ಬಹಳ ಆತ್ಮೀಯರಾಗಿರೋ ಬೊಮ್ಮಾಯಿ ಉತ್ತಮ ಆಡಳಿತ ನೀಡಲಿದ್ದಾರೆ: ಬೆಲ್ಲದ್

ಬೆಂಗಳೂರು: ಸದ್ಯದ ರಾಜಕೀಯದ ವಾತಾವರಣದಲ್ಲಿ ಪಕ್ಷವನ್ನು ಅತ್ಯಂತ ಸಮರ್ಥವಾಗಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ಮುಂದೆ ಹೋಗೋಕೆ ಶಕ್ತಿ, ಯುಕ್ತಿ ಹಾಗೂ ಅನುಭವ ಇರುವಂತಹ ಒಬ್ಬ ಉತ್ತಮ ನಾಯಕ ಬಸವರಾಜ್ ಬೊಮ್ಮಾಯಿ ಎಂದು ಅರವಿಂದ ಬೆಲ್ಲದ್ ಹೇಳಿದ್ದಾರೆ.

ಸಿಎಂ ಆಗಿ ಬಸವರಾಜ್ ಬೊಮ್ಮಾಯಿ ಆಯ್ಕೆಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೊಮ್ಮಾಯಿ ಅವರು ನನಗೆ ವೈಯಕ್ತಿಕವಾಗಿ ಬಹಳ ಆತ್ಮೀಯರು. ಇದೀಗ ಅವರು ಬಿಜೆಪಿ ಪಕ್ಷದ ಹೊಸ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುತ್ತಿರುವುದು ಬಹಳ ಸಂತಸದ ವಿಚಾರ ಎಂದು ತಿಳಿಸಿದರು.

ಬಿಜೆಪಿ ಪಕ್ಷಕ್ಕೆ ಕರ್ನಾಟಕದಲ್ಲಿ ಒಂದು ಹೊಸ ರೂಪ, ಚೇತನ ಕೊಟ್ಟು 2023ನೇ ವರ್ಷ ಚುನಾವಣೆಯಲ್ಲಿ ಬಿಜೆಪಿ ತನ್ನ ಸ್ವಂತ ಶಕ್ತಿಯ ಹಾಗೂ ಬಹುದೊಡ್ಡ ಬಹುಮತದ ಮೇಲೆ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ. ಈ ನಿಟ್ಟಿನಲ್ಲಿ ಬೊಮ್ಮಾಯಿ ಶ್ರಮಿಸುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ನಾಳೆ ಬೆಳಗ್ಗೆ 11 ಗಂಟೆಗೆ ಮುಖ್ಯಮಂತ್ರಿಯಾಗಿ ಬೊಮ್ಮಾಯಿ ಪ್ರಮಾಣವಚನ

blank

ಉತ್ತಮ ಹಾಗೂ ಜನಮೆಚ್ಚುವಂತಹ ಆಡಳಿತವನ್ನು ಬೊಮ್ಮಾಯಿ ನೀಡುತ್ತಾರೆ. ಅವರ ತಾಯಿಯ ಹೆಸರು ಗಂಗಮ್ಮ. ಅವರಿಗೆ ಅತೀ ಮನಸ್ಸಿಗೆ ಅತೀ ಸಮೀಪ ಇರುವಂತಹ ವಿಷಯ ಅಂದ್ರೆ ಅದು ನೀರಾವರಿ. ಹೀಗಾಗಿ ರಾಜ್ಯದ ರೈತರ ಪರ ನಿಲ್ಲುತ್ತಾರೆ. ಇಷ್ಟು ಮಾತ್ರವಲ್ಲದೆ ಬೊಮ್ಮಾಯಿ ಉತ್ತಮ ಒಬ್ಬ ಎಂಜಿನಿಯರ್ ಹಾಗೂ ಒಬ್ಬ ಇಂಡಸ್ಟ್ರಿಯಲಿಸ್ಟ್ ಕೂಡ. ಹಾಗಾಗಿ ಉದ್ಯೋಗ ಸೃಷ್ಟಿ ಮಾಡುವ ಇಂಡಸ್ಟ್ರೀ ಹಾಗೂ ಅವರ ಮನಸ್ಸಿಗೆ ಪ್ರೀತಿ ಇರುವಂತಹ ನೀರಾವರಿ. ಅದರ ಮೂಲಕ ರಾಜ್ಯದ ರೈತರ ಕಷ್ಟಗಳನ್ನು ಆಲಿಸಿ ರೈತರ ಪರ ಸರ್ಕಾರ ನಡೆಸಲಿದ್ದಾರೆ ಎಂದು ಬೆಲ್ಲದ್ ತಿಳಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಸಿಎಂ ಬದಲಾವಣೆ ಆಗಿದ್ದಕ್ಕೆ ಗಡ್ಡ ತೆಗೆದೆ: ಯತ್ನಾಳ್

blank

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷದ ಕಾರ್ಯಕ್ರಮದಲ್ಲಿ ದುಃಖದಿಂದಲೇ ಬಿ.ಎಸ್ ಯಡಿಯೂರಪ್ಪ ಅವರು ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನಿಡಿದ್ದರು. ಆ ಬಳಿಕ ರಾಜ್ಯ ರಾಜಕೀಯದಲ್ಲಿ ಭಾರೀ ಬೆಳವಣಿಗೆಗಳು ನಡೆದವು. ಮುರುಗೇಶ್ ನಿರಾಣಿ, ಅರವಿಂದ್ ಬೆಲ್ಲದ್ ಹಾಗೂ ಪ್ರಹ್ಲಾದ್ ಜೋಶಿ ಹೆಸರು ಬಲವಾಗಿ ಕೇಳಿ ಬಂದಿತ್ತು. ಇದಾದ ಬಳಿಕ ಸಿಎಂ ರೇಸ್ ನಲ್ಲಿ ಬಸವರಾಜ್ ಬೊಮ್ಮಾಯಿ ಹೇಸರು ಕೇಳಿ ಬಂದಿದ್ದು, ಕೊನೆಗೆ ಬಿಜೆಪಿ ನಾಯಕರು ಇವರ ಹೆಸರನ್ನೇ ಸೂಚಿಸಿದ್ದಾರೆ. ಸದ್ಯ ನಾಳೆ ಬೆಳಗ್ಗೆ 11 ಗಂಟೆಗೆ ಬದವರಾಜ್ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

The post ಬಹಳ ಆತ್ಮೀಯರಾಗಿರೋ ಬೊಮ್ಮಾಯಿ ಉತ್ತಮ ಆಡಳಿತ ನೀಡಲಿದ್ದಾರೆ: ಬೆಲ್ಲದ್ appeared first on Public TV.

Source: publictv.in

Source link