ಬೊಮ್ಮಾಯಿ ನನಗಿಂತ ಒಳ್ಳೆಯ ಕೆಲಸ ಮಾಡ್ತಾರೆ ಅನ್ನೋ ಸಂಪೂರ್ಣ ವಿಶ್ವಾಸ ಇದೆ -ಬಿಎಸ್​ವೈ ಭರವಸೆ

ಬೊಮ್ಮಾಯಿ ನನಗಿಂತ ಒಳ್ಳೆಯ ಕೆಲಸ ಮಾಡ್ತಾರೆ ಅನ್ನೋ ಸಂಪೂರ್ಣ ವಿಶ್ವಾಸ ಇದೆ -ಬಿಎಸ್​ವೈ ಭರವಸೆ

ಬೆಂಗಳೂರು: ಆಡಳಿತ ಮತ್ತು ರಾಜಕೀಯದಲ್ಲಿ ಬಸವರಾಜ್ ಬೊಮ್ಮಾಯಿ ಅವರಿಗೆ ತುಂಬಾ ಅನುಭವ ಇದೆ. ರಾಜ್ಯದಲ್ಲಿ ನನಗಿಂತ ಒಳ್ಳೆಯ ಕೆಲಸವನ್ನ ಕೊಡ್ತಾರೆ ಅನ್ನೋ ಸಂಪೂರ್ಣ ವಿಶ್ವಾಸ ನನಗಿದೆ ಅಂತಾ ನಿರ್ಗಮಿತ ಸಿಎಂ ಬಿಎಸ್​ ಯಡಿಯೂರಪ್ಪ ಹೇಳಿದ್ದಾರೆ.

ಬಸವರಾಜ್ ಬೊಮ್ಮಾಯಿ ಅವರನ್ನ ನೂತನ ಸಿಎಂ ಆಗಿ ಆಯ್ಕೆ ಮಾಡಿದ ಬೆನ್ನಲ್ಲೇ ಮಾಧ್ಯಮಗಳ ಜೊತೆ ಮಾತನಾಡಿದ ಯಡಿಯೂರಪ್ಪ.. ಶಾಸಕಾಂಗ ಪಕ್ಷದ ಸಭೆಯಲ್ಲಿ ಬೊಮ್ಮಾಯಿ ಅವರನ್ನ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದರು.

ಈಗ ರಾಜಭವನಕ್ಕೆ ತೆರಳಿ ಪ್ರಮಾಣವಚನ ಸ್ವೀಕಾರಕ್ಕೆ ಅನುಮತಿ ಕೇಳ್ತೇವೆ. ಬಹುಶಃ ನಾಳೆ ಬೆಳಗ್ಗೆಯೇ ಪ್ರಮಾಣ ವಚನ ಸ್ವೀಕಾರ ಮಾಡಬಹುದು. ಬೊಮ್ಮಾಯಿ ಅವರಿಗೆ ರಾಜ್ಯದ ಜನತೆ ಸಂಪೂರ್ಣ ಸಹಕಾರ ಕೊಡ್ತಾರೆ. ಕಾರ್ಯಕರ್ತರಿಗೆ ಸಂತೋಷ ಆಗಿದೆ. ನನಗೆ ಸಂಪೂರ್ಣ ವಿಶ್ವಾಸ ಇದೆ. ಅವರಿಗೆ ರಾಜಕೀಯ ಅನುಭವ ಇದೆ. ನನಗಿಂತ ಒಳ್ಳೆಯಕ ಕೆಲಸ ಮಾಡುತ್ತಾರೆ ಅಂತಾ ವಿಶ್ವಾಸ ವ್ಯಕ್ತಪಡಿಸಿದರು.

The post ಬೊಮ್ಮಾಯಿ ನನಗಿಂತ ಒಳ್ಳೆಯ ಕೆಲಸ ಮಾಡ್ತಾರೆ ಅನ್ನೋ ಸಂಪೂರ್ಣ ವಿಶ್ವಾಸ ಇದೆ -ಬಿಎಸ್​ವೈ ಭರವಸೆ appeared first on News First Kannada.

Source: newsfirstlive.com

Source link