ಗಂಡನ ಬ್ಲೂ ಫಿಲ್ಮ್​ ಕೇಸ್; ನಟಿ ಶಿಲ್ಪಾ ಶೆಟ್ಟಿಗೂ ಇದೆಯಾ ಬಂಧನದ ಭೀತಿ?

ಗಂಡನ ಬ್ಲೂ ಫಿಲ್ಮ್​ ಕೇಸ್; ನಟಿ ಶಿಲ್ಪಾ ಶೆಟ್ಟಿಗೂ ಇದೆಯಾ ಬಂಧನದ ಭೀತಿ?

ಶಿಲ್ಪಾ ಶೆಟ್ಟಿ ಪತಿ ರಾಜ್​ ಕುಂದ್ರಾ ಪಾರ್ನ್​ ಫಿಲ್ಮ್​ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದಾರೆ. ರಾಜ್​ ಕುಂದ್ರಾ ಪತ್ನಿ ಹಾಗೂ ಬಾಲಿವುಡ್​​​ ನಟಿ ಶಿಲ್ಪಾ ಶೆಟ್ಟಿಗೆ ಇನ್ನೂ ಕ್ಲೀನ್ ಚಿಟ್ ಸಿಗದೇ ಇರೋದು ಹಲವು ಅನುಮಾನಕ್ಕೆ ಕಾರಣವಾಗಿದೆ.

ಸುಮಾರು ನೂರಾರು ಕೋಟಿ ರೂಪಾಯಿ ವಹಿವಾಟು ನಡೆಸಿರೋ ಪಾರ್ನ್​​ ಮೂವೀ ಬ್ಯುಸಿನೆಸ್​ ಹಾಗೂ ಚಿತ್ರದ ಶೂಟಿಂಗ್​​ಗೆ ಸಂಬಂಧಿಸಿದಂತೆ ರಾಜ್​ ಕುಂದ್ರಾ ಸದ್ಯ ಮೊಕದ್ದಮೆ ಎದುರಿಸುತ್ತಿದ್ದಾರೆ. ಇಂದು ತಾನೆ ಮುಂಬೈನ ಕೋರ್ಟ್​ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿದೆ. ಅಲ್ಲದೇ ರಾಜ್​ ಕುಂದ್ರಾ ಬಂಧನದ ಬಳಿಕ ಪ್ಲೇಬಾಯ್​ ಮಾಡೆಲ್, ಮಾದಕ ನಟಿ ಶೆರ್ಲಿನ್​ ಛೋಪ್ರಾಗೂ ಸಮನ್ಸ್​ ಅನ್ನ ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ನೀಡಿದ್ದಾರೆ. ಅಲ್ಲದೇ ಮತ್ತೊಬ್ಬ ನಟಿ ಗೆಹನಾ ವಸಿಷ್ಠ್, ಈಗಾಗಲೇ ಬಂಧನಕ್ಕೆ ಈಡಾಗಿ ಜಾಮೀನು ಪಡೆದು ಹೊರ ಬಂದಿದ್ದಾರೆ. ಹೀಗಾಗಿ, ಈ ಪ್ರಕರಣದಲ್ಲಿ ಹಲವು ಹೈ ಪ್ರೊಫೈಲ್ ವ್ಯಕ್ತಿಗಳ ಹೆಸರೂ ಕೇಳಿ ಬರುತ್ತಿವೆ.
blank

ಈ ನಡುವೆ ರಾಜ್​ ಕುಂದ್ರಾ ಬ್ಯುಸಿನೆಸ್​ಗೆ ಸಂಬಂಧಿಸಿದಂತೆ ಹಲವು ಜಾಯಿಂಟ್​ ಅಕೌಂಟ್ ಶಿಲ್ಪಾ ಶೆಟ್ಟಿ ಜೊತೆಗೂ ಇದೆ ಎನ್ನಲಾಗಿದೆ. ಅಲ್ಲದೇ ತಾನೇ ಸ್ವತಃ ನಟಿಯಾಗಿರೋ ಶಿಲ್ಪಾ ಶೆಟ್ಟಿಗೆ, ಗಂಡನ ಚಲನಚಿತ್ರ ನಿರ್ಮಾಣ, ವಯಸ್ಕ್ ಆ್ಯಪ್​ಗಳ ಬಗ್ಗೆ ಮಾಹಿತಿ ಇರಲಿಲ್ಲ ಅಂತ ಹೇಳೋದು ಸದ್ಯದ ಮಟ್ಟಿಗೆ ಕಷ್ಟ ಎನ್ನಲಾಗ್ತಿದೆ. ಹೀಗಾಗಿಯೇ ಮುಂಬೈ ಪೊಲೀಸರು ಸಹ.. ಶಿಲ್ಪಾ ಶೆಟ್ಟಿಗೆ ಕ್ಲೀನ್ ಚಿಟ್ ನೀಡಿಲ್ಲ ಅಂತಾ ಹೇಳಿರೋದಾಗಿ ವರದಿಯಾಗಿದೆ. ಇದು ಸಹಜವಾಗಿ ಶಿಲ್ಪಾ ಶೆಟ್ಟಿಗೂ ಬಂಧನದ ಭೀತಿ ಇದೆಯಾ? ಅನ್ನೋ ಪ್ರಶ್ನೆ ಹುಟ್ಟು ಹಾಕಿದೆ.

blank

The post ಗಂಡನ ಬ್ಲೂ ಫಿಲ್ಮ್​ ಕೇಸ್; ನಟಿ ಶಿಲ್ಪಾ ಶೆಟ್ಟಿಗೂ ಇದೆಯಾ ಬಂಧನದ ಭೀತಿ? appeared first on News First Kannada.

Source: newsfirstlive.com

Source link