ಕೃನಾಲ್ ಪಾಂಡ್ಯಗೆ ಕೊರೊನಾ ಪಾಸಿಟಿವ್ – ಭಾರತ, ಶ್ರೀಲಂಕಾ ಟಿ20 ಪಂದ್ಯ ರದ್ದು

ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ಆಲ್ ರೌಂಡರ್ ಕೃನಾಲ್ ಪಾಂಡ್ಯ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಶ್ರೀಲಂಕಾ ಜೊತೆಗಿನ ಟಿ20 ಪಂದ್ಯವನ್ನು ಸಹ ಆಡಿದ್ದಾರೆ. ಕೃನಾಲ್ ಸೋಂಕಿಗೆ ತುತ್ತಾಗಿರುವ ಹಿನ್ನೆಲೆ ಕೋಲಂಬೋದಲ್ಲಿ ನಡೆಯಬೇಕಿದ್ದ ಟಿ20 ಪಂದ್ಯವನ್ನು ಒಂದು ಮಟ್ಟಿಗೆ ಮುಂದೂಡಲಾಗಿದೆ.

ಇಂದು ಭಾರತ ಮತ್ತು ಶ್ರೀಲಂಕಾ ನಡುವೆ ಎರಡನೇ ಟಿ20 ಪಂದ್ಯ ನಡೆಯಬೇಕಿತ್ತು. ಕೃನಾಲ್ ಸೋಂಕಿತರಾಗಿರೋದು ಇನ್ನುಳಿದ ಆಟಗಾರರು ಐಸೋಲೇಟ್ ಆಗಿದ್ದಾರೆ. ಬಿಸಿಸಿಐ ಅಧಿಕಾರಿಯೊಬ್ಬರು ಮಾತನಾಡಿದ್ದು, ಕೃನಾಲ್ ವರದಿ ಪಾಸಿಟಿವ್ ಬರುತ್ತಿದ್ದಂತೆ ತಂಡದ ಎಲ್ಲ ಆಟಗಾರರು ಆರ್ ಟಿಪಿಸಿಆರ್ ಪರೀಕ್ಷೆಗೆ ಒಳಗಾಗಿದ್ದು, ವರದಿಯ ನಿರೀಕ್ಷೆಯಲ್ಲಿದ್ದಾರೆ. ಇಂದು ಸಂಜೆ ಎಲ್ಲರ ಕೊರೊನಾ ವರದಿ ಬರಲಿದ್ದು, ನೆಗೆಟಿವ್ ರಿಪೋರ್ಟ್ ಬಂದ್ರೆ ಬುಧವಾರ ಪಂದ್ಯ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.

ಮೂರು ಪಂದ್ಯಗಳಲ್ಲಿ 1-0ಯಲ್ಲಿ ಮುನ್ನಡೆಯಲ್ಲಿದೆ. ಮೊದಲ ಪಂದ್ಯವನ್ನು ಭಾರತ 38 ರನ್ ಗಳ ಅಂತರದಲ್ಲಿ ಗೆದ್ದುಕೊಂಡು ಜಯದ ನಗೆ ಬೀರಿತ್ತು. ಈ ಪಂದ್ಯದಲ್ಲಿ ಕೃನಾಲ್ ಎರಡು ಓವರ್ ಬಾಲ್ ಮಾಡಿ 16 ರನ್ ನೀಡಿ ಒಂದು ವಿಕೆಟ್ ಪಡೆದುಕೊಂಡಿದ್ದರು. ಜೊತೆಗೆ ಬ್ಯಾಟ್ ಹಿಡಿದು 3 ರನ್ ಸಹ ಕಲೆ ಹಾಕಿದ್ದರು.

ಇದಕ್ಕೂ ಮೊದಲು ಭಾರತ ತಂಡ ಏಕದಿನ ಸರಣಿಯನ್ನು ತನ್ನದಾಗಿಸಿಕೊಂಡಿದೆ. ಶಿಖರ್ ಧವನ್ ನಾಯಕತ್ವದಲ್ಲಿ ಮೂರು ಪಂದ್ಯಗಳ ಸರಣಿಯನ್ನು 2-1 ಅಂತರದಲ್ಲಿ ಗೆದ್ದುಕೊಂಡಿತ್ತು.

The post ಕೃನಾಲ್ ಪಾಂಡ್ಯಗೆ ಕೊರೊನಾ ಪಾಸಿಟಿವ್ – ಭಾರತ, ಶ್ರೀಲಂಕಾ ಟಿ20 ಪಂದ್ಯ ರದ್ದು appeared first on Public TV.

Source: publictv.in

Source link