ಚಿತ್ರೀಕರಣದ ವೇಳೆ ಕಾಮಿಡಿ ಕಿಲಾಡಿಗಳು ಖ್ಯಾತಿಯ ಗೋವಿಂದೇಗೌಡಗೆ ಅಪಘಾತ

ಚಿತ್ರೀಕರಣದ ವೇಳೆ ಕಾಮಿಡಿ ಕಿಲಾಡಿಗಳು ಖ್ಯಾತಿಯ ಗೋವಿಂದೇಗೌಡಗೆ ಅಪಘಾತ

ಚಿತ್ರೀಕರಣದ ವೇಳೆ ಸಂಭವಿಸಿದ ಅಪಘಾತದಲ್ಲಿ ಕಾಮಿಡಿ ಕಿಲಾಡಿ ಖ್ಯಾತಿಯ ನಟ ಗೋವಿಂದೇಗೌಡ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿ ಡಿಶ್ವಾರ್ಜ್​ ಆಗಿದ್ದಾರೆ.

ಇಂದು ಸಂಜೆ ಯೋಗರಾಜ್ ಭಟ್ ಅವರ ‘ಆದ್ದರಿಂದ’ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದಾಗ ಅಪಘಾತ ಸಂಭವಿಸಿದೆ. ಕೂಡಲೇ ಅವರನ್ನ ಬಿಜಿಎಸ್​ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿಲಾಗಿದೆ. ವರದಿಗಳ ಪ್ರಕಾರ ಗೋವಿಂದೇಗೌಡರ ಹೊಟ್ಟೆಗೆ ಪೆಟ್ಟು ಬೆದ್ದಿದೆ. ಕಾರಿನ ಸಾಹಸ ದೃಶ್ಯ ಒಂದರ ಚಿತ್ರೀಕರಣ ಮಾಡುವಾಗ ಅವಘಡ ಸಂಭವಿಸಿದೆ. ಗೋವಿಂದೇಗೌಡ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಒಂದು ಚಿಕ್ಕ ಅಪಘಾತವಾಗಿದೆ. ಗೋವಿಂದೇಗೌಡ ಆರಾಮಾಗಿದ್ದಾರೆ. ಚಿಕಿತ್ಸೆ ಬಳಿಕ ಮತ್ತೆ ಅವರು ಚಿತ್ರೀಕರಣಕ್ಕೆ ಮರಳಿದ್ದಾರೆ. ಈಗಷ್ಟೇ ನಾವೆಲ್ಲರೂ ಚಿತ್ರೀಕರಣ ಮುಗಿಸಿ ವಾಪಸ್ ಬಂದಿದ್ದೇವೆ

-ಯೋಗರಾಜ್ ಭಟ್, ನಿರ್ದೇಶಕ

ಇನ್ನು ಕಿರುತೆರೆಯಲ್ಲಿ ಜಿಜಿ (ಗೋವಿಂದೇಗೌಡ) ಎಂದೇ ಪರಿಚಿತರಾಗಿದ್ದಾರೆ.  ಈ ಬಗ್ಗೆ ಟ್ವೀಟ್ ಮಾಡಿರುವ ಜಗ್ಗೇಶ್​.. ಕಾಮಿಡಿ ಕಿಲಾಡಿ ಖ್ಯಾತಿಯ ನಟ GG ಗೋವಿಂದೆಗೌಡನಿಗೆ ಚಿತ್ರಿಕರಣ ಸಮಯದಲ್ಲಿ ಅಪಘಾತವಾಗಿ BGS ಆಸ್ಪತ್ರೆಯಲ್ಲಿ ದಾಖಲಾಗಿರುವ ದಯಮಾಡಿ ಅವನಿಗೆ ಏನು ಆಗದಂತೆ ನೀವು ಪ್ರಾರ್ಥನೆ ಮಾಡಿ.. ನಾನು ಗಣಪತಿಗೆ ಪ್ರಾರ್ಥಿಸಿ ಆಸ್ಪತ್ರೆಗೆ ಹೊರಟೆ ಎಂದು ತಿಳಿಸಿದ್ದಾರೆ.

The post ಚಿತ್ರೀಕರಣದ ವೇಳೆ ಕಾಮಿಡಿ ಕಿಲಾಡಿಗಳು ಖ್ಯಾತಿಯ ಗೋವಿಂದೇಗೌಡಗೆ ಅಪಘಾತ appeared first on News First Kannada.

Source: newsfirstlive.com

Source link