ಪ್ರಾಣಿ ಪ್ರಿಯ ಬೊಮ್ಮಾಯಿ; ನೆಚ್ಚಿನ ನಾಯಿ ಸನ್ನಿಗಾಗಿ ಬಿಕ್ಕಿ ಬಿಕ್ಕಿ ಅತ್ತಿತ್ತು ಇಡೀ ಕುಟುಂಬ

ಪ್ರಾಣಿ ಪ್ರಿಯ ಬೊಮ್ಮಾಯಿ; ನೆಚ್ಚಿನ ನಾಯಿ ಸನ್ನಿಗಾಗಿ ಬಿಕ್ಕಿ ಬಿಕ್ಕಿ ಅತ್ತಿತ್ತು ಇಡೀ ಕುಟುಂಬ

ಬೆಂಗಳೂರು: ಬಿಜೆಪಿ ಶಾಸಕಾಂಗ ಸಭೆಯಲ್ಲಿ ಬಸವರಾಜ್ ಬೊಮ್ಮಾಯಿ ಅವರನ್ನ ರಾಜ್ಯದ ನೂತನ ಸಿಎಂ ಆಗಿ ಅಧಿಕೃತ ಘೋಷಣೆ ಮಾಡಲಾಗಿದೆ. ಇಂದು ನಡೆದ ಶಾಸಕಾಂಗ ಸಭೆಯಲ್ಲಿ ಬಿಜೆಪಿ ಕೇಂದ್ರದ ನಾಯಕ ಧರ್ಮೇಂದ್ರ ಪ್ರಧಾನ್ ಅವರು ಬೊಮ್ಮಾಯಿ ಅವರ ಹೆಸರನ್ನ ಅಧಿಕೃತವಾಗಿ ಘೋಷಣೆ ಮಾಡಿದರು. ಅದರಂತೆ ಬೊಮ್ಮಾಯಿ ಅವರು ನಾಳೆ ಮಧ್ಯಾಹ್ನ ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.

ನಿಮಗೆ ಗೊತ್ತಾ?

ಇವತ್ತು ಆಯ್ಕೆಯಾದ ನೂತನ ಸಿಎಂ ಬಸವರಾಜ್‌ ಬೊಮ್ಮಾಯಿ ಪ್ರಾಣಿಪ್ರಿಯರು. ಸೂಕ್ಷ್ಮ ಸ್ವಭಾವದವರು. ಭಾವುಕ ಜೀವಿ. ಇದಕ್ಕೊಂದು ಉದಾಹರಣೆಯನ್ನ ನಾವು ಇಲ್ಲಿ ಗಮನಿಸಲೇಬೇಕು. ಸಿಎಂ ಬಸವರಾಜ್‌ ಬೊಮ್ಮಾಯಿಯವ್ರಿಗೆ ಪ್ರಾಣಿಗಳು ಅಂದ್ರೆ ಅದರಲ್ಲೂ ತಾವು ಸಾಕಿದ್ದ ಸನ್ನಿ ಅನ್ನೋ ಶ್ವಾನ ಅಂದ್ರೆ ಅಚ್ಚುಮೆಚ್ಚು. ಅಂಥ  ನೆಚ್ಚಿನ ಶ್ವಾನವನ್ನು ಕಳೆದುಕೊಂಡಿದ್ದ ಬೊಮ್ಮಾಯಿಯವ್ರು ತೀವ್ರ ದುಃಖ ತಪ್ತರಾಗಿದ್ರು. ಅದೆಷ್ಟರ ಮಟ್ಟಿಗೆ ಅಂದ್ರೆ ಆ ಶ್ವಾನದ ಮುಂದೆ ಕಣ್ಣೀರು ಹಾಕಿದ್ರು.

