ಬೊಮ್ಮಾಯಿ ಆಯ್ಕೆ ಬೆನ್ನಲ್ಲೇ DCM ಸ್ಥಾನಕ್ಕೆ ಹೆಸರು ಘೋಷಣೆ: ಅಶೋಕ್, ರಾಮುಲು ಕಾರಜೋಳಗೆ ಅವಕಾಶ

ಬೊಮ್ಮಾಯಿ ಆಯ್ಕೆ ಬೆನ್ನಲ್ಲೇ DCM ಸ್ಥಾನಕ್ಕೆ ಹೆಸರು ಘೋಷಣೆ: ಅಶೋಕ್, ರಾಮುಲು ಕಾರಜೋಳಗೆ ಅವಕಾಶ

ಬೆಂಗಳೂರು: ನೂತನ ಸಿಎಂ ಆಗಿ ಬಸವರಾಜ್ ಬೊಮ್ಮಾಯಿ ಅವರನ್ನ ಆಯ್ಕೆ ಮಾಡಿದ ಬೆನ್ನಲ್ಲೇ ಮೂವರು ಡಿಸಿಎಂಗಳನ್ನೂ ಕೂಡ ಆಯ್ಕೆ ಮಾಡಲಾಗಿದೆ.

ನ್ಯೂಸ್​ಫಸ್ಟ್​ಗೆ ಸಿಕ್ಕಿರುವ ಮಾಹಿತಿ ಪ್ರಕಾರ ಮಾಜಿ ಸಚಿವರಾದ ಆರ್​.ಅಶೋಕ್, ಶ್ರೀರಾಮುಲು ಹಾಗೂ ಗೋವಿಂದ್ ಕಾರುಜೋಳ ಅವರನ್ನ ಉಪಮುಖ್ಯಮಂತ್ರಿಯನ್ನಾಗಿ ಘೋಷಣೆ ಮಾಡಲಾಗಿದೆ. ಅದರಂತೆ ನಾಳೆ ಮಧ್ಯಾಹ್ನ ಬೊಮ್ಮಾಯಿ ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಈ ವೇಳೆ ಮೂವರು ಡಿಸಿಎಂಗಳು ಕೂಡ ಪ್ರಮಾಣ ವಚನ ಸ್ವೀಕಾರ ಮಾಡುವ ಸಾಧ್ಯತೆ ಇದೆ.

The post ಬೊಮ್ಮಾಯಿ ಆಯ್ಕೆ ಬೆನ್ನಲ್ಲೇ DCM ಸ್ಥಾನಕ್ಕೆ ಹೆಸರು ಘೋಷಣೆ: ಅಶೋಕ್, ರಾಮುಲು ಕಾರಜೋಳಗೆ ಅವಕಾಶ appeared first on News First Kannada.

Source: newsfirstlive.com

Source link