ನೂತನ CM ಬೊಮ್ಮಾಯಿ ಆಯ್ಕೆ ಬಗ್ಗೆ ನನಗೇನೂ ಬೇಜಾರಿಲ್ಲ -ಅರವಿಂದ್ ಬೆಲ್ಲದ್

ನೂತನ CM ಬೊಮ್ಮಾಯಿ ಆಯ್ಕೆ ಬಗ್ಗೆ ನನಗೇನೂ ಬೇಜಾರಿಲ್ಲ -ಅರವಿಂದ್ ಬೆಲ್ಲದ್

ಬೆಂಗಳೂರು: ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬಲ್ಲ, ಯುಕ್ತಿಯುಳ್ಳ, ಶಕ್ತಿಯುಳ್ಳ ಉತ್ತಮ ನಾಯಕ ಬಸವರಾಜ್ ಬೊಮ್ಮಾಯಿ. ನನಗೆ ವೈಯಕ್ತಿಕವಾಗಿ ಬೊಮ್ಮಾಯಿ ಅವರು ಬಹಳ ಆತ್ಮೀಯರು. ಅವರು ಬಿಜೆಪಿಗೆ ಹೊಸ ನಾಯಕರಾಗಿ, ಮುಖ್ಯಮಂತ್ರಿಯಾಗುತ್ತಾರೆ ಅನ್ನೋದು ತುಂಬಾ ಖುಷಿ ವಿಚಾರ ಅಂತಾ ಶಾಸಕ ಅರವಿಂದ್ ಬೆಲ್ಲದ್ ಹೇಳಿದ್ದಾರೆ.

ನನಗೆ ಅವರ ಮೇಲೆ ತುಂಬಾ ನಂಬಿಕೆ ಇದೆ. ರಾಜ್ಯಕ್ಕೆ ಹೊಸ ರೂಪ, ಹೊಸ ಚೇತನವನ್ನ ಕೊಟ್ಟು 2023 ರಲ್ಲಿ ಬರುವ ಎಲೆಕ್ಷನ್​ನಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ. ಜನ ಮೆಚ್ಚುವ ಆಡಳಿತವನ್ನ ನೀಡುತ್ತಾರೆ. ಅವರ ತಾಯಿಯ ಹೆಸರು ಗಂಗಮ್ಮ. ಅವರ ಆಸಕ್ತಿ ಕ್ಷೇತ್ರ ಅಂದ್ರೆ ನೀರಾವರಿ. ಅವರು ಉತ್ತಮ ಇಂಜಿನಿಯರ್. ಹಾಗಾಗಿ ಉದ್ಯೋಗ ಸೃಷ್ಟಿ ಮಾಡುವ ತಾಖತ್ತು ಕೂಡ ಇದೆ. ಹಾಗೂ ಅವರ ಮನಸ್ಸಿಗೆ ಪ್ರೀತಿ ಇರುವ ನೀರಾವರಿಯಲ್ಲಿ ವಿಚಾರದಲ್ಲಿ ಉತ್ತಮ ಕೆಲಸ ಮಾಡಲಿದ್ದಾರೆ. ಇದರ ಮೂಲಕ ರೈತರಿಗೆ ಒಳ್ಳೆಯದಾಗಲಿದೆ. ಈ ಮೂಲಕ ಕರ್ನಾಟಕ ಬಾಗಿಲನ್ನ ಮತ್ತೊಮ್ಮೆ ತೆರೆಯುತ್ತಾರೆ ಅನ್ನೋ ವಿಶ್ವಾಸ ವ್ಯಕ್ತಪಡಿಸಿದರು.

ಪಕ್ಷದ ನಾಯಕರು ಏನು ನಿರ್ಧಾರವನ್ನ ತೆಗೆದುಕೊಂಡಿದ್ದಾರೆ, ಅದನ್ನ ನಾವು ಸ್ವಾಗತ ಮಾಡ್ತೇನೆ. ನಾನೊಬ್ಬ ಪಕ್ಷದ ಕಾರ್ಯಕರ್ತನಷ್ಟೇ. ಪಕ್ಷ ಏನ್ ಜವಾಬ್ದಾರಿ ನೀಡುತ್ತೋ ಅದನ್ನ ಖುಷಿಯಿಂದ ನಿಭಾಯಿಸುತ್ತೇನೆ ಎಂದರು.

The post ನೂತನ CM ಬೊಮ್ಮಾಯಿ ಆಯ್ಕೆ ಬಗ್ಗೆ ನನಗೇನೂ ಬೇಜಾರಿಲ್ಲ -ಅರವಿಂದ್ ಬೆಲ್ಲದ್ appeared first on News First Kannada.

Source: newsfirstlive.com

Source link