‘ಹಿಟ್ಲರ್​​ ಕಲ್ಯಾಣ’ಕ್ಕೆ ಮುಹೂರ್ತ ಫಿಕ್ಸ್​; ಅಭಿಮಾನಿಗಳಿಗೆ ಇಲ್ಲಿದೆ ಸಿಹಿಸುದ್ದಿ

‘ಹಿಟ್ಲರ್​​ ಕಲ್ಯಾಣ’ಕ್ಕೆ ಮುಹೂರ್ತ ಫಿಕ್ಸ್​; ಅಭಿಮಾನಿಗಳಿಗೆ ಇಲ್ಲಿದೆ ಸಿಹಿಸುದ್ದಿ

ಹಿಟ್ಲರ್​ ಕಲ್ಯಾಣ ಕನ್ನಡದಲ್ಲಿ ವಿಭಿನ್ನ ಕಥಾ ಹಂದರ ಹೊಂದಿರುವ ಧಾರವಾಹಿ. ಪ್ರೊಮೋ ಹಾಗೂ ಮೇಕಿಂಗ್​ ಮೂಲಕವೇ ಬಾರಿ ಸದ್ದು ಮಾಡ್ತಾಯಿರುವ ಈ ಧಾರವಾಹಿ ಯಾವಾಗ ಲಾಂಚ್​ ಆಗತ್ತೆ ಅಂತಾ ಪ್ರೇಕ್ಷಕರು ಕಾಯುತ್ತಿದ್ದರು. ಇದೀಗ ಆ ಪ್ರೇಕ್ಷಕರಿಗೆ ಗುಡ್​ ನ್ಯೂಸ್​ ಸಿಕ್ಕಿದೆ.

ಈ ಮುಂಚೆ ಈ ಧಾರವಾಹಿ ಜುಲೈ 19 ರಂದು ಲಾಂಚ್​ ಆಗಲಿದೆ ಎಂಬ ಮಾಹಿತಿ ಇತ್ತು. ಆದರೆ ಕಾರಣಾಂತರಗಳಿಂದ ಪೋಸ್ಟ್​ಪೊನ್​ ಆಯ್ತು. ಸಾಕಷ್ಟು ನಿರೀಕ್ಷೆಯಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಕೊಂಚ ನಿರಾಸೆಯಾಗಿದೆ.

ಪ್ರತಿ ದಿನ ಸಂಜೆ 7 ಗಂಟೆಗೆ ನಿಮ್ಮನ್ನು ರಂಜಿಸಲಿದೆ
ಇದೀಗ ‘ಹಿಟ್ಲರ್​ ಕಲ್ಯಾಣ’ ಧಾರವಾಹಿಯ ಲಾಂಚ್​ ಡೇಟ್​ ಫಿಕ್ಸ್​ ಆಗಿದೆ. ಹೌದು, ಅಗಸ್ಟ್​ 9 ರಂದು ಹಿಟ್ಲ್​ ಕಲ್ಯಾಣ ಧಾರವಾಹಿ ತೆರೆಗೆ ಬರಲಿದೆ. ಪ್ರತಿ ದಿನ ಸಂಜೆ 7 ಗಂಟೆಗೆ ನಿಮ್ಮನ್ನು ರಂಜಿಸಲಿದೆ ಈ ಧಾರವಾಹಿ ಸದ್ಯ ಪ್ರೊಮೋ ರಿಲೀಸ್ ಮಾಡುವ ಮೂಲಕ ಈ ಸುದ್ದಿಯನ್ನ ತಿಳಿಸಿದ್ದಾರೆ. ಶೂಟಿಂಗ್​ನಲ್ಲಿ ಬ್ಯುಸಿಯಾಗಿರುವ ತಂಡ ಲಾಂಚ್​ಗಾಗಿ ಭರ್ಜರಿ ತಯಾರಿಯನ್ನು ನಡೆಸುತ್ತಿದೆ.

ಹಿಟ್ಲರ್​ ಕಲ್ಯಾಣ ಧಾರವಾಹಿಯಲ್ಲಿ ದಿಲೀಪ್‌ ರಾಜ್‌ ಕೇವಲ ನಟಿಸೋದಷ್ಟೇ ಅಲ್ಲದೆ, ನಿರ್ಮಾಣದ ಜವಾಬ್ದಾರಿಯೂ ಹೊತ್ತಿಕೊಂಡಿದ್ದು, ಪಾರು ಧಾರವಾಹಿ ನಿರ್ಮಿಸಿರೋ ದಿಲೀಪ್‌ ರಾಜ್‌ಗೆ ಈ ಪ್ರಾಜೆಕ್ಟ್ ಮೇಲೆ ಸಾಕಷ್ಟು ಹೋಪ್ಸ್‌ ಇದೆ. ಜೊತೆಗೆ ಪ್ರೇಕ್ಷಕರಿಗೂ ಈ ಧಾರವಾಹಿಯ ಮೇಲೆ ಬಹಳ ಭರವಸೆಯಿದೆ.
ಮಾವನ ರೋಲ್​ನಲ್ಲಿ ಮಿಂಚಲಿರುವ ದಿಲೀಪ್​ರಾಜ್​ಗೆ ಮೂವರು ಸೊಸೆಯಂದಿರುತ್ತಾರೆ. ಈ ಮೂವರು ಸೇರಿ ಮಾವನಿಗೆ ಹೆಂಡತಿ ಅಂದ್ರೆ ತಮಗೆ ಅತ್ತೆಯನ್ನು ಹುಡುಕುವ ತರಾತುರಿಯಲಿದ್ದಾರೆ.

ಮಾವ ತುಂಬಾನೆ ಡಿಸಿಪ್ಲೀನ್​. ಆದರೆ ಹೀರೊಯಿನ್​​ ಲೀಲಾಗೆ ಭಾರಿ ಗಡಿಬಿಡಿ ಹಾಗೂ ಬಜಾರಿ ಹುಡುಗಿ. ಇವರಿಬ್ಬರ ಕಾಂಬಿನೇಷನ್​ ತೆರೆ ಮೇಲೆ ಕಾಣಲು ಎಲ್ಲರು ಕಾಯ್ತಿದ್ದಾರೆ. ವಿಶೇಷ ಅಂದ್ರೆ ಕನ್ನಡದ ಹಿರಿಯ ನಟಿ ಅಭಿನಯ ಅವರು ಕೂಡ ಹಿಟ್ಲ​ರ್​ ಕಲ್ಯಾಣ ಧಾರವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಮಿಂಚಲಿದ್ದಾರೆ.

ಇದನ್ನೂ ಓದಿ: ಹಿಟ್ಲರ್‌ ಕಲ್ಯಾಣದ ‘ಯಡವಟ್ಟು ಲೀಲಾ’ ಯಾರು ಗೊತ್ತಾ..?

The post ‘ಹಿಟ್ಲರ್​​ ಕಲ್ಯಾಣ’ಕ್ಕೆ ಮುಹೂರ್ತ ಫಿಕ್ಸ್​; ಅಭಿಮಾನಿಗಳಿಗೆ ಇಲ್ಲಿದೆ ಸಿಹಿಸುದ್ದಿ appeared first on News First Kannada.

Source: newsfirstlive.com

Source link