blank

ಸನ್ನಿ ಅನ್ನೋ ಶ್ವಾನ ಕಳೆದುಕೊಂಡಾಗ ಬಸವರಾಜ್ ಬೊಮ್ಮಾಯಿ, ಅವರ ಪತ್ನಿ ಮತ್ತು ಕುಟುಂಬ ಸದಸ್ಯರು ಸಂಪ್ರದಾಯ ಬದ್ಧವಾಗಿ ಅಂತಿಮ ವಿದಾಯ ಹೇಳಿದ್ರು. ತಮ್ಮ ಕುಟುಂಬದ ಒಬ್ಬ ಸದಸ್ಯನಂತೆಯೇ ಇದ್ದ ‘ಸನ್ನಿ’ ಸಾವಿನಿಂದಾಗಿ ಬಸವರಾಜ್ ಬೊಮ್ಮಾಯಿ ಮತ್ತು ಅವರ ಕುಟುಂಬಸ್ಥರು ತೀವ್ರ ದುಃಖತ ಪ್ತರಾಗಿ ಕಣ್ಣಿರು ಹಾಕಿದ್ರು.

blank

ಇನ್ನು ತಮ್ಮ ನೆಚ್ಚಿನ ನಾಯಿ ಬಗ್ಗೆ ಟ್ವೀಟರ್‌ನಲ್ಲೂ ಬರೆದುಕೊಂಡಿದ್ದ ಬೊಮ್ಮಾಯಿಯವ್ರು, ನಮ್ಮ ಮನೆಯ ಮುದ್ದಿನ ನಾಯಿ ‘ಸನ್ನಿ’ ಸಾವನ್ನಪ್ಪಿದ್ದು, ತೀವ್ರ ದುಃಖ ತಂದಿದೆ. ಕುಟುಂಬದ ಓರ್ವ ಸದಸ್ಯನನ್ನು ಕಳೆದುಕೊಂಡಂತಾಗಿದೆ. ಮನೆಯ ಹಾಗೂ ಮನೆಗೆ ಬರುವ ಎಲ್ಲರೊಂದಿಗೆ ಅತ್ಯಂತ ಪ್ರೀತಿಯಿಂದ ಬೆರೆಯುತ್ತಿತ್ತು. ಓಂ ಶಾಂತಿಃ. ಅಂತ ಭಾವನಾತ್ಮಕವಾಗಿ ಬರೆದು ಹಾಕಿದ್ರು.  ಇದು ನೂತನ ಸಿಎಂ ಆಗಿ ಆಯ್ಕೆಯಾದ ಬಸವರಾಜ್‌ ಬೊಮ್ಮಾಯಿ ಭಾವುಕ ಜೀವಿ, ಸೂಕ್ಷ್ಮ ಸ್ವಭಾವದವ್ರು ಅನ್ನೋದಕ್ಕೆ ಉದಾಹರಣೆ.

ಇಂಥ ಭಾವುಕ ವ್ಯಕ್ತಿ ಇಂದು ರಾಜ್ಯದ ಚುಕ್ಕಾಣಿ ಹಿಡಿಯುತ್ತಿದ್ದು.. ಜನರ ದುಃಖವನ್ನು ಮರೆ ಮಾಚುವಂಥ, ರಾಜ್ಯ ಅಭಿವೃದ್ಧಿ ಪಥದತ್ತ ಸಾಗುವಂಥ ಆಡಳಿತ ನೀಡಲಿ ಅನ್ನೋದು ರಾಜ್ಯದ ಜನತೆಯ ಆಶಯವಾಗಿದೆ.

ಇದನ್ನೂ ಓದಿ:  ಮುದ್ದಿನ ‘ಸನ್ನಿ’ ಸಾವು; ಗೃಹ ಸಚಿವ ಬೊಮ್ಮಾಯಿ ಕುಟುಂಬಸ್ಥರ ಕಣ್ಣೀರು

 

The post ಪ್ರಾಣಿ ಪ್ರಿಯ ಬೊಮ್ಮಾಯಿ; ನೆಚ್ಚಿನ ನಾಯಿ ಸನ್ನಿಗಾಗಿ ಬಿಕ್ಕಿ ಬಿಕ್ಕಿ ಅತ್ತಿತ್ತು ಇಡೀ ಕುಟುಂಬ appeared first on News First Kannada.

Source: newsfirstlive.com

Source link