ಸಿಎಂ ಆಯ್ಕೆಯಲ್ಲಿ ಯಡಿಯೂರಪ್ಪನವರ ಕೈ ಮೇಲಾದ್ರೆ ತಪ್ಪೇನಿದೆ?: ಈಶ್ವರಪ್ಪ

ಬೆಂಗಳೂರು: ಪಕ್ಷದಲ್ಲಿ ಅಥವಾ ಸಿಎಂ ಆಯ್ಕೆಯಲ್ಲಿ ಬಿ.ಎಸ್.ಯಡಿಯೂರಪ್ಪನವರ ಕೈ ಮೇಲಾದ್ರೆ ತಪ್ಪೇನು? ಅವರು ನಮ್ಮ ಪಕ್ಷದ ನಾಯಕರು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಶಾಸಕಾಂಗ ಸಭೆ ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಈಶ್ವರಪ್ಪನವರು, ಬಿಜೆಪಿ ಪಕ್ಷದಲ್ಲಿ ನಿರೀಕ್ಷಿತ ಅಥವಾ ಅನಿರೀಕ್ಷಿತ ಅನ್ನೋದು ಇಲ್ಲ. ಇಂದು ಸರ್ವಸಮ್ಮತವಾಗಿ ನೂತನ ಮುಖ್ಯಮಂತ್ರಿಗಳ ಆಯ್ಕೆಯಾಗಿರೋದಕ್ಕೆ ತುಂಬಾ ಸಂತೋಷವಾಗಿದೆ. ಪಕ್ಷದ ಹಿರಿಯರು ಮತ್ತು ಪ್ರಮುಖರ ನಿರ್ಧಾರಕ್ಕೆ ನಾವೆಲ್ಲ ಬದ್ಧವಾಗಿದೆ ಎಂದರು.

ಆಪ್ತರನ್ನ ಸಿಎಂ ಮಾಡುವ ಮೂಲಕ ಯಡಿಯೂರಪ್ಪ ಮೇಲುಗೈ ಸಾಧಿಸಿದ್ರಾ ಪ್ರಶ್ನೆಗೆ ಉತ್ತರಿಸಿದ ಈಶ್ವರಪ್ಪ, ಬಿಎಸ್‍ವೈ ಅವರ ಕೈಯೇ ಮೇಲಾಗಲಿ ಅದರಲ್ಲಿ ತಪ್ಪೇನಿದೆ. ಬಿ.ಎಸ್.ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ನಮ್ಮ ಪಕ್ಷದ ಮುಖಂಡರು. ಮುಂದಿನ ಚುನಾವಣೆಯನ್ನು ಮತ್ತೆ ಯಡಿಯೂರಪ್ಪನವರ ನೇತೃತ್ವದಲ್ಲಿಯೇ ಹೋಗುತ್ತೇವೆ ಮತ್ತು ಗೆದ್ದು ಕರ್ನಾಟಕದಲ್ಲಿ ಮತ್ತೆ ಸರ್ಕಾರ ರಚನೆ ಮಾಡಲಿದ್ದೇವೆ ಎಂದು ಭವಿಷ್ಯ ನುಡಿದರು.

ಸಿಎಂ ಸ್ಥಾನಕ್ಕೆ ಹಲವು ಹೆಸರುಗಳು ಕೇಳಿ ಬರೋದು ಸಹಜ. ಕೊನಗೆ ಒಬ್ಬರ ಹೆಸರು ಅಂತಿಮವಾಗಿದೆ. ಹೆಸರುಗಳು ಎಷ್ಟೇ ಕೇಳಿ ಬಂದ್ರೂ ಅಂತಿಮೆ ಒಂದೇ ಆಗಬೇಕು. ಅದು ಇಂದು ಅಂತಿಮವಾಗಿದೆ ಎಂದರು. ಇದನ್ನೂ ಓದಿ: ರಾಜ್ಯದಲ್ಲಿ ಸಿಎಂ ಬದಲಾವಣೆ ಆಗಿದ್ದಕ್ಕೆ ಗಡ್ಡ ತೆಗೆದೆ: ಯತ್ನಾಳ್

blank

ಬದಲಾವಣೆ ಆಗಿದ್ದಕ್ಕೆ ಗಡ್ಡ ತೆಗೆದ ಯತ್ನಾಳ್: ನಾವು ಹೇಳಿದಂತೆ ಬದಲಾವಣೆ ಆಗಿದೆ. ಯಾರು ಅನ್ನೋದು ಇಲ್ಲಿ ಮುಖ್ಯವಲ್ಲ. ಬಸವರಾಜ ಬೊಮ್ಮಾಯಿ ಬಿಜೆಪಿ ಹೈಕಮಾಂಡ್ ನ ಸರ್ವಸಮ್ಮತದ ಆಯ್ಕೆ. ಬೊಮ್ಮಾಯಿ ಅವರನ್ನೇ ಸಿಎಂ ಮಾಡಬೇಕು ಅಂತ ಹೈಕಮಾಂಡ್ ಸೂಚನೆ ನೀಡಿತ್ತು. ನಾವು ಎಲ್ಲ ಶಾಸಕರು ಬೊಮ್ಮಾಯಿ ಅವರ ಆಯ್ಕೆಯನ್ನು ಒಪ್ಪಿಕೊಂಡಿದ್ದೇವೆ. ರಾಜ್ಯದಲ್ಲಿ ಸಿಎಂ ಬದಲಾವಣೆ ಬಯಸಿದ್ದೆ. ಇಂದು ಸಿಎಂ ಬದಲಾವಣೆ ಆಗಿದ್ದರಿಂದಲೇ ಗಡ್ಡ ತೆಗೆದಿದ್ದೇನೆ ಎಂದು ರೆಬೆಲ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪಬ್ಲಿಕ್ ಟಿವಿಗೆ ಹೇಳಿದ್ದಾರೆ. ಇದನ್ನೂ ಓದಿ: ಬಸವರಾಜ ಬೊಮ್ಮಾಯಿ ಆಯ್ಕೆಗೆ ಕಾರಣಗಳೇನು?

The post ಸಿಎಂ ಆಯ್ಕೆಯಲ್ಲಿ ಯಡಿಯೂರಪ್ಪನವರ ಕೈ ಮೇಲಾದ್ರೆ ತಪ್ಪೇನಿದೆ?: ಈಶ್ವರಪ್ಪ appeared first on Public TV.

Source: publictv.in

Source link