ಹೊಸ ಇತಿಹಾಸ ಸೃಷ್ಟಿಸಲು ರಾಜಮೌಳಿ ಗ್ಯಾಂಗ್ ರೆಡಿ.. ಐದೈದು ಭಾಷೆಗಳಲ್ಲಿ ರಿಲೀಸ್ ಆಗಲಿದೆ RRR ಸಾಂಗ್ಸ್​

ಹೊಸ ಇತಿಹಾಸ ಸೃಷ್ಟಿಸಲು ರಾಜಮೌಳಿ ಗ್ಯಾಂಗ್ ರೆಡಿ.. ಐದೈದು ಭಾಷೆಗಳಲ್ಲಿ ರಿಲೀಸ್ ಆಗಲಿದೆ RRR ಸಾಂಗ್ಸ್​

ಟಾಲಿವುಡ್ ಚಿತ್ರ ಬ್ರಹ್ಮ ರಾಜಮೌಳಿ ಥ್ರಿಬಲ್ ಆರ್ ಸಿನಿಮಾದ ಮೂಲಕ ದೊಡ್ಡ ಮಟ್ಟದ ಸೌಂಡ್ ಮಾಡಲು ಈಗಾಗಲೇ ಗುರಿ ಇಟ್ಟಾಗಿದೆ. ಆ ಗುರಿ ಎಂಥದ್ದು ಅಂದ್ರೆ ಈ ಹಿಂದೆ ಯಾರು ಮಾಡದ ರೀತಿಯ ಪ್ರಚಾರದ ಕಹಳೆಯನ್ನ ಮೊಳಗಿಸಲು ಮೌಳಿ ಗ್ಯಾಂಗ್ ಡಿಸೈಡ್ ಮಾಡಿದೆ.. ಥ್ರಿಬಲ್ ಆರ್ ಸಿನಿಮಾದ ಆಡಿಯೋ ಲಾಂಚ್ ಹೇಗಿರಲಿದೆ..? ಎಷ್ಟು ಹಾಡುಗಳಿರಲಿವೆ..? ಅನ್ನೋದೇ ಈಗ ಸ್ಪೆಷಲ್​ನಲ್ಲಿ ಸ್ಪೆಷಲ್​

ಪೊಸ್ಟರ್, ಟೀಸರ್, ಮೇಕಿಂಗ್ ಗಳನ್ನೆಲ್ಲ ಬಿಟ್ಟು ಚಿತ್ರಪ್ರೇಮಿಗಳ ಮನಸಿನಲ್ಲಿ ಕುತೂಹಲದ ಚಿಟ್ಟೆಯನ್ನ ಬಿಟ್ಟಿರೋ ಥ್ರಿಬಲ್ ಆರ್ ಸಿನಿ ಬಳಗ ಈಗ ಆಡಿಯೋದ ಮೂಲಕ ಪ್ರೇಕ್ಷಕರ ನಿರೀಕ್ಷೆಯ ಮಕರಂದವನ್ನ ಹೀರುವ ಕೆಲಸಕ್ಕೆ ಮುಂದಾಗುತ್ತಿದೆ.. ದಕ್ಷಿಣ ಭಾರತದ ಖ್ಯಾತ ಮ್ಯೂಸಿಕ್ ಕಂಪನಿ ಲಹರಿ ಆಡಿಯೋದ ಮೂಲಕ ಜನಮನಕ್ಕೆ ಐದೈದು ಭಾಷೆಗಳಲ್ಲಿ ‘ರಣ ರೌದ್ರ ರುಧಿರ’ ಸಿನಿಮಾದ ಹಾಡುಗಳ ಋಚಿ ಮುಟ್ಟಿಸೋ ಯೋಜನೆಯಲ್ಲಿರೋ ಥ್ರಿಬಲ್ ಆರ್ ಬಳಗ ಅದ್ಧೂರಿ ಪ್ರಮೋಷನ್ಸ್ ಪ್ಲಾನ್​​ಗಳನ್ನ ಮಾಡಿಕೊಂಡಿದೆ.

ಎಮ್​.ಎಮ್​.ಕೀರವಾಣಿ ಸಂಗೀತ ಸಂಯೋಜನೆಯಲ್ಲಿ RRR ಹಾಡುಗಳು ಮೂಡಿ ಬರುತ್ತಿವೆ.. ಒಟ್ಟು ಐದು ಹಾಡುಗಳನ್ನ ಐದೈದು ಭಾಷೆಗಳಲ್ಲಿ ಬಿಡುಗಡೆ ಮಾಡೋ ಪ್ಲಾನ್​​ನಲ್ಲಿ ಚಿತ್ರತಂಡವಿದೆ.. ವಿಶ್ವದ ಪ್ರಮುಖ ಐದು ನಗರಗಳಲ್ಲಿ ಥ್ರಿಬಲ್ ಆರ್ ಸಿನಿಮಾದ ಒಂದೊಂದೆ ಹಾಡುಗಳನ್ನ ಬಿಡುಗಡೆ ಮಾಡಿ ವಿಶ್ವ ಮಟ್ಟದಲ್ಲಿ ಸದ್ದು ಮಾಡಲು ಮೌಳಿ ಸಿನಿಗ್ಯಾಂಗ್ ಪ್ಲಾನ್ ರೂಪಿಸಿದೆ.

ಒಂದು ಮೂಲಗಳ ಪ್ರಕಾರ ಉಕ್ರೇನ್​​​ನಲ್ಲಿ ರಾಜ್ ಮೌಳಿ ಸಿನಿಗ್ಯಾಂಗ್ ನಿಂತಿದೆ. ಕಾರಣ ಸಿನಿಮಾ ಪ್ಯಾಚ್ ವರ್ಕ್ ಶೂಟಿಂಗ್ ಆಗುತ್ತಿದೆಯಂತೆ.. ಆಗಸ್ಟ್ ಒಂದನೇ ತಾರೀಖ್ ಥ್ರಿಬಲ್ ಆರ್ ತಂಡದಿಂದ ಮತ್ತೊಂದು ಸರ್ಪ್ರೈಸ್ ಉಡುಗೊರೆ ಹೊರ ಬರುತ್ತಿದೆ  ಅನ್ನೋದನ್ನ ಕಾದು ನೋಡ್ಬೇಕು.

The post ಹೊಸ ಇತಿಹಾಸ ಸೃಷ್ಟಿಸಲು ರಾಜಮೌಳಿ ಗ್ಯಾಂಗ್ ರೆಡಿ.. ಐದೈದು ಭಾಷೆಗಳಲ್ಲಿ ರಿಲೀಸ್ ಆಗಲಿದೆ RRR ಸಾಂಗ್ಸ್​ appeared first on News First Kannada.

Source: newsfirstlive.com

Source link