‘DCM ಆಫ್ ಕರ್ನಾಟಕ ಮಸ್ಟ್ & ಕಂಪಲ್ಸರಿ’ ಫಲಿಸಿತು ಶ್ರೀರಾಮುಲು ಪ್ರಾರ್ಥನೆ; ವರ ನೀಡಿದ ಗಡೇ ದುರ್ಗಾದೇವಿ

‘DCM ಆಫ್ ಕರ್ನಾಟಕ ಮಸ್ಟ್ & ಕಂಪಲ್ಸರಿ’ ಫಲಿಸಿತು ಶ್ರೀರಾಮುಲು ಪ್ರಾರ್ಥನೆ; ವರ ನೀಡಿದ ಗಡೇ ದುರ್ಗಾದೇವಿ

ಭಕ್ತಿಯಿಂದ ಬೇಡಿಕೊಂಡಾಗ ಆ ದೇವರು ಖಂಡಿತ ವರ ಕೊಡ್ತಾರೆ ಅನ್ನೋ ಮಾತಿದೆ. ಆ ಮಾತು ಸತ್ಯ ಅನ್ನುವ ಹಾಗೆ ಇಂದು ಶ್ರೀರಾಮುಲು ಡಿಸಿಎಂ ಆಗಿ ಆಯ್ಕೆಯಾಗಿದ್ದಾರೆ.

ಹೌದು ಸೆಪ್ಟೆಂಬರ್ 17, 2020ರಂದು  ಅಂದಿನ ಆರೋಗ್ಯ ಸಚಿವ ಶ್ರೀರಾಮುಲು  ಗಡೇ ದುರ್ಗಾದೇವಿಯ ಮೊರೆ ಹೋಗಿದ್ದರು. ಕಲ್ಯಾಣ ಕರ್ನಾಟಕ ಉತ್ಸವದ ಹಿನ್ನೆಲೆ ಯಾದಗಿರಿಗೆ ತೆರಳಿದ್ದ ಅವರು, ವಡಗೇರಾ ತಾಲೂಕಿನ ಗೋನಾಲದಲ್ಲಿರುವ ಗಡೇ ದುರ್ಗಾದೇವಿ ದೇವಸ್ಥಾನಕ್ಕೆ ಭೇಟಿ ನೀಡಿದ್ರು. ಈ ವೇಳೆ ಅವರು ತಮಗೆ ಡಿಸಿಎಂ ಸ್ಥಾನ ಒಲಿಯಲಿ ಎಂದು ದೇವಿಗೆ ಪ್ರಾರ್ಥನೆ ಸಲ್ಲಿಸಿದ್ದರು.

ಅವರ ಪತ್ರದಲ್ಲಿ ಏನಿತ್ತು?

ಡೆಪ್ಯುಟಿ ಚೀಫ್ ಮಿಸ್ಟರ್ ಆಫ್ ಕರ್ನಾಟಕ ಮಸ್ಟ್ & ಕಂಪಲ್ಸರಿ ಎಂದು ಶ್ರೀರಾಮುಲು ಪತ್ರ ಬರೆದು ತಾಯಿಗೆ ಒತ್ತಾಯ ಪೂರ್ವಕ ಮನವಿ ಮಾಡಿಕೊಂಡಿದ್ದರು. ಅಲ್ಲದೇ ದೇವಾಲಯದಲ್ಲಿ ಅರ್ಚನೆ ಕೂಡ ಮಾಡಿದ್ರು. ರಾಮುಲು ಬರೆದ ಪತ್ರ ನ್ಯೂಸ್​​ಫಸ್ಟ್​ಗೆ ಲಭ್ಯವಾಗಿದೆ. ಈ ಹಿಂದೆ ದೇವಿ ದರ್ಶನ ಪಡೆದಿದ್ದ ಡಿಕೆ ಶಿವಕುಮಾರ್, ಸಂಕಷ್ಟ ದೂರವಾಗುವಂತೆ ಮೊರೆ ಇಟ್ಟಿದ್ದರು. ಬಳಿಕ ಅವರಿಗೆ ಕೆಪಿಸಿಸಿ ಪಟ್ಟ ದಕ್ಕಿತ್ತು. ಈಗ ಶ್ರೀರಾಮುಲು ಕೂಡ ಡಿಸಿಎಂ ಪಟ್ಟಕ್ಕಾಗಿ ದೇವಿಗೆ ಪ್ರಾರ್ಥನೆ ಸಲ್ಲಿಸಿದ್ದರು. ಅವರ ಸಂಕಲ್ಪದಂತೆ ದೇವಸ್ಥಾನ ಪೂಜಾರಿ ಮರಿಸ್ವಾಮಿ, ದೇವಿಗೆ ಅರ್ಚನೆ ಮಾಡಿದ್ದರು.

blank

ಮನಸ್ಸಿನಲ್ಲೇನಿದೆ ಅದೇ ಪತ್ರದಲ್ಲಿದೆ
ಪೂಜೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಸಿದ್ದ ಶ್ರೀರಾಮುಲು, ಗಡೇ ದುರ್ಗಾದೇವಿ ಬಗ್ಗೆ ಸ್ನೇಹಿತರಿಂದ ತಿಳಿದುಕೊಂಡಿದ್ದೆ. ಹೀಗಾಗಿ ಭೇಟಿ ನೀಡಿದ್ದೇನೆ. ಒಳ್ಳೆಯದಾಗಲಿ ಎಂದು ದೇವಿಗೆ ಪತ್ರ ಬರೆದಿದ್ದೇನೆ. ಮನಸ್ಸಿನಲ್ಲಿರುವುದನ್ನೇ ಬರೆದುಕೊಟ್ಟಿದ್ದೇನೆ. ಆದ್ರೆ ದೇವಿ ಮುಂದೆ ಹೇಳಿಕೊಂಡ ವಿಚಾರಗಳನ್ನ ಬಹಿರಂಗವಾಗಿ ಹೇಳಲಾರೆ ಎಂದು ಹೇಳಿದ್ದರು. ರಾಷ್ಟೀಯ ನಾಯಕರು ಸ್ಥಾನ ಮಾನದ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ರಾಮುಲು ಸ್ಪಷ್ಟಪಡಿಸಿದ್ರು.

ಇದನ್ನೂ ಓದಿ: ‘ಡಿಸಿಎಂ ಆಫ್ ಕರ್ನಾಟಕ ಮಸ್ಟ್ & ಕಂಪಲ್ಸರಿ’: ದುರ್ಗಾದೇವಿಗೆ ಶ್ರೀರಾಮುಲು ಪತ್ರ

The post ‘DCM ಆಫ್ ಕರ್ನಾಟಕ ಮಸ್ಟ್ & ಕಂಪಲ್ಸರಿ’ ಫಲಿಸಿತು ಶ್ರೀರಾಮುಲು ಪ್ರಾರ್ಥನೆ; ವರ ನೀಡಿದ ಗಡೇ ದುರ್ಗಾದೇವಿ appeared first on News First Kannada.

Source: newsfirstlive.com

Source link