ಯಡಿಯೂರಪ್ಪನವರಿಗೆ ಈಗ ಮದ್ವೆ ಮಾಡಿದ್ರೂ 2 ಮಕ್ಕಳು ಮಾಡುವ ಶಕ್ತಿ ಇದೆ: ಇಬ್ರಾಹಿಂ

– ಒತ್ತಡ ಹಾಕಿ ರಾಜೀನಾಮೆ ಪಡೆದಿರುವುದು ಸತ್‍ಸಂಪ್ರದಾಯವಲ್ಲ

ಬೆಂಗಳೂರು: ಒತ್ತಡ ಹಾಕಿ ಯಡಿಯೂರಪ್ಪನವರ ರಾಜೀನಾಮೆ ಪಡೆದಿರುವುದು ಒಳ್ಳೆಯ ಸಂಪ್ರದಾಯವಲ್ಲ ಎಂದು ಕಾಂಗ್ರೆಸ್ ಮುಖಂಡ ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ.

ಕಾವೇರಿ ನಿವಾಸಕ್ಕೆ ಆಗಮಿಸಿ ಯಡಿಯೂರಪ್ಪ ಭೇಟಿ ಮಾಡಿದ ಬಳಿಕ ಮಾಧ್ಯಮದವರೊಂಧಿಗೆ ಮಾತನಾಡಿದ ಅವರು, ಏಕಾಏಕಿ ಒತ್ತಡ ಹಾಕಿ ರಾಜೀನಾಮೆ ಪಡೆಯದಿರುವುದು ಒಳ್ಳೆಯ ಸಂಪ್ರದಾಯವಲ್ಲ. ಇದೀಗ ಯಡಿಯೂರಪ್ಪನವರನ್ನು ಭೇಟಿಯಾದ ಲವಲವಿಕೆಯಿಂದ ಇದ್ದಾರೆ. ನಮ್ಮ ಜಿಲ್ಲೆಯವರೇ ಅವರು. ಆರೋಗ್ಯ ಕಾಪಾಡಿಕೊಳ್ಳಿ, ರಾಜ್ಯಪಾಲ ಹುದ್ದೆಯನ್ನು ಬೇಡವೆಂದು ಹೇಳಿದ್ದೀರಿ. ಲೋಪದೋಷಗಳಿರಬಹುದು, ಆರೋಪ ಪ್ರತ್ಯಾರೋಪಗಳು ಇರಬಹುದು. ರಾಜ್ಯ ಹಿತದೃಷ್ಟಿಯಿಂದ ಸ್ವಾಭಿಮಾನ ಕಾಪಾಡಿಕೊಳ್ಳುವುದು ಮುಖ್ಯ ಎಂದರು.

ಯಡಿಯೂರಪ್ಪನವರಿಗೆ ಈಗ ಮದುವೆ ಮಾಡಿದರೂ ಎರಡು ಮಕ್ಕಳು ಮಾಡುವ ಶಕ್ತಿ ಇದೆ. ಫುಲ್ ಆಕ್ಟಿವ್ ಆಗಿದ್ದಾರೆ. ಕೆಲವು ಲೋಪದೋಷಗಳು ಇರಬಹುದು. ಆದರೆ, ರಾಜ್ಯದ ದೃಷ್ಟಿಯಿಂದ ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದರು.

ಸಿಎಂ ಆಗಿದ್ದಾಗ ಯಡಿಯೂರಪ್ಪನವರನ್ನು ಎಂದೂ ಭೇಟಿ ಮಾಡಿರಲಿಲ್ಲ. ನಮ್ಮ ಜಿಲ್ಲೆಯವರು, ಮಲೆನಾಡಿವರು ಎಂಬ ಕಾರಣಕ್ಕೆ ಬಂದಿದ್ದೇನೆ. ಓರಜಿನಲ್ ಗಿರಾಕಿ ಹೋದ ಮೇಲೆ ಡೂಪ್ಲಿಕೇಟ್ ಗಿರಾಕಿ ಬಂದರೇನು ಎಂದು ನಾಯಕತ್ವ ಬದಲಾವಣೆ ಕುರಿತು ವ್ಯಂಗ್ಯವಾಡಿದ್ದಾರೆ.

The post ಯಡಿಯೂರಪ್ಪನವರಿಗೆ ಈಗ ಮದ್ವೆ ಮಾಡಿದ್ರೂ 2 ಮಕ್ಕಳು ಮಾಡುವ ಶಕ್ತಿ ಇದೆ: ಇಬ್ರಾಹಿಂ appeared first on Public TV.

Source: publictv.in

Source link