ಸಲಿಂಗಿತನ ಬಯಲು ಮಾಡಿದ ಆ 2 ಆ್ಯಪ್? ಪತಿ ಮೋಸ ಮಾಡಿದ್ದಾನೆಂದು ವಿಚ್ಛೇದನ ಕೋರಿದ ಪತ್ನಿ

 ಸಲಿಂಗಿತನ ಬಯಲು ಮಾಡಿದ ಆ 2 ಆ್ಯಪ್? ಪತಿ ಮೋಸ ಮಾಡಿದ್ದಾನೆಂದು ವಿಚ್ಛೇದನ ಕೋರಿದ ಪತ್ನಿ

ಬೆಂಗಳೂರು: ನನ್ನ ಪತಿ ಸಲಿಂಗಿ ಆಗಿದ್ದು, ಅವರು ಬೇಕು ಅಂತಲೇ ಮದುವೆಯಾಗಿ ಮೋಸ ಮಾಡಿದ್ದಾರೆ. ಹೀಗಾಗಿ ದಯಮಾಡಿ ನನಗೆ ವಿಚ್ಛೇದನ ಬೇಕು ಅಂತಾ ಕೋರಿ ಮಹಿಳೆಯೊಬ್ಬರು ಫ್ಯಾಮಿಲಿ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ.

ಆರೋಪಿ ರಘು ಎಂಬಾತ ಟೆಕ್ಕಿಯಾಗಿ ಬೆಂಗಳೂರಲ್ಲಿ ಕೆಲಸ ಮಾಡ್ತಿದ್ದಾರೆ. ಇವರು ಹರ್ಷಿತಾ (ಹೆಸರು ಬದಲಾಯಿಸಲಾಗಿದೆ) ಎಂಬಾಕೆಯನ್ನ 2018 ರಲ್ಲಿ ಮದುವೆಯಾಗಿದ್ದರಂತೆ. ಇದೀಗ ಹರ್ಷಿತಾ ತನ್ನ ಗಂಡ, ಸಲಿಂಗಿ ಎಂದು ಕೋರ್ಟ್​​ನಲ್ಲಿ ಆರೋಪಿಸಿದ್ದಾಳೆ.

ಮಹಿಳೆಯ ಆರೋಪ ಏನು..?
ನನ್ನನ್ನ 2018 ರಲ್ಲಿ ಮದುವೆಯಾದರೂ, ಪತಿ ರಘು ನನ್ನ ಬಳಿ ಸುಳಿಯುತ್ತಿಲ್ಲ. ನಾನು ಅವರ ಹತ್ತಿರ ಬಂದಾಗ ಅವರು ದೂರ ಓಡಿ ಹೋಗುತ್ತಾರೆ. ಬೆಡ್​ ರೂಮ್​ನಲ್ಲಿ ದೂರು ಮಲಗುತ್ತಾರೆ. ಪತಿಯ ವರ್ತನೆಯಿಂದ ನಾನು ಮಾನಸಿಕವಾಗಿ ಕುಗ್ಗಿ ಹೋಗಿದ್ದೇನೆ. ಒಂದು ದಿನ ಅವರ ಮೊಬೈಲ್ ಚೆಕ್ ಮಾಡಿದಾಗ ಅದರಲ್ಲಿ ಎರಡು ಡೇಟಿಂಗ್ ಆ್ಯಪ್ ಇರೋದು ಗೊತ್ತಾಯಿತು. ಓವರ್ 40 & LGBT ಡೆಟಿಂಗ್ ಆ್ಯಪ್​ಗಳು ಪತ್ತೆಯಾಗಿವೆ. ಆ ಆ್ಯಪ್​ಗಳಲ್ಲಿ ಆತ ರಿಜಿಸ್ಟರ್ ಕೂಡ ಆಗಿದ್ದಾನೆ. ಅವುಗಳ ಸ್ಕ್ರೀನ್ ಶಾಟ್ ಕೂಡ ನನ್ನ ಬಳಿ ಇದೆ. ಆತ ಸಲಿಂಗಿ ಆಗಿರೋದ್ರಿಂದ ನನ್ನ ಜೊತೆ ಲೈಂಗಿಕ ಕ್ರಿಯೆಗೆ ಇದುವರೆಗೂ ಆಸಕ್ತಿ ತೋರಿಸಿಲ್ಲ ಎಂದು ಕೋರ್ಟ್​ನಲ್ಲಿ ಮಹಿಳೆ ದೂರು ನೀಡಿದ್ದಾಳೆ.

ಪತಿ ಸಲಿಂಗಿ ಆಗಿರೋದ್ರಿಂದ ನನಗೆ ವಿಚ್ಛೇದನ ಬೇಕಿದೆ. ಸ್ತ್ರೀಯರೊಂದಿಗೆ ಆತನಿಗೆ ಯಾವುದೇ ಆಸಕ್ತಿ ಇಲ್ಲ. ಆತ ಸಲಿಂಗಿಯಾಗಿದ್ದರೂ ನನ್ನ ಮದುವೆಯಾಗಿ ಮೋಸ ಮಾಡಿದ್ದಾನೆ. ಸಲಿಂಗ ಕಾಮೊಯಾಗಿದ್ದು ವರದಕ್ಷಿಣೆ ಪಡೆದುಕೊಂಡಿದ್ದಾನೆ ಎಂದು ನೊಂದ ಮಹಿಳೆ ಆರೋಪಿಸಿದ್ದಾಳೆ.

ನಾನು ಸಲಿಂಗಿ ಅಲ್ಲ
ಆದರೆ ಇದಕ್ಕೆ ರಘು.. ನಾನು ಸಲಿಂಗ ಕಾಮಿಯಲ್ಲ. ನನ್ನ ಫೋನ್‌ನಲ್ಲಿ ಈ ಡೇಟಿಂಗ್‌ ಆ್ಯಪ್‌ಗಳು ಇರೋದು ನಿಜ. ಆದರೆ ನಾನು ಇದುವರೆಗೆ ಯಾವ ಸಲಿಂಗಿಯ ಜತೆ ಡೇಟಿಂಗ್‌ ಮಾಡಿಲ್ಲ. ಪ್ಲೀಸ್ ನನ್ನ ನಂಬಿ ಅಂತಾ ಆಕ್ಷೇಪಣೆ ಹಾಕಿದ್ದಾನೆ. ಹೀಗಾಗಿ ಅರ್ಪಿತಾ ಆರೋಪವನ್ನ ಕೋರ್ಟ್​ ಹೇಗೆ ಪರಿಗಣಿಸುತ್ತೆ ಅನ್ನೋದು ತೀವ್ರ ಕುತೂಹಲ ಮೂಡಿಸಿದೆ.

The post  ಸಲಿಂಗಿತನ ಬಯಲು ಮಾಡಿದ ಆ 2 ಆ್ಯಪ್? ಪತಿ ಮೋಸ ಮಾಡಿದ್ದಾನೆಂದು ವಿಚ್ಛೇದನ ಕೋರಿದ ಪತ್ನಿ appeared first on News First Kannada.

Source: newsfirstlive.com

Source link