ಮತ್ತೆ ಶುರುವಾಗ್ತಿದೆ ಕನ್ನಡಿಗರ ಹೃದಯ ಗೆದಿದ್ದ ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮ

ಮತ್ತೆ ಶುರುವಾಗ್ತಿದೆ ಕನ್ನಡಿಗರ ಹೃದಯ ಗೆದಿದ್ದ ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮ

ಕನ್ನಡಲ್ಲಿ ಸಿಂಗಿಂಗ್‌ ರಿಯಾಲಿಟಿ ಶೋಗಳು ಸಾಕಷ್ಟಿವೆ. ಸದ್ಯಕ್ಕೆ ಯಾವುದೇ ಸಿಂಗಿಂಗ್ ರಿಯಾಲಿಟಿ ಶೋ ಇಲ್ಲ. ಆದ್ರೆ, ಸಿಂಗಿಂಗ್ ರಿಯಾಲಿಟಿ ಶೋ ಅಂದಾಕ್ಷಣ ನೆನಪಾಗೋದೇ ‘ಎದೆ ತುಂಬಿ ಹಾಡುವೆನು’.

ಸ್ವತಃ ಎಸ್‌ಪಿ ಬಾಲಸುಬ್ರಮಣ್ಯಂ ಅವರೇ ತೀರ್ಪುಗಾರರಾಗಿದ್ದ ಈ ಶೋನ ಜನ ಇವತ್ತಿಗೂ ಮರೆತಿಲ್ಲ. ಎಷ್ಟೇ ಸಿಂಗಿಂಗ್ ರಿಯಾಲಿಟಿ ಶೋಗಳು ಬಂದರೂ ಬಾಲು ಸರ್‌ ಸಾಕ್ಷಿಯಾಗಿದ್ದ ಈ ರಿಯಾಲಿಟಿ ಶೋ ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ.

blank

ಈ ವೇದಿಕೆಯಿಂದ ಅನೇಕರು ಬೆಳಕಿಗೆ ಬಂದಿದ್ದಾರೆ. ನೂರಾರು ಸ್ಪರ್ಧಿಗಳಿಗೆ ಎಸ್‌.ಪಿ.ಬಾಲಸುಬ್ರಮಣ್ಯಂ ಅವರಿಂದ ಸಲಹೆ ಸೂಚನೆಗಳು ಸಿಕ್ಕಿವೆ. ಅವರಿಂದ ಪ್ರಶಂಸೆಯೂ ಸಿಕ್ಕಿದೆ. ಈ ಶೋಗೆ ಒಂದು ಪರಂಪರೆಯೇ ಇದೇ. ಆ ಪರಂಪರೆ ಎಸ್‌ಪಿಬಿ ಅವರ ಅನುಪಸ್ಥಿತಿಯಲ್ಲೂ ಮತ್ತೆ ಮುಂದುವರೆಯುತ್ತಿದೆ.

ಎದೆತುಂಬಿ ಹಾಡುವೆನು ಸಿಂಗಿಂಗ್ ರಿಯಾಲಿಟಿ ಶೋ ಮತ್ತೆ ಬರ್ತಿದೆ. ಕಲರ್ಸ್ ವಾಹಿನಿಯಲ್ಲಿ ಈ ಬಗ್ಗೆ ಅಧಿಕೃತ ಪ್ರೊಮೋ ರಿಲೀಸ್ ಆಗಿದೆ. ಆಸಕ್ತಿಯಿದ್ದವರು ಹಾಡುವ ವಿಡಿಯೋವನ್ನ ವಾಹಿನಿಗೆ ಕಳುಹಿಸಿದರೆ ಸಾಕು. ಆನ್‌ಲೈನ್‌ ಆಡಿಷನ್‌ ಮೂಲಕ ಸೆಲೆಕ್ಟ್ ಆದವರು ಮುಂದಿನ ರೌಂಡ್‌ಗೆ ಆಯ್ಕೆಯಾಗಲಿದ್ದಾರೆ. ಇನ್ನು ಕೆಲವೇ ತಿಂಗಳಲ್ಲಿ ಈ ಶೋ ಲಾಂಚ್ ಆಗೋ ಸಾಧ್ಯತೆ ಇದೆ. ಎಸ್‌ಪಿಬಿ ಆರಂಭಿಸಿದ ಪರಂಪರೆಯಲ್ಲಿ ಭಾಗಿಯಾಗಲು ಇಷ್ಟಪಡೋರು ಆನ್‌ಲೈನ್‌ ಆಡಿಷನ್‌ನಲ್ಲಿ ಭಾಗಿಯಾಗಬಹುದು.

The post ಮತ್ತೆ ಶುರುವಾಗ್ತಿದೆ ಕನ್ನಡಿಗರ ಹೃದಯ ಗೆದಿದ್ದ ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮ appeared first on News First Kannada.

Source: newsfirstlive.com

Source link