೈಕ್ ಅವರ ಕಿವಿ ಕಚ್ಚಿಬಿಟ್ಟಿದ್ದಾರೆ.

ಸದ್ಯ ಬಾಕ್ಸಿಂಗ್ ಟಾಸ್ಕ್ ಫೋರ್ಸ್ ಅಂತಾರಾಷ್ಟ್ರೀಯ ಬಾಕ್ಸಿಂಗ್ ಅಸೋಷಿಯೇಷನ್​ನಿಂದಲೇ ಯೂನೆಸ್ಸ್ ಬಾಲ್ಲ ಅವರನ್ನ ಸಸ್ಪೆಂಡ್ ಮಾಡಿದೆ.

The post ಟೋಕಿಯೋ ಒಲಂಪಿಕ್ಸ್; ಬಾಕ್ಸಿಂಗ್ ವೇಳೆ ಸಿಟ್ಟಿಗೆದ್ದು ಎದುರಾಳಿಯ ಕಿವಿ ಕಚ್ಚಿದ ಬಾಕ್ಸರ್ appeared first on News First Kannada.

Source: newsfirstlive.com

Source link