ರಾಜ್ಯವನ್ನ ಉನ್ನತ ಸ್ಥಾನಕ್ಕೆ ಕೊಂಡೊಯ್ಯಲು ಶ್ರಮಿಸುವೆ -ನಿಯೋಜಿತ ಸಿಎಂ ಬೊಮ್ಮಾಯಿ ಭರವಸೆ

ರಾಜ್ಯವನ್ನ ಉನ್ನತ ಸ್ಥಾನಕ್ಕೆ ಕೊಂಡೊಯ್ಯಲು ಶ್ರಮಿಸುವೆ -ನಿಯೋಜಿತ ಸಿಎಂ ಬೊಮ್ಮಾಯಿ ಭರವಸೆ

ಬೆಂಗಳೂರು: ನೂತನ ಸಿಎಂ ಆಗಿ ಆಯ್ಕೆ ಮಾಡಿದ್ದಕ್ಕೆ ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ ಅಂತಾ ನಿಯೋಜಿತ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ನೂತನ ಸಿಎಂ ಆಯ್ಕೆ ಬೆನ್ನಲ್ಲೇ ಮಾಧ್ಯಮಗಳ ಜೊತೆ ಮಾತನಾಡಿದ ಬೊಮ್ಮಾಯಿ.. ನನ್ನ ಹೆಸರನ್ನ ಸಿಎಂ ಬಿಎಸ್​ ಯಡಿಯೂರಪ್ಪ ಸೂಚಿಸಿ ಆಶೀರ್ವಾದ ಮಾಡಿದ್ದಾರೆ. ಎಲ್ಲ ಶಾಸಕರು ನನ್ನನ್ನ ಸರ್ವಾನುಮತದಿಂದ ಆಯ್ಕೆ ಮಾಡಿದ್ದಾರೆ. ನಾನು ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತೇನೆ. ಬಿಎಸ್​ ಯಡಿಯೂರಪ್ಪ ಆಶೀರ್ವಾದಿಂದ ರೈತರ, ಕೂಲಿ ಕಾರ್ಮಿಕರು, ಬಡವರ ಹಿತ ರಕ್ಷಣೆಗೆ ಕೆಲಸ ಕಾರ್ಯಗಳನ್ನ ಪ್ರಾಮಾಣಿಕವಾಗಿ ಮಾಡುತ್ತೇನೆ ಅಂತಾ ಭರವಸೆಯನ್ನ ನೀಡಿದ್ದಾರೆ.

The post ರಾಜ್ಯವನ್ನ ಉನ್ನತ ಸ್ಥಾನಕ್ಕೆ ಕೊಂಡೊಯ್ಯಲು ಶ್ರಮಿಸುವೆ -ನಿಯೋಜಿತ ಸಿಎಂ ಬೊಮ್ಮಾಯಿ ಭರವಸೆ appeared first on News First Kannada.

Source: newsfirstlive.com

Source link