ಸೋತು, ಗೆದ್ದರ ಬಿ.ಎಸ್‌.ಯಡಿಯೂರಪ್ಪ.. ಸಿಎಂ ಆಯ್ಕೆಯಲ್ಲಿ ಮೇಲುಗೈ!

ಸೋತು, ಗೆದ್ದರ ಬಿ.ಎಸ್‌.ಯಡಿಯೂರಪ್ಪ.. ಸಿಎಂ ಆಯ್ಕೆಯಲ್ಲಿ ಮೇಲುಗೈ!

ಬೆಂಗಳೂರು: ನೂತನ ಮುಖ್ಯಮಂತ್ರಿಯಾಗಿ ಬಸವರಾಜ್‌ ಬೊಮ್ಮಾಯಿ ಆಯ್ಕೆಯಾಗಿದ್ದಾರೆ. ನಿನ್ನೆ ನಡೆದ ಶಾಸಕಾಂಗ ಸಭೆಯಲ್ಲಿ ಬಿಜೆಪಿ ಕೇಂದ್ರದ ನಾಯಕ ಧರ್ಮೇಂದ್ರ ಪ್ರಧಾನ್, ಬೊಮ್ಮಾಯಿ ಅವರ ಹೆಸರನ್ನ ಅಧಿಕೃತವಾಗಿ ಘೋಷಣೆ ಮಾಡೋ ಮೂಲಕ ನೂತನ ಸಿಎಂ ಆಗಿ ಬೊಮ್ಮಾಯಿ ಅವ್ರನ್ನು ಆಯ್ಕೆ ಮಾಡಲಾಗಿದೆ. ಆದ್ರೆ, ನೂತನ ಮುಖ್ಯಮಂತ್ರಿ ಆಯ್ಕೆ, ಬಿಎಸ್‌ವೈ ಅವರು ಮೇಲುಗೈ ಸಾಧಿಸುವಂತೆ ಮಾಡಿದೆ.

ಯಾವಾಗ ನಿನ್ನೆ ಬಿ.ಎಸ್‌.ಯಡಿಯೂರಪ್ಪ ರಾಜೀನಾಮೆ ಘೋಷಿಸುತ್ತಿದ್ದಂತೆ ಮುಂದಿನ ಮುಖ್ಯಮಂತ್ರಿ ಯಾರು ಅನ್ನೋ ಕುತೂಹಲ ಎಲ್ಲರಲ್ಲೂ ಇತ್ತು. ಬಿಎಸ್‌ವೈ ವಿರೋಧಿ ಬಣದಲ್ಲಿ ಸಿಎಂ ಆಗುತ್ತಾರಾ? ಇಲ್ಲಾ ಬಿಎಸ್‌ವೈ ಬಣದವ್ರೇ ಅಧಿಕಾರ ಸ್ವೀಕರಿಸುತ್ತಾರಾ ಅನ್ನೋ ಪ್ರಶ್ನೆ ಇತ್ತು. ಇವತ್ತು ಆ ಎಲ್ಲಾ ಪ್ರಶ್ನೆಗೆ ಉತ್ತರ ಸಿಕ್ಕಿದ್ದು, ಬಿಎಸ್‌ವೈ ಅತ್ಯಾಪ್ತ ಬಳಗದವ್ರಿಗೆ ಹೈಕಮಾಂಡ್‌ ಮಣೆ ಹಾಕಿದೆ. ಈ ಮೂಲಕ ಬಿ.ಎಸ್‌.ಯಡಿಯೂರಪ್ಪನವ್ರು ಮುಖ್ಯಮಂತ್ರಿ ಆಯ್ಕೆಯಲ್ಲಿ ಮೇಲುಗೈ ಸಾಧಿಸಿದ್ದಾರೆ.

blank

ತಾವು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದರೂ ತಮ್ಮದೇ ಬಣದವರನ್ನು ಸಿಎಂ ಆಗಿ ಆಯ್ಕೆ ಮಾಡುವಲ್ಲಿ ಯಡಿಯೂರಪ್ಪ ಯಶಸ್ವಿಯಾಗಿದ್ದಾರೆ. ವಿರೋಧಿಗಳ ತಂತ್ರಕ್ಕೆ ಪ್ರತಿತಂತ್ರವಾಗಿ ಬಸವರಾಜ್‌ ಬೊಮ್ಮಾಯಿ ಅವ್ರನ್ನು ಆಯ್ಕೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದೆಲ್ಲದರ ಜೊತೆಗೆ ಜೋಡೆತ್ತು ಖ್ಯಾತಿಯ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ್ರೆ, ಇತ್ತ ಆರ್​.ಅಶೋಕ್‌ ಉಪಮುಖ್ಯಮಂತ್ರಿ ಆಯ್ಕೆಯಾಗಿದ್ದಾರೆ. ತಮ್ಮದೇ ಆಪ್ತ ಬಳಗದಲ್ಲಿದ್ದ ಮತ್ತೊಬ್ಬ ಗೋವಿಂದ ಕಾರಜೋಳ ಕೂಡ ಉಪಮುಖ್ಯಮಂತ್ರಿಯಾಗಿ ಮುಂದುವರೆದಿದ್ದಾರೆ. ಬಿಎಸ್‌ವೈ ಸಿಎಂ ಸ್ಥಾನದಿಂದ ಕೆಳಗೆ ಇಳಿದ್ರೂ ಕೂಡಾ ಅವ್ರ ಆಪ್ತ ಬಳಗವೇ ಅಧಿಕಾರಕ್ಕೇರಿದ್ದು, ಯಡಿಯೂರಪ್ಪ ಸೋತು ಗೆದ್ದಂತಾಗಿದೆ.

ಇದನ್ನೂ ಓದಿ: ರಾಜ್ಯದ ನೂತನ ಸಿಎಂ ಆಗಿ ಬಸವರಾಜ್ ಬೊಮ್ಮಾಯಿ ಆಯ್ಕೆ

The post ಸೋತು, ಗೆದ್ದರ ಬಿ.ಎಸ್‌.ಯಡಿಯೂರಪ್ಪ.. ಸಿಎಂ ಆಯ್ಕೆಯಲ್ಲಿ ಮೇಲುಗೈ! appeared first on News First Kannada.

Source: newsfirstlive.com

Source